AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೆಂಡ್ತಿಗೆ ಜಾಸ್ತಿ ಟೈಮ್​ಕೊಟ್ರೆ ಮಕ್ಕಳಾಗುತ್ತೆ’; ಲೈವ್​ನಲ್ಲೇ ತರುಣ್-ಸೋನಲ್ ಕಾಲೆಳೆದ ಪ್ರೇಮ್

ಸೋನಲ್ ಮೊಂತೆರೋ ಹಾಗೂ ತರುಣ್ ಸುಧೀರ್ ವಿವಾಹ ನೆರವೇರಿದೆ. ಈಗ ತರುಣ್ ಹಾಗೂ ಸೋನಲ್ ಅನುಶ್ರೀ ಯೂಟ್ಯೂಬ್ ಚಾನೆಲ್​ ಜೊತೆ ಬಂದು ಮಾತನಾಡಿದ್ದಾರೆ. ಈ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಈ ವೇಳ ಹಲವು ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ.

‘ಹೆಂಡ್ತಿಗೆ ಜಾಸ್ತಿ ಟೈಮ್​ಕೊಟ್ರೆ ಮಕ್ಕಳಾಗುತ್ತೆ’; ಲೈವ್​ನಲ್ಲೇ ತರುಣ್-ಸೋನಲ್ ಕಾಲೆಳೆದ ಪ್ರೇಮ್
‘ಹೆಂಡ್ತಿಗೆ ಜಾಸ್ತಿ ಟೈಮ್​ಕೊಟ್ರೆ ಮಕ್ಕಳಾಗುತ್ತೆ’; ಲೈವ್​ನಲ್ಲೇ ತರುಣ್-ಸೋನಲ್ ಕಾಲೆಳೆದ ಪ್ರೇಮ್
ರಾಜೇಶ್ ದುಗ್ಗುಮನೆ
|

Updated on: Aug 28, 2024 | 8:39 AM

Share

ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೋ ಇತ್ತೀಚೆಗಷ್ಟೇ ಮದುವೆ ಆದ ಖುಷಿಯಲ್ಲಿ ಇದ್ದಾರೆ. ಇವರ ಮದುವೆ ಬಳಿಕ ಮೊಟ್ಟ ಮೊದಲ ಬಾರಿಗೆ ಸಂದರ್ಶನ ನೀಡಿದ್ದಾರೆ. ಖ್ಯಾತ ಆ್ಯಂಕರ್ ಅನುಶ್ರೀ ಅವರ ಯೂಟ್ಯೂಬ್​ ಚಾನೆಲ್ ಜೊತೆ ತರುಣ್ ಸುಧೀರ್ ಹಾಗೂ ಸೋನಲ್ ಮುಕ್ತವಾಗಿ ಮಾತನಾಡಿದ್ದಾರೆ. ಈ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟ ನೆನಪಿರಲಿ ಪ್ರೇಮ್ ಅವರು ತರುಣ್ ಸುಧೀರ್​ನ ಕಾಲೆಳೆದಿದ್ದಾರೆ.

ಅನುಶ್ರೀ ಅವರು ಸಮಯ ಸಿಕ್ಕಾಗ ಖ್ಯಾತ ನಾಮರನ್ನು ಕರೆಸಿ ಸಂದರ್ಶನ ಮಾಡುತ್ತಾರೆ. ಸಿನಿಮಾ ರಿಲೀಸ್ ಇದ್ದರೆ ಆ ಸಂದರ್ಭದಲ್ಲಿ ತಂಡದವರು ಬಂದು ಅನುಶ್ರೀ ಜೊತೆ ಮಾತನಾಡುತ್ತಾರೆ. ಈಗ ತರುಣ್ ಹಾಗೂ ಸೋನಲ್ ಅವರ ವಿವಾಹ ನೆರವೇರಿದ್ದು, ಅವರು ಅನುಶ್ರೀ ಯೂಟ್ಯೂಬ್ ಚಾನೆಲ್​ ಜೊತೆ ಬಂದು ಮಾತನಾಡಿದ್ದಾರೆ. ಈ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ.

‘ಮದುವೆ ಆಗಿ ಎಲ್ಲಾ ಶಾಸ್ತ್ರ ಮುಗೀತಾ’ ಎಂದು ಅನುಶ್ರೀ ಕೇಳಿದ್ದಾರೆ. ಇದಕ್ಕೆ ತರುಣ್ ಹಾಗೂ ಸೋನಲ್ ಮನಸ್ಫೂರ್ತಿಯಾಗಿ ನಕ್ಕಿದ್ದಾರೆ. ದರ್ಶನ್ ಅವರನ್ನು ತರುಣ್ ನೆನಪಿಸಿಕೊಂಡಿದ್ದಾರೆ. ‘ದರ್ಶನ್ ಅವರು ಆದಿನ (ರಾಬರ್ಟ್​ ಶೂಟಿಂಗ್ ಸಂದರ್ಭದಲ್ಲಿ) ಸೆಟ್​ಗೆ ಅರ್ಧಗಂಟೆ ಬೇಗ ಬಂದರು. ಅವಳಿಗೆ ಯಾಕೆ ಅಷ್ಟು ಚೆನ್ನಾಗಿ ಫ್ರೇಮ್ ಇಡ್ತೀಯ ಎಂದು ಕೇಳಿದ್ದರು’ ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ. ತರುಣ್ ಹಾಗೂ ಸೋನಲ್ ‘ರಾಬರ್ಟ್’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈ ಸಿನಿಮಾದ ಸೆಟ್​ನಲ್ಲಿ ತರುಣ್ ಹಾಗೂ ಸೋನಲ್​ನ ಕಾಲೆಳೆಯುವ ಪ್ರಯತ್ನವನ್ನು ದರ್ಶನ್ ಮಾಡುತ್ತಿದ್ದರು.

ಇದನ್ನೂ ಓದಿ: ರಮೇಶ್ ಅರವಿಂದ್, ಅನುಶ್ರೀ ಸೇರಿ ‘ಮಹಾನಟಿ’ ತಂಡದ ವಿರುದ್ಧ ದಾಖಲಾಯ್ತು ದೂರು; ಕಾರಣವೇನು?

ಅನುಶ್ರೀ ಸಂದರ್ಶನಕ್ಕೆ ನೆನಪಿರಲಿ ಪ್ರೇಮ್ ಅವರ ಆಗಮನವೂ ಆಗಿದೆ. ನಿಶ್ವಿಕಾ ನಾಯ್ಡು ಅವರು ‘ಹನಿಮೂನ್​ಗೆ ಎಲ್ಲಿಗೆ ಹೋಗುತ್ತಿದ್ದೀರಾ’ ಎಂದು ಕೇಳಿದ್ದಾರೆ. ಇದಕ್ಕೆ ಅವರು ‘ಕ್ಲೈಮೆಟ್, ಬಜೆಟ್ ನೋಡಿಕೊಂಡು ಹೋಗೋದು’ ಎಂದಿದ್ದಾರೆ. ‘ಚೆನ್ನಾಗಿ ಟೈಮ್ ಕೊಟ್ರೆ ಸ್ಕ್ರಿಪ್ಟ್ ಚೆನ್ನಾಗಿ ಆಗುತ್ತೆದೆ. ಆದರೆ, ಹೆಂಡತಿ ಬೇಜಾರು ಮಾಡಿಕೊಳ್ಳುತ್ತಾರೆ’ ಎಂದಿದ್ದಾರೆ ತರುಣ್. ಆಗ ಪ್ರೇಮ್ ಅವರು, ‘ಹೆಂಡ್ತಿಗೆ ಚೆನ್ನಾಗಿ ಟೈಮ್ ಕೊಟ್ರೆ ಮಕ್ಕಳಾಗುತ್ತೆ, ಮಕ್ಕಳು ಹಠ ಮಾಡುತ್ತಾರೆ’ ಎಂದು ಕಾಲೆಳೆದಿದ್ದಾರೆ. ಸದ್ಯ ಪ್ರೋಮೋ ಮಾತ್ರ ರಿಲೀಸ್ ಆಗಿದೆ. ಇನ್ನಷ್ಟೇ ಪೂರ್ಣ ಸಂದರ್ಶನ ರಿಲೀಸ್ ಆಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು