AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಜೈಲಿಗೆ ಕರೆತಂದರೆ ದರ್ಶನ್ ಮತ್ತೆ ಕೆಟ್ಟುಹೋಗ್ತಾರೆ: ಕಾರಾಗೃಹದ ಕರ್ಮಕಾಂಡ ಬಿಚ್ಚಿಟ್ಟ ಮಾಜಿ ಕೈದಿ

ಕೊಲೆ ಪ್ರಕರಣ ಎದುರಿಸುತ್ತಿರುವ ನಟ ದರ್ಶನ್​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದಕ್ಕೆ ಸಂಬಂಧಿಸಿ ಸದ್ಯ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಅವರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿಯೇ ಅವರನ್ನು ಸ್ಥಳಾಂತರ ಮಾಡಲಾಗುತ್ತಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಈ ಮಧ್ಯೆ, ಬಳ್ಳಾರಿ ಜೈಲಿನ ಬಗ್ಗೆ ಮಾಜಿ ಕೈದಿ ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಬಳ್ಳಾರಿ ಜೈಲಿಗೆ ಕರೆತಂದರೆ ದರ್ಶನ್ ಮತ್ತೆ ಕೆಟ್ಟುಹೋಗ್ತಾರೆ: ಕಾರಾಗೃಹದ ಕರ್ಮಕಾಂಡ ಬಿಚ್ಚಿಟ್ಟ ಮಾಜಿ ಕೈದಿ
ಆನಂದಿ ಕೊಟ್ಟಂ ಜಯಸಿಂಹ
ವಿನಾಯಕ ಬಡಿಗೇರ್​
| Edited By: |

Updated on:Aug 28, 2024 | 1:14 PM

Share

ಬಳ್ಳಾರಿ, ಆಗಸ್ಟ್ 28: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ವಿಚಾರ ಸದ್ಯ ಚರ್ಚೆಯಲ್ಲಿದೆ. ಇದೇ ಕಾರಣಕ್ಕೆ ದರ್ಶನ್​ರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಆದರೆ, ಬಳ್ಳಾರಿ ಜೈಲಿನ ಬಗ್ಗೆ ಅದೇ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ್ದ ವ್ಯಕ್ತಿಯೊಬ್ಬರು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ.

ಹಣ ನೀಡಿದ್ರೆ ಬಳ್ಳಾರಿ ಜೈಲಿನಲ್ಲಿ ಏನು ಬೇಕಾದರೂ ಸಿಗುತ್ತದೆ ಎಂದು ಬಳ್ಳಾರಿ ಜೈಲಿನಲ್ಲಿದ್ದ ಆನಂದಿ ಕೊಟ್ಟಂ ಜಯಸಿಂಹ ಹೇಳಿದ್ದಾರೆ. ‘ಟಿವಿ9’ ಜತೆ ಮಾತನಾಡಿರುವ ಅವರು, ಸಿಬ್ಬಂದಿಗೆ ದುಡ್ಡು ಕೊಟ್ಟರೆ ಬಳ್ಳಾರಿ ಜೈಲಿನಲ್ಲಿ ಎಲ್ಲವೂ ಸಿಗುತ್ತದೆ. ಮೊಬೈಲ್, ಗಾಂಜಾ, ಸಿಗರೇಟ್ ಎಲ್ಲವೂ ಜೈಲಿನಲ್ಲಿ ಸಿಗುತ್ತದೆ. ಜೈಲಿನಲ್ಲಿ ಕೈದಿಗಳನ್ನು ನೋಡಬೇಕಾದರೂ ಲಂಚ ಕೊಡಬೇಕು ಎಂದು ಹೇಳಿದ್ದಾರೆ.

ಬಳ್ಳಾರಿ ಜೈಲಿನ ವಿಐಪಿ ಸೆಲ್‌ನಲ್ಲಿ ಟಿವಿ ವ್ಯವಸ್ಥೆ, ಮಲಗಲು ಬೆಡ್ ವ್ಯವಸ್ಥೆ, ಫ್ಯಾನ್, ಮೊಬೈಲ್ ಎಲ್ಲವೂ ಇದೆ. ದರ್ಶನ್​​ರನ್ನು ಬಳ್ಳಾರಿಗೆ ಕರೆತಂದರೆ ಮತ್ತೆ ಕೆಟ್ಟು ಹೋಗುತ್ತಾರೆ. ಪರಪ್ಪನ ಅಗ್ರಹಾರ ಜೈಲಿಗಿಂತ ಬಳ್ಳಾರಿ ಜೈಲಲ್ಲಿ ಏನೂ ಕಡಿಮೆ ಇಲ್ಲ ಎಂದು ಕೊಟ್ಟಂ ಜಯಸಿಂಹ ಹೇಳಿದ್ದಾರೆ. ಕೊಲೆ ಆರೋಪದ ಕೇಸ್​ನಲ್ಲಿ ಜೈಲು ಸೇರಿದ್ದ ಜಯಸಿಂಹ ಆರು ವರ್ಷ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದರು. 2006 ರಿಂದ 2021 ರ ವರಗೆ ಜೈಲಿನಲ್ಲಿದ್ದರು.

ದರ್ಶನ್​ಗೆ ಆಗಲಿದೆಯೇ ಅನುಕೂಲ?

ದರ್ಶನ್​ಗೆ ಹೆಚ್ಚು ಅನುಕೂಲ ಮಾಡಿಕೊಡುವುದಕ್ಕಾಗಿಯೇ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂಬುದಾಗಿಯೂ ಕೆಲವು ಮೂಲಗಳು ಹೇಳಿದ್ದವು. ಇದೀಗ ಆನಂದಿ ಕೊಟ್ಟಂ ಜಯಸಿಂಹ ನೀಡಿರುವ ಮಾಹಿತಿ ಆ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ದರ್ಶನ್​ ಶಿಫ್ಟ್​ ಆಗುವ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ 140 ವರ್ಷಗಳ ಇತಿಹಾಸ

ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶತಮಾನದ ಇತಿಹಾಸವಿದೆ. ಸುಮಾರು 140 ವರ್ಷಗಳ ಇತಿಹಾಸವಿರುವ ಈ ಕೇಂದ್ರ ಕಾರಾಗೃಹದಲ್ಲಿ ಅನೇಕ ನಟೋರಿಯಸ್ ರೌಡಿಗಳನ್ನು ಕೂಡ ಇರಿಸಲಾಗಿತ್ತು. ಭೀಮಾತೀರದ ಹನುಮಂತ ನಾಯ್ಕ್, ಬೆಂಗಳೂರಿನ ಕೆಜೆಹಳ್ಳಿ, ಡಿಜೆಹಳ್ಳಿ ಪ್ರಕರಣದಲ್ಲಿನ 80 ಆರೋಪಿಗಳು, ಹುಲಿಹೈದರ್ ಗಲಭೆ, ಕೊಲೆ ಪ್ರಕರಣದ ಆರೋಪಿಗಳನ್ನೆಲ್ಲ ಇದೇ ಜೈಲಿನಲ್ಲಿ ಇರಿಸಲಾಗಿತ್ತು.

ಕಾರಾಗೃಹದ ಸಾಮರ್ಥ್ಯ

ಸದ್ಯ 500 ಕೈದಿಗಳ ಸಾಮರ್ಥ್ಯದ ಕಾರಾಗೃಹದಲ್ಲಿ 368 ಕೈದಿಗಳಿದ್ದಾರೆ. 80 ಸಿಸಿ ಕ್ಯಾಮರಾ, ಇದ್ದು 9 ಡಾನ್ ಮೆಟರಿಯಲ್ ಹಾಲ್ ಮತ್ತು 16 ಸ್ಪೆಷಲ್ ಬ್ಯಾರಿಕೇಡ್ ಇವೆ.

Published On - 12:25 pm, Wed, 28 August 24

ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿ ಪ್ರಸಾದ ವ್ಯವಸ್ಥೆ
ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿ ಪ್ರಸಾದ ವ್ಯವಸ್ಥೆ
ಬೆಳಗಾವಿ ಉತ್ಸವದಲ್ಲಿ ಡಾಲಿ ಮಾಸ್ ಡೈಲಾಗ್; ಅಭಿಮಾನಿಗಳ ಖುಷಿ ನೋಡಿ..
ಬೆಳಗಾವಿ ಉತ್ಸವದಲ್ಲಿ ಡಾಲಿ ಮಾಸ್ ಡೈಲಾಗ್; ಅಭಿಮಾನಿಗಳ ಖುಷಿ ನೋಡಿ..
2026ರಲ್ಲಿ ಮೀನ ರಾಶಿಗೆ ಸಾಡೇಸಾತಿ ಇದ್ದರೂ, ಆರ್ಥಿಕ ಚೇತರಿಕೆ, ಆಸ್ತಿ ಯೋಗ
2026ರಲ್ಲಿ ಮೀನ ರಾಶಿಗೆ ಸಾಡೇಸಾತಿ ಇದ್ದರೂ, ಆರ್ಥಿಕ ಚೇತರಿಕೆ, ಆಸ್ತಿ ಯೋಗ