ಫ್ರಂಟ್​ಲೈನ್​ ವರ್ಕರ್​ ಎಂದು ಸುಳ್ಳು ಹೇಳಿ ಲಸಿಕೆ ಪಡೆದ ದರ್ಶನ್​ ಚಿತ್ರದ ನಾಯಕಿ?

ಕೇಂದ್ರ ಸರ್ಕಾರ ಇತ್ತೀಚೆಗೆ 18-45 ವರ್ಷ ವಯೋಮಿತಿಯವರಿಗೆ ಕೊರೊನಾ ಲಸಿಕೆ ನೀಡಲು ಅವಕಾಶ ನೀಡಿತ್ತು. ಇದಕ್ಕಾಗಿ ಆನ್​ಲೈನ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿತ್ತು. ಅನೇಕರು ನೋಂದಣಿ ಮಾಡಿಕೊಂಡು, ತಮ್ಮ ಸರದಿ ಬಂದಾಗ ಲಸಿಕೆ ಪಡೆದಿದ್ದಾರೆ.

ಫ್ರಂಟ್​ಲೈನ್​ ವರ್ಕರ್​ ಎಂದು ಸುಳ್ಳು ಹೇಳಿ ಲಸಿಕೆ ಪಡೆದ ದರ್ಶನ್​ ಚಿತ್ರದ ನಾಯಕಿ?
ಮೀರಾ ಚೋಪ್ರಾ
Edited By:

Updated on: May 30, 2021 | 2:52 PM

ಕೊವಿಡ್​ ಎರಡನೇ ಅಲೆ ಜೋರಾಗಿದೆ. ಈ ವೈರಸ್​ನಿಂದ ಬಚಾವ್​ ಆಗೋಕೆ ಜನರು ಲಸಿಕೆ ಪಡೆಯೋಕೆ ನಾಮುಂದು-ತಾಮುಂದು ಎಂದು ಮುಂದೆ ಬರುತ್ತಿದ್ದಾರೆ. ಆದರೆ, ಅಷ್ಟೊಂದು ಲಸಿಕೆ ಉತ್ಪಾದನೆ ಮಾಡಲು ಸಾಧ್ಯವಾಗದ ಕಾರಣ, ಎಲ್ಲರಿಗೂ ಕೊರೊನಾ ಔಷಧಿ ಸಿಗುತ್ತಿಲ್ಲ. ಹೀಗಾಗಿ, ಅನೇಕರು ಕೊರೊನಾ ಲಸಿಕೆ ಪಡೆಯೋಕೆ ನಾನಾ ಮಾರ್ಗ ಅನುಸರಿಸುತ್ತಿದ್ದಾರೆ. ಈಗ ದರ್ಶನ್​ ಸಿನಿಮಾ ನಾಯಕಿ ಮೀರಾ ಚೋಪ್ರಾ ಕೂಡ ಸುಳ್ಳು ಹೇಳಿ ಲಸಿಕೆ ಪಡೆದಿರೋ ವಿಚಾರ ಬೆಳಕಿಗೆ ಬಂದಿದೆ. ಆದರೆ, ಇದನ್ನು ಮೀರಾ ಚೋಪ್ರಾ ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ.

ಕೇಂದ್ರ ಸರ್ಕಾರ ಇತ್ತೀಚೆಗೆ 18-45 ವರ್ಷ ವಯೋಮಿತಿಯವರಿಗೆ ಕೊರೊನಾ ಲಸಿಕೆ ನೀಡಲು ಅವಕಾಶ ನೀಡಿತ್ತು. ಇದಕ್ಕಾಗಿ ಆನ್​ಲೈನ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿತ್ತು. ಅನೇಕರು ನೋಂದಣಿ ಮಾಡಿಕೊಂಡು, ತಮ್ಮ ಸರದಿ ಬಂದಾಗ ಲಸಿಕೆ ಪಡೆದಿದ್ದಾರೆ. ಮೀರಾ ಚೋಪ್ರಾ ಕೂಡ ಇತ್ತೀಚೆಗೆ ಲಸಿಕೆ ಪಡೆದಿದ್ದರು. ಈ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಜತೆಗೆ ಅಭಿಮಾನಿಗಳ ಬಳಿ ವ್ಯಾಕ್ಸಿನ್​ ಪಡೆದುಕೊಳ್ಳುವಂತೆ ಮನವಿ ಮಾಡಿದ್ದರು.

ಇದಾದ ಕೆಲವೇ ಹೊತ್ತಿಗೆ ಎಂಎಲ್​ಸಿ ಹಾಗೂ ಥಾಣೆ ಬಿಜೆಪಿ ಘಟಕದ ಅಧ್ಯಕ್ಷ ನಿರಂಜನ್​ ಅವರು ಫೋಟೋ ಒಂದನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಮೀರಾ ಐಡಿ ಕಾರ್ಡ್​ ಇತ್ತು. ಈ ಐಡಿ ಕಾರ್ಡ್​ನಲ್ಲಿ ಮೀರಾ ಫೋಟೋ ಇದ್ದು, ‘ಓಂ ಸಾಯಿ ಆರೋಗ್ಯ ಕೇಂದ್ರ’ದ ಸೂಪ್ರವೈಸರ್ ಎಂದು ಉಲ್ಲೇಖ ಮಾಡಲಾಗಿತ್ತು. ಈ ಐಡಿ ಕಾರ್ಡ್​ ಇಟ್ಟುಕೊಂಡು ಮೀರಾ ಲಸಿಕೆ ಪಡೆದಿದ್ದಾರೆ ಎಂದು ನಿರಂಜನ್​ ಆರೋಪಿಸಿದ್ದರು.

ಮೀರಾ ಚೋಪ್ರಾ ಅವರು ನಕಲಿ ಐಡಿ ಕಾರ್ಡ್​ ಸೃಷ್ಟಿಸಿ ಲಸಿಕೆ ಪಡೆದಿದ್ದಾರೆ ಎನ್ನುವ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗುತ್ತಿದ್ದಂತೆ, ಅವರು ಇನ್​ಸ್ಟಾಗ್ರಾಂ ಪೋಸ್ಟ್​ ಡಿಲೀಟ್​ ಮಾಡಿದ್ದಾರೆ. ಇದು ಹರಿದಾಡುತ್ತಿದ್ದ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.

ಆದರೆ, ಈ ಆರೋಪವನ್ನು ಮೀರಾ ಅಲ್ಲಗಳೆದಿದ್ದಾರೆ. ನಾನು ವ್ಯಾಕ್ಸಿನ್​ ಪಡೆಯಲು ನೋಂದಣಿ ಮಾಡಿಕೊಂಡಿದ್ದೆ. ಅಂತೆಯೇ ಇಂದು ತೆರಳಿ ನನ್ನ ಆಧಾರ್​​ಕಾರ್ಡ್ ನೀಡಿ ಕೊವಿಡ್​ ಲಸಿಕೆ ಪಡೆದಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಟೋ ನನ್ನದಲ್ಲ ಎಂದು ಮೀರಾ ಸ್ಪಷ್ಟನೆ ನೀಡಿದ್ದಾರೆ.

ಮೀರಾ ಚೋಪ್ರಾ ಟಾಲಿವುಡ್​ನ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪವನ್ ಕಲ್ಯಾಣ್ ನಟನೆಯ ಬಂಗಾರಮ್ ಸೇರಿ ದಕ್ಷಿಣ ಭಾರತದ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್ ನಟನೆಯ ‘ಅರ್ಜುನ್’ ಸಿನಿಮಾದಲ್ಲಿ ಮೀರಾ ನಟಿಸಿದ್ದರು. ಅವರಿಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂಥ ಯಶಸ್ಸು ಸಿಗಲೇ ಇಲ್ಲ. ಬಾಲಿವುಡ್ ಕೂಡ ಅವರ ಕೈ ಹಿಡಿಯಲಿಲ್ಲ. ಇದೆಲ್ಲದಕ್ಕೂ ಪ್ರಿಯಾಂಕಾ ಚೋಪ್ರಾ ಅವರೇ ಕಾರಣ ಎಂದು ಮೀರಾ ಚೋಪ್ರಾ ಆರೋಪಿಸಿದ್ದರು.

ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ನನ್ನ ಅವಕಾಶ ಕಿತ್ತುಕೊಂಡರು; ಮೀರಾ ಚೋಪ್ರಾ ಗಂಭೀರ ಆರೋಪ