ತೆಲುಗು ನಟರಿಗೆ ಡ್ರಗ್ಸ್ ಪರೀಕ್ಷೆ ಕಡ್ಡಾಯ ಮಾಡಿ: ವಿವಾದ ಎಬ್ಬಿಸಿದ ಶಾಸಕನ ಹೇಳಿಕೆ

Tollywood star: ಡ್ರಗ್ಸ್ ಜೊತೆಗೆ ಚಿತ್ರರಂಗವನ್ನು ಸದಾ ಲಿಂಕ್ ಮಾಡಲಾಗುತ್ತದೆ. ಇದು ಒಂದು ಹಂತಕ್ಕೆ ನಿಜವಾದರೂ ಎಲ್ಲರೂ ಹೀಗೆಯೇ ಇರುತ್ತಾರೆ ಎಂದೇನೂ ಇಲ್ಲ. ಇದೀಗ ತೆಲಂಗಾಣದ ಶಾಸಕನೋರ್ವ ತೆಲುಗು ಚಿತ್ರರಂಗದ ಸ್ಟಾರ್ ನಟರುಗಳ ಬಗ್ಗೆ ನೀಡಿರುವ ಹೇಳಿಕೆ ತೀವ್ರ ವಿವಾದ ಎಬ್ಬಿಸಿದೆ. ಶಾಸಕನ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ತೆಲುಗು ನಟರಿಗೆ ಡ್ರಗ್ಸ್ ಪರೀಕ್ಷೆ ಕಡ್ಡಾಯ ಮಾಡಿ: ವಿವಾದ ಎಬ್ಬಿಸಿದ ಶಾಸಕನ ಹೇಳಿಕೆ
Tollywood

Updated on: Apr 02, 2026 | 11:52 AM

ಚಿತ್ರರಂಗದವರು (Movie Industry) ಎಂದೊಡನೆ ಪಾರ್ಟಿ ಮಾಡುವವರು, ಐಶಾರಾಮಿ, ಸ್ವೇಚ್ಛೆಯ ಜೀವನ ನಡೆಸುವವರ ಎಂಬ ಕಲ್ಪನೆ ಹಲವರಿಗಿದೆ. ಅದರಲ್ಲೂ ಡ್ರಗ್ಸ್ ಜೊತೆಗೆ ಚಿತ್ರರಂಗವನ್ನು ಸದಾ ಲಿಂಕ್ ಮಾಡಲಾಗುತ್ತದೆ. ಇದು ಒಂದು ಹಂತಕ್ಕೆ ನಿಜವಾದರೂ ಎಲ್ಲರೂ ಹೀಗೆಯೇ ಇರುತ್ತಾರೆ ಎಂದೇನೂ ಇಲ್ಲ. ಇದೀಗ ತೆಲಂಗಾಣದ ಶಾಸಕನೋರ್ವ ತೆಲುಗು ಚಿತ್ರರಂಗದ ಸ್ಟಾರ್ ನಟರುಗಳ ಬಗ್ಗೆ ನೀಡಿರುವ ಹೇಳಿಕೆ ತೀವ್ರ ವಿವಾದ ಎಬ್ಬಿಸಿದೆ. ಶಾಸಕನ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ತೆಲಂಗಾಣದ ಕಾಂಗ್ರೆಸ್ ಶಾಸಕ ಅನಿರುದ್ಧ್ ರೆಡ್ಡಿ ಇತ್ತೀಚೆಗೆ ಮಾತನಾಡಿ, ‘ತೆಲುಗು ಚಿತ್ರರಂಗದ ಎಲ್ಲ ಪ್ರಮುಖ ಸ್ಟಾರ್ ನಟರುಗಳು ಅವರ ಸಿನಿಮಾ ಬಿಡುಗಡೆ ಮಾಡುವ ಮುಂಚೆ ಡ್ರಗ್ಸ್ ಪರೀಕ್ಷೆಗೆ ಒಳಗಾಗಬೇಕು’ ಎಂದಿದ್ದರು. ಆ ಮೂಲಕ ಸ್ಟಾರ್ ನಟರನ್ನು ಡ್ರಗ್ಸ್ ವ್ಯಸನಿಗಳು ಎಂಬರ್ಥದ ಮಾತುಗಳನ್ನು ಆಡಿದ್ದರು. ಅನಿರುದ್ಧ್ ರೆಡ್ಡಿ ಅವರ ಈ ಹೇಳಿಕೆಗೆ ತೀವ್ರ ಆಕ್ರೋಶವನ್ನು ನಟರ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳ ವಿರುದ್ಧ ಡ್ರಗ್ಸ್ ಪ್ರಕರಣಗಳು ದಾಖಲಾಗಿದ್ದನ್ನು ಅನಿರುದ್ಧ್ ರೆಡ್ಡಿಗೆ ನೆನಪಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾ ಅಧ್ಯಕ್ಷ ಮಂಚು ವಿಷ್ಣು, ‘ನಟರಿಗೆ ಇಂತಹ ನಿಯಮಗಳನ್ನು ಜಾರಿಗೆ ತರುವುದಾದರೆ, ರಾಜಕಾರಣಿಗಳಿಗೂ ಕೂಡ ಚುನಾವಣೆಗೂ ಮುನ್ನ ಇದೇ ರೀತಿಯ ಪರೀಕ್ಷೆಗಳನ್ನು ನಡೆಸಬೇಕು’ ಎಂದಿದ್ದಾರೆ. ಇದೇ ವಿಷಯವಾಗಿ ನಟ ರಾಹುಲ್ ರಾಮಕೃಷ್ಣ ಕೂಡ ಪ್ರತಿಕ್ರಿಯಿಸಿದ್ದು, ‘ನಾನು ಡ್ರಗ್ ಟೆಸ್ಟ್‌ಗೆ ಸಿದ್ಧನಿದ್ದೇನೆ, ಆದರೆ ರಾಜಕಾರಣಿಗಳು ನಿಯಮಿತವಾಗಿ ಲೈ ಡಿಟೆಕ್ಟರ್ (ಸುಳ್ಳು ಪತ್ತೆ) ಪರೀಕ್ಷೆಗೆ ಒಳಗಾಗಬೇಕು’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಟಾಲಿವುಡ್ ಬಗ್ಗೆ ಅಸಮಾಧಾನ? ಜೂ ಎನ್​​ಟಿಆರ್-ನೀಲ್ ಸಿನಿಮಾ ಆಫರ್ ತಿರಸ್ಕರಿಸಿದ ನಟ

ಇತ್ತೀಚೆಗಷ್ಟೆ ರೋಹಿತ್ ರೆಡ್ಡಿಯ ಫಾರ್ಮ್​​ ಹೌಸ್​​ ಮೇಲೆ ನಡೆದ ದಾಳಿಯಲ್ಲಿ ಕೆಲ ರಾಜಕಾರಣಿಗಳು ಡ್ರಗ್ಸ್ ಸೇವಿಸಿ ಸಿಕ್ಕಿ ಹಾಕಿಕೊಂಡಿದ್ದರು. ಅದರಲ್ಲಿ ಶಾಸಕರು ಮತ್ತು ಸಂಸದರು ಸಹ ಇದ್ದರು. ಆದರೆ ಈಗ ಶಾಸಕರೊಬ್ಬರು ಸಿನಿಮಾ ರಂಗದವರು ಡ್ರಗ್ಸ್ ವ್ಯಸನಿಗಳು ಎಂದಿರುವುದು ಸಿನಿಮಾ ರಂಗದವರಿಗೆ ಸಿಟ್ಟು ತರಿಸಿದೆ. ಅವರ ಅಭಿಮಾನಿಗಳಿಗೂ ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us