AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲಾರ್ ಸಿನಿಮಾ ಸೇರಿದ ಮತ್ತೊಬ್ಬ ಕನ್ನಡಿಗ, ಪ್ರಭಾಸ್ ಜೊತೆ ಕನ್ನಡದ ಹಿರಿಯ ನಟ

Salaar: ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ ಸಲಾರ್​ನಲ್ಲಿ ಈಗಾಗಲೇ ಕೆಲವು ಕನ್ನಡದ ನಟರು ನಟಿಸಿದ್ದಾರೆ. ಇದೀಗ ಆ ಪಟ್ಟಿಗ್ಗೆ ಹಿರಿಯ ಕನ್ನಡದ ನಟರೊಬ್ಬರು ಸೇರಿಕೊಂಡಿದ್ದಾರೆ.

ಸಲಾರ್ ಸಿನಿಮಾ ಸೇರಿದ ಮತ್ತೊಬ್ಬ ಕನ್ನಡಿಗ, ಪ್ರಭಾಸ್ ಜೊತೆ ಕನ್ನಡದ ಹಿರಿಯ ನಟ
ಸಲಾರ್
ಮಂಜುನಾಥ ಸಿ.
|

Updated on: Apr 16, 2023 | 3:38 PM

Share

ಪ್ರಭಾಸ್ (Prabhas) ನಟಿಸಿ ಪ್ರಶಾಂತ್ ನೀಲ್ (Prashanth Neel) ನಿರ್ದೇಶನ ಮಾಡುತ್ತಿರುವ ಸಲಾರ್ (Salaar) ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಕಳೆದ ಎರಡು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಹಲವು ತಾರಾ ನಟರು ಸಿನಿಮಾದಲ್ಲಿದ್ದಾರೆ. ವಿಶೇಷವೆಂದರೆ ಸಲಾರ್ ಸಿನಿಮಾದ ಹಲವು ಪ್ರಮುಖ ಪಾತ್ರಗಳಲ್ಲಿ ಕನ್ನಡದ ನಟರೇ ನಟಿಸಿದ್ದಾರೆ. ಇದೀಗ ಕನ್ನಡದ ಹಿರಿಯ ನಟರೊಬ್ಬರು ತಾವು ಸಲಾರ್ ಸಿನಿಮಾದಲ್ಲಿ ನಟಿಸಿರುವ ಗುಟ್ಟು ರಟ್ಟು ಮಾಡಿದ್ದಾರೆ.

ಕನ್ನಡದ ಜನಪ್ರಿಯ ಹಿರಿಯ ನಟ ದೇವರಾಜ್, ಪ್ರಭಾಸ್ ಜೊತೆಗೆ ಸಲಾರ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ವಿಷಯವನ್ನು ಸ್ವತಃ ದೇವರಾಜ್ ಹೇಳಿಕೊಂಡಿದ್ದಾರೆ. ತೆಲುಗಿನ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿರುವ ದೇವರಾಜ್, ತೆಲುಗು ಚಿತ್ರರಂಗದ ಬಗ್ಗೆ ಮಾತನಾಡುತ್ತಾ, ಸಲಾರ್ ಸಿನಿಮಾದಲ್ಲಿ ತಾವು ನಟಿಸಿರುವ ಗುಟ್ಟು ರಟ್ಟು ಮಾಡಿದ್ದಾರೆ.

ದೇವರಾಜ್​ಗೆ ತೆಲುಗು ಚಿತ್ರರಂಗ ಹೊಸದೇನೂ ಅಲ್ಲ. ಈಗಾಗಲೇ ಹಲವು ತೆಲುಗು, ತಮಿಳು ಸಿನಿಮಾಗಳಲ್ಲಿ ದೇವರಾಜ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2018ರಲ್ಲಿ ಮಹೇಶ್ ಬಾಬು ನಟಿಸಿದ್ದ ಭರತ್ ಅನೇ ನೇನು ದೇವರಾಜ್ ನಟಿಸಿದ್ದ ಕೊನೆಯ ತೆಲುಗು ಸಿನಿಮಾ. ಅದಾದ ಬಳಿಕ ತೆಲುಗು ಸಿನಿಮಾದಲ್ಲಿ ದೇವರಾಜ್ ನಟಿಸಿರಲಿಲ್ಲ. ಏಕೆ ಆ ಸಿನಿಮಾದ ಬಳಿಕ ತೆಲುಗು ಚಿತ್ರರಂಗದಲ್ಲಿ ನಟಿಸಲಿಲ್ಲ ಎಂದು ದೇವರಾಜ್ ಅನ್ನು ಸಂದರ್ಶಕ ಕೇಳಿದಾಗ, ಯಾವುದೂ ಅವಕಾಶಗಳು ಬರಲಿಲ್ಲ ಆದರೆ ಈಗ ಒಂದು ತೆಲುಗು ಸಿನಿಮಾದಲ್ಲಿ ನಟಿಸಿದ್ದೇನೆ ಎಂದಿದ್ದಾರೆ. ಯಾವುದು ಎಂದು ಕೇಳಿದಾಗ ಸಲಾರ್ ಸಿನಿಮಾದ ಹೆಸರು ಹೇಳಿದ್ದಾರೆ ದೇವರಾಜ್.

ಸಿನಿಮಾ ಹೇಗಿದೆ? ಪ್ರಭಾಸ್ ಪಾತ್ರವೇನು? ಇನ್ನೂ ಇತ್ಯಾದಿ ಪ್ರಶ್ನೆಗಳನ್ನು ಸಂದರ್ಶಕ ಕೇಳಿದಾಗ, ”ಅದಕ್ಕೆಲ್ಲ ಉತ್ತರಿಸುವ ಹಕ್ಕು ನನಗಿಲ್ಲ ಆದರೆ ಇಷ್ಟು ಮಾತ್ರ ಹೇಳಬಲ್ಲೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ನಾನು ಪ್ರಭಾಸ್, ಜಗಪತಿ ಬಾಬು, ಪೃಥ್ವಿರಾಜ್ ಸುಕುಮಾರನ್ ಅವರೊಟ್ಟಿಗೆ ನಟಿಸಿದ್ದೇನೆ. ನನ್ನ ಪಾತ್ರ ಮೊದಲ ಭಾಗಕ್ಕಿಂತಲೂ ಎರಡನೇ ಭಾಗದಲ್ಲಿ ಹೆಚ್ಚು ಇರಲಿದೆ ಎಂದಿದ್ದಾರೆ.

ಇದನ್ನೂ ಓದಿ: ‘ಅತ್ಯಂತ ಹಿಂಸಾತ್ಮಕ ವ್ಯಕ್ತಿ ಬರುತ್ತಿದ್ದಾನೆ’; ‘ಸಲಾರ್’ ರಿಲೀಸ್ ದಿನಾಂಕ ತಿಳಿಸಿದ ಹೊಂಬಾಳೆ ಫಿಲ್ಮ್ಸ್​

ಪ್ರಭಾಸ್ ಜೊತೆ ಒಡನಾಟ ಹೇಗಿತ್ತು? ಎಂಬ ಪ್ರಶ್ನೆಗೆ ಉತ್ತರಿಸಿರುವ ನಟ ದೇವರಾಜ್, ಚೆನ್ನಾಗಿತ್ತು. ಈಗಿನ ನಟರು ಅನುಭವಿ ನಟರಿಗೆ ಗೌರವ ಕೊಡುತ್ತಾರೆ ಹಾಗಾಗಿ ತೀರಾ ಆಪ್ತವಾಗಿ ಬೆರೆಯುವುದಿಲ್ಲ. ನಮಸ್ಕಾರ ಯಾವಾಗ ಬಂದಿರಿ? ಹೇಗಿದ್ದೀರಿ? ಇಷ್ಟೆ ಕುಶಲೋಪಚರಿಗಳು ಇರುತ್ತವೆ. ಪ್ರಭಾಸ್ ಸಹ ಅಷ್ಟೆ. ಆದರೆ ಪ್ರಭಾಸ್ ಜೊತೆ ನಟಿಸುವುದು ಕಂಫರ್ಟ್ ಆಗಿತ್ತು, ಎಲ್ಲರೊಟ್ಟಿಗೆ ಚೆನ್ನಾಗಿ ನಡೆದುಕೊಳ್ತಾರೆ ಎಂದಿದ್ದಾರೆ ನಟ ದೇವರಾಜ್.

ಸಲಾರ್ ಸಿನಿಮಾದಲ್ಲಿ ಈಗಾಗಲೇ ಕೆಲವು ಕನ್ನಡದ ನಟರು ನಟಿಸಿದ್ದಾರೆ. ಮಫ್ತಿ ಸಿನಿಮಾದಲ್ಲಿ ನಟಿಸಿದ್ದ ಮಧು ಗುರುಸ್ವಾಮಿ ಸಲಾರ್ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರತ್ನನ್ ಪ್ರಪಂಚ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಪ್ರಮೋದ್ ಸಹ ಸಲಾರ್ ಸಿನಿಮಾದಲ್ಲಿ ನಟಿಸಿದ್ದಾರೆ. ಇವರ ಹೊರತಾಗಿ ಪ್ರಭಾಸ್ ಜೊತೆಗೆ ಜಗಪತಿ ಬಾಬು, ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಹಾಗೂ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?