
ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ (Coolie Movie) ಆಗಸ್ಟ್ 14ರಂದು ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಸ್ಟಾರ್ಗಳ ಸಮಾಗಮ ಆಗಿದೆ. ಚಿತ್ರದ ಟ್ರೇಲರ್ ನೋಡಿದರೆ ಇದೊಂದು ಪಕ್ಕಾ ಗ್ಯಾಂಗ್ಸ್ಟರ್ ಚಿತ್ರ ಅನ್ನೋದು ಗೊತ್ತಾಗುತ್ತದೆ. ಈ ಸಿನಿಮಾದಲ್ಲಿ ರಜನಿ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. 74ನೇ ವಯಸ್ಸಿನಲ್ಲೂ ಅವರು ಭರ್ಜರಿ ಆ್ಯಕ್ಷನ್ ಮಾಡಿದ್ದಾರೆ. ಈಗ ಸಿನಿಮಾದ ವಿಶೇಷ ಶೋ ನೋಡಿದ ಫ್ಯಾನ್ಸ್ ಇದರ ವಿಮರ್ಶೆ ತಿಳಿಸುತ್ತಿದ್ದಾರೆ. ರಜನಿಕಾಂತ್ ಚಿತ್ರವನ್ನು ಅನೇಕರು ಹೊಗಳಿದ್ದಾರೆ.
‘ಕೂಲಿ’ ಸಿನಿಮಾ ನಿರೀಕ್ಷೆ ಮೂಡಿಸಲು ಹಲವು ಕಾರಣಗಳಿವೆ. ಈ ಸಿನಿಮಾಗೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಜನಿ ಜೊತೆ ಕನ್ನಡದ ಉಪೇಂದ್ರ, ಮಲಯಾಳಂನ ಸೌಬಿನ್ ಶಾಹಿರ್, ನಾಗಾರ್ಜುನ, ಶ್ರುತಿ ಹಾಸನ್, ಸತ್ಯರಾಜ್, ಆಮಿರ್ ಖಾನ್ ನಟಿಸಿದ್ದಾರೆ. ಇದು ಚಿತ್ರದ ಹೈಲೈಟ್. ಸದ್ಯ ರಿಲೀಸ್ ಆಗಿರೋ ಟ್ರೇಲರ್ ಹಲ್ಚಲ್ ಎಬ್ಬಿಸಿದೆ. ಸಿನಿಮಾ ರಿಲೀಸ್ಗೆ ಒಂದು ವಾರ ಇರುವಾಗ ಸಿನಿಮಾ ಅಬ್ಬರಿಸಲು ರೆಡಿ ಆಗುತ್ತಿದೆ.
‘10 ವರ್ಷಗಳಲ್ಲಿ ರಜನಿಕಾಂತ್ ಅವರು ಅದ್ಭುತ ಪರ್ಫಾರ್ಮೆನ್ಸ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನು ಇಡೀ ಚಿತ್ರಕ್ಕೆ ನಾಗಾರ್ಜುನ ಅವರು ಬ್ಯಾಕ್ಬೋನ್ ಎಂದು ಅವರ ಅಭಿಮಾನಿಗಳು ಕರೆದಿದ್ದಾರೆ. ಆಮಿರ್ ಖಾನ್ ಅವರ ವಿಶೇಷ ಅತಿಥಿ ಪಾತ್ರ ಚಿತ್ರದ ಕಳೆ ಹೆಚ್ಚಿಸಿದೆ ಎಂದು ಫ್ಯಾನ್ಸ್ ಹೇಳಿಕೊಂಡಿದ್ದಾರೆ.
ಕನ್ನಡದ ಉಪೇಂದ್ರ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎನ್ನಲಾಗಿದೆ. ಇನ್ನು, ಶ್ರುತಿ ಹಾಸನ್ ಅವರು ಈ ಸಿನಿಮಾದಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸಿದ್ದಾರೆ ಎಂದು ಸಿನಿಮಾ ನೋಡಿದ ಫ್ಯಾನ್ಸ್ ಬರೆದುಕೊಂಡಿದ್ದಾರೆ.
#Coolie – INSIDE REPORTS: MASS 🔥
LOKI COOKED 🧨🔥#Rajinikanth𓃵 Best Perfomance Loading After Kabali ✅#ShrutiHaasan is Main Highlight of Film ✅#Nagarjuna is Backbone of This Film ✅❤️🔥#AamirKhan Cameo Will Turned Theatre Into Stadium💥🥵
There is A Big Surprise😉
— ALEX (@OnlyCinema_post) August 5, 2025
Coolie Movie Review #Coolie#CoolieReview #AamirKhan #Rajinikanth #NagarjunaAkkineni #ShrutiHaasanHot #LokeshKanagaraj #Anirudh pic.twitter.com/LIZafzqzlU
— Varinder Sinngh (@varindersingh24) July 15, 2025
‘ಕೂಲಿ’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಚೆನ್ನೈನಲ್ಲಿ ಓಪನ್ ಆಗಿದೆ. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾಗೆ ಒಳ್ಳೆಯ ರೀತಿಯಲ್ಲಿ ಬುಕಿಂಗ್ ಆಗುತ್ತಿದ್ದು, ಫ್ಯಾನ್ಸ್ ಖುಷಿ ಹೆಚ್ಚಿಸಿದೆ. ಬೆಂಗಳೂರಿನಲ್ಲಿ ಸೋಮವಾರದ ಬಳಿಕ ‘ಕೂಲಿ’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ‘ವಾರ್ 2’ vs ‘ಕೂಲಿ’: ಯಾವ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಹೆಚ್ಚಿದೆ?
ತಮಿಳು ನಾಡಿನಲ್ಲಿ ಮಾರ್ನಿಂಗ್ ಶೋಗಳನ್ನು ಕ್ಯಾನ್ಸಲ್ ಮಾಡಲಾಗಿದೆ. 2023ರಲ್ಲಿ ಫಸ್ಟ್ ಡೇ ಫಸ್ಟ್ ಶೋ ನೋಡಲು ಬಂದ ಅಭಿಮಾನಿ ಕಾಲ್ತುಳಿತದಲ್ಲಿ ಅಸುನೀಗಿದ್ದರು. ಇದಾದ ಬಳಿಕ ಫ್ಯಾನ್ ಶೋ ಕ್ಯಾನ್ಸಲ್ ಮಾಡಲಾಗಿದೆ. 9 ಗಂಟೆ ಬಳಿಕವೇ ಶೋಗಳು ಪ್ರದರ್ಶನ ಕಾಣಲಿವೆ. ಈ ಸಿನಿಮಾ ಎ ಸರ್ಟಿಫಿಕೇಟ್ ಹೊಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:38 am, Sat, 9 August 25