ಅಭಿಮಾನಿಗಳಿಂದಲೇ ದರ್ಶನ್​ಗೆ ಹೆಚ್ಚುತ್ತಿದೆ ತೊಂದರೆ; ದಾಸನಿಗೆ ಜಾಮೀನು ಸಿಗದಿರಲು ನೀವೇ ಕಾರಣ ಆಗಬಹುದು

|

Updated on: Aug 28, 2024 | 10:58 AM

ನಟ ದರ್ಶನ್ ಅವರು ಈಗ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗುತ್ತಿದ್ದಾರೆ. ಬೆಂಗಳೂರಿನ ವಾತಾವರಣದಿಂದ ದರ್ಶನ್ ಹಾಯಾಗಿ ಇದ್ದರು. ಈಗ ಅವರು ಅನಿವಾರ್ಯವಾಗಿ ಬಳ್ಳಾರಿಗೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಫ್ಯಾನ್ಸ್​ಗಳ ಕೆಲ ಕೆಲಸಗಳು ನಟನಿಗೆ ಕಂಟಕ ತಂದಿಡುತ್ತಾ ಇವೆ.

ಅಭಿಮಾನಿಗಳಿಂದಲೇ ದರ್ಶನ್​ಗೆ ಹೆಚ್ಚುತ್ತಿದೆ ತೊಂದರೆ; ದಾಸನಿಗೆ ಜಾಮೀನು ಸಿಗದಿರಲು ನೀವೇ ಕಾರಣ ಆಗಬಹುದು
ದರ್ಶನ್
Follow us on

ದರ್ಶನ್ ಅವರ ಅಭಿಮಾನಿಗಳ ಹಾವಳಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚುತ್ತಿದೆ. ಜೈಲಿನ ಫೋಟೋ ವೈರಲ್ ಆದಾಗಲೂ ‘ಡಿ ಬಾಸ್ ಎಲ್ಲಿದ್ರೂ ರಾಜನೇ’ ಎಂದೆಲ್ಲ ಹೇಳಿ ಟ್ವೀಟ್ ಮಾಡಲಾಗಿತ್ತು. ಕೆಲವು ಮಾಹಿತಿಗಳ ಪ್ರಕಾರ ಅತಿರೇಕ ಹೆಚ್ಚಾದಷ್ಟು ದರ್ಶನ್​ಗೆ ಸಂಕಷ್ಟ ಹೆಚ್ಚಲಿದೆ. ಫ್ಯಾನ್ಸ್​ಗಳ ಕೆಲ ಕೆಲಸಗಳು ನಟನಿಗೆ ಕಂಟಕ ತಂದಿಡುತ್ತಾ ಇವೆ. ಮುಂದೆ ಜಾಮೀನು ಪಡೆಯಲು ಇದು ತೊಂದರೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ದರ್ಶನ್ ಜೈಲಿನಲ್ಲಿ ಸಿಗರೇಟ್ ಸೇದುತ್ತಾ ಕುಳಿತಿರುವ ಫೋಟೋ, ವಿಡಿಯೋ ಕಾಲ್ ವಿಡಿಯೋ ವೈರಲ್ ಆಗಿದೆ. ‘ನಮ್ ಬಾಸ್ ಎಲ್ಲಿದ್ರೂ ರಾಜನೇ’ ಎಂದು ಇದನ್ನು ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ. ದರ್ಶನ್ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದನ್ನೂ ಸಪೋರ್ಟ್ ಮಾಡೋ ರೀತಿ ಪೋಸ್ಟ್​ಗಳನ್ನು ಮಾಡಲಾಗುತ್ತಿದೆ. ದರ್ಶನ್ ವಿರುದ್ಧ ಮಾತನಾಡುವ ವ್ಯಕ್ತಿಗಳ ವಿರುದ್ಧ ತೇಜೋವಧೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವ ಕೆಲಸವನ್ನು ಫ್ಯಾನ್ಸ್ ಮಾಡುತ್ತಿದ್ದಾರೆ. ಈ‌‌ ವಿಚಾರಗಳೂ ದರ್ಶನ್​ಗೆ ಕಂಟಕ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಗಾಗಲೇ ರಿಮ್ಯಾಂಡ್ ಅಪ್ಲಿಕೇಷನ್​ನಲ್ಲಿ ಫ್ಯಾನ್ಸ್ ಬಗ್ಗೆ ಪೊಲೀಸರು ಉಲ್ಲೇಖಿಸಿದ್ದಾರೆ. ‘ದರ್ಶನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ದರ್ಶನ್ ಅಭಿಮಾನಿಗಳಿಂದ ಸಾಕ್ಷ್ಯ ನಾಶ ಮಾಡಿಸುವ ಸಾಧ್ಯತೆ ಇದೆ’ ಎಂದು ಹೇಳಲಾಗಿದೆ. ಮುಂದೆ ಜಾಮೀನು ಅರ್ಜಿ ವಿಚಾರ ಬಂದಾಗ ಪೊಲೀಸರು ಸೋಶಿಯಲ್ ಮೀಡಿಯಾದ ಫ್ಯಾನ್ಸ್ ಹಾವಳಿ ವಿಚಾರವನ್ನು ಪ್ರಸ್ತಾಪ ಮಾಡಿದರೆ ಜಾಮೀನಿಗೆ ತೊಡಕು ಉಂಟಾಗುವ ಸಾಧ್ಯತೆ ಇರುತ್ತದೆ’ ಎಂದು ಹೇಳಲಾಗಿದೆ.

ಇದನ್ನೂ ಓದಿ: ದರ್ಶನ್​ಗೆ ಆತಿಥ್ಯ ಕೊಡಲು ರೌಡಿಗಳ ಮಧ್ಯೆ ಸ್ಪರ್ಧೆ; ಕಂಟಕ ಎದುರಾಗಿದ್ದು ಮಾತ್ರ ದಾಸನಿಗೆ  

ದರ್ಶನ್ ವಿಚಾರಣೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿ ದರ್ಶನ್​ಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿ 3 ಎಫ್​ಐಆರ್​ ದಾಖಲಾಗಿದೆ. ಈ ಪೈಕಿ ಎರಡು ಪ್ರಕರಣಗಳಲ್ಲಿ ಇಂದು ಆರೋಪಿ ನಟ ದರ್ಶನ್ ವಿಚಾರಣೆ ನಡೆಯಲಿದೆ. ವಿಚಾರಣೆ, ಮಹಜರು ನಡೆಸಿ ಹೇಳಿಕೆ ದಾಖಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಆರೋಪಿ ನಟ ದರ್ಶನ್​, ರೌಡಿಶೀಟರ್​ಗಳಾದ ವಿಲ್ಸನ್​ ಗಾರ್ಡನ್​​ ನಾಗ, ಕುಳ್ಳ ಸೀನ, ದರ್ಶನ್ ಆಪ್ತನಾಗಿರುವ ಆರೋಪಿ ನಾಗರಾಜ್ ವಿಚಾರಣೆ ಕೂಡ ನಡೆಯಲಿದೆ. ಬಳ್ಳಾರಿ ಜೈಲಿಗೆ ಶಿಫ್ಟ್​ಗೆ ಮುನ್ನ ದರ್ಶನ್ ವಿಚಾರಣೆ, ಸ್ಥಳಮಹಜರು ಪ್ರಕ್ರಿಯೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.