ಬಾಕ್ಸ್ ಆಫೀಸ್​ನಲ್ಲಿ ಜಾಕ್​ಪಾಟ್ ಹೊಡೆದ ‘ಕುಬೇರ’ ಹಾಗೂ ‘ಸಿತಾರೆ ಜಮೀನ್ ಪರ್’

ಜೂನ್ 20ರಂದು ಬಿಡುಗಡೆಯಾದ ‘ಕುಬೇರ’ ಮತ್ತು ‘ಸಿತಾರೆ ಜಮೀನ್ ಪರ್’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸು ಕಂಡಿದೆ. ಧನುಷ್ ನಟನೆಯ ‘ಕುಬೇರ’ ಚಿತ್ರವು ವಾರಾಂತ್ಯದಲ್ಲಿ ಅತ್ಯಧಿಕ ಗಳಿಕೆ ಮಾಡಿದೆ. ಆಮೀರ್ ಖಾನ್ ಅವರ ‘ಸಿತಾರೆ ಜಮೀನ್ ಪರ್’ ಚಿತ್ರವು ಕೂಡ ಪ್ರೇಕ್ಷಕರನ್ನು ಸೆಳೆದು ಒಳ್ಳೆಯ ಗಳಿಕೆಯನ್ನು ಮಾಡುತ್ತಿದೆ.

ಬಾಕ್ಸ್ ಆಫೀಸ್​ನಲ್ಲಿ ಜಾಕ್​ಪಾಟ್ ಹೊಡೆದ ‘ಕುಬೇರ’ ಹಾಗೂ ‘ಸಿತಾರೆ ಜಮೀನ್ ಪರ್’
ಆಮಿರ್-ಧನುಶ್

Updated on: Jun 23, 2025 | 7:31 AM

ಈಗಾಗಲೇ ಈ ವರ್ಷದ ಆರು ತಿಂಗಳು ಪೂರ್ಣಗೊಳ್ಳುತ್ತಿದೆ. ಆದರೆ, ಅತಿ ದೊಡ್ಡ ಗೆಲುವು ಎಂದು ಸಿಕ್ಕಿದ್ದು ಕಡಿಮೆ ಸಿನಿಮಾಗಳಿಗೆ. ಜೂನ್ 20ರಂದು ರಿಲೀಸ್ ಆದ ತಮಿಳಿನ ‘ಕುಬೇರ’ (Kubera Movie) ಹಾಗೂ ಹಿಂದಿಯ ‘ಸಿತಾರೆ ಜಮೀನ್ ಪರ್’ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿವೆ. ಎರಡೂ ಸಿನಿಮಾಗಳು ವೀಕೆಂಡ್​ನಲ್ಲಿ ಜಾಕ್​ಪಾಟ್ ಹೊಡೆದಿವೆ. ವಾರದ ದಿನಗಳಲ್ಲೂ ಈ ಸಿನಿಮಾಗಳು ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

ಕುಬೇರನಾದ ‘ಕುಬೇರ’

ಧನುಶ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ಮೊದಲಾದವರು ನಟಿಸಿರೋ, ಶೇಖರ್ ಕಮ್ಮುಲ ನಿರ್ದೇಶನದ ‘ಕುಬೇರ’ ಸಿನಿಮಾ ಮೆಚ್ಚುಗೆ ಪಡೆದಿದೆ. ಈ ಚಿತ್ರದ ಗಳಿಕೆ ಕೂಡ ಉತ್ತಮವಾಗುತ್ತಿದೆ. ಈ ಸಿನಿಮಾ ಮೊದಲ ದಿನ ಕೇವಲ 14.75 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಶನಿವಾರ ಹಾಗೂ ಭಾನುವಾರ ಸಿನಿಮಾ ಒಳ್ಳೆಯ ಕಮಾಯಿ ಮಾಡಿದೆ. ಶನಿವಾರ ಈ ಚಿತ್ರಕ್ಕೆ 16.5 ಕೋಟಿ ರೂಪಾಯಿ ಹಾಗೂ ಭಾನುವಾರ 17.25 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಸಿನಿಮಾದ ಒಟ್ಟಾರೆ ಗಳಿಕೆ 48.50 ಆಗಿದೆ.

ಬುಕ್ ಮೈ ಶೋನಲ್ಲೂ ಸಿನಿಮಾ ಒಳ್ಳೆಯ ರೇಟಿಂಗ್ ಪಡೆದಿದೆ. ಈ ಸಿನಿಮಾಗೆ 35 ಸಾವಿರಕ್ಕೂ ಅಧಿಕ ಮಂದಿ ವೋಟ್ ಮಾಡಿದ್ದು, 8.6 ರೇಟಿಂಗ್ ಸಿಕ್ಕಿದೆ. ಬಾಯಿಮಾತಿನ ಪ್ರಚಾರದಿಂದ ಸಿನಿಮಾ ಕಲೆಕ್ಷನ್ ಹೆಚ್ಚುತ್ತಿದೆ.

ಇದನ್ನೂ ಓದಿ
ಸಲ್ಮಾನ್ ಖಾನ್​ಗೆ ಮೆದುಳು ಸಂಬಂಧಿ ರೋಗ; ಕಾಡುತ್ತಿದೆ ಸ್ಟ್ರೋಕ್ ಆಗೋ ಭಯ
ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿದ ಖ್ಯಾತಿ ಮೋದಿಗೆ ಸಲ್ಲುತ್ತೆ; ಪವನ್
ನಿಜವಾದ ವಿಷಕಾರಿ ಜಂತುಗಳ ಜೊತೆ ರಾಜ್​ಕುಮಾರ್ ಶೂಟ್; ಇದಕ್ಕೆ ಗುಂಡಿಗೆ ಬೇಕು
ಸೆಲೆಬ್ರಿಟಿಗಳು ಎಷ್ಟು ಗಂಟೆಗೆ ಕೊನೆಯ ಊಟ ಮಾಡುತ್ತಾರೆ? ಇಲ್ಲಿದೆ ಮಾಹಿತಿ

‘ಸಿತಾರೆ ಜಮೀನ್ ಪರ್’

‘ತಾರೇ ಜಮೀನ್ ಪರ್’ ಸಿನಿಮಾ ಈ ಮೊದಲು ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಇದೇ ನಂಬಿಕೆ ಮೇಲೆ ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾ ಮಾಡಿದ್ದಾರೆ. ಹಾಸ್ಯ ಮತ್ತು ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಈ ಚಿತ್ರವನ್ನು ಆಮಿರ್ ಖಾನ್ ಮಾಡಿದ್ದಾರೆ. ಈ ಸಿನಿಮಾ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ.

ಇದನ್ನೂ ಓದಿ: ಮೊದಲ ದಿನ ಆಮಿರ್ ಖಾನ್ ಸಿನಿಮಾ ‘ಸಿತಾರೆ ಜಮೀನ್ ಪರ್’ ಗಳಿಸಿದ್ದು ಎಷ್ಟು?

ಈ ಸಿನಿಮಾ ಮೊದಲ ದಿನ ಕೇವಲ 10.7 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಆದರೆ, ದಿನ ಕಳೆದಂತೆ ಸಿನಿಮಾದ ಗಳಿಕೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಶನಿವಾರ ಈ ಸಿನಿಮಾ 20.2 ಕೋಟಿ ರೂಪಾಯಿ ಹಾಗೂ ಬುಧವಾರ 29 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 60 ಕೋಟಿ ರೂಪಾಯಿಯಷ್ಟಾಗಿದೆ. ಈ ಚಿತ್ರದ ಮೂಲಕ ಆಮಿರ್ ಖಾನ್ ಅವರು ಗೆದ್ದು ಬೀಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.