‘D50’ ಸಿನಿಮಾದ ಫಸ್ಟ್​ ಲುಕ್ ಪೋಸ್ಟರ್​ ವೈರಲ್​; ಶೂಟಿಂಗ್​ಗೆ ಸಿಕ್ಕಿದೆ ಚಾಲನೆ

Dhanush New Movie: ‘D50’ ಪೋಸ್ಟರ್​ ಭಿನ್ನವಾಗಿ ಮೂಡಿಬಂದಿದೆ. ಇದರಲ್ಲಿ ಕೆಂಪು ಬಣ್ಣ ಹೈಲೈಟ್​ ಆಗಿದೆ. ಹಾಗಾಗಿ ಇದು ಭರ್ಜರಿ ಆ್ಯಕ್ಷನ್​ ಸಿನಿಮಾ ಎಂದು ಫ್ಯಾನ್ಸ್​ ಊಹಿಸುತ್ತಿದ್ದಾರೆ.

‘D50’ ಸಿನಿಮಾದ ಫಸ್ಟ್​ ಲುಕ್ ಪೋಸ್ಟರ್​ ವೈರಲ್​; ಶೂಟಿಂಗ್​ಗೆ ಸಿಕ್ಕಿದೆ ಚಾಲನೆ
‘D50’ ಪೋಸ್ಟರ್​

Updated on: Jul 06, 2023 | 10:55 AM

ಖ್ಯಾತ ನಟ ಧನುಷ್​ (Dhanush) ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಈವರೆಗೂ ಅವರು ಅನೇಕ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಕಾಲಿವುಡ್​ (Kollywood) ಮಾತ್ರವಲ್ಲದೇ ಹಿಂದಿ ಸಿನಿಮಾಗಳಲ್ಲೂ ನಟಿಸುವ ಮೂಲಕ ಧನುಷ್​ ಅವರು ಫೇಮಸ್​ ಆಗಿದ್ದಾರೆ. ಈಗ ಅವರ ಹೊಸ ಸಿನಿಮಾ (Dhanush New Film) ಸೆಟ್ಟೇರಿದೆ. ಇದು ಅವರ 50ನೇ ಸಿನಿಮಾ ಎಂಬುದು ವಿಶೇಷ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಹಾಗಾಗಿ ಸದ್ಯಕ್ಕೆ ಇದನ್ನು ‘D50’ ಎಂದು ಕರೆಯಲಾಗುತ್ತಿದೆ.

ಧನುಷ್​ ಅವರ ಪ್ರತಿ ಸಿನಿಮಾದಲ್ಲೂ ಒಂದಿಲ್ಲೊಂದು ವಿಶೇಷತೆ ಇರುತ್ತದೆ. ಹಾಗಾಗಿ ಅವರ ಸಿನಿಮಾಗಳನ್ನು ಅಭಿಮಾನಿಗಳು ಇಷ್ಟಪಡುತ್ತಾರೆ. ಕೆಲವೇ ದಿನಗಳ ಹಿಂದೆ ಧನುಷ್​ ಅವರು ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದ ಕೆಲಸಗಳನ್ನು ಮುಗಿಸಿದರು. ಆ ಚಿತ್ರದಲ್ಲಿ ಶಿವರಾಜ್​ಕುಮಾರ್​ ಕೂಡ ನಟಿಸಿದ್ದಾರೆ. ‘ಕ್ಯಾಪ್ಟನ್​ ಮಿಲ್ಲರ್​’ ಬಳಿಕ ಧನುಷ್​ ನಟಿಸುತ್ತಿರುವ ಚಿತ್ರವೇ ‘D50’. ಈ ಸಿನಿಮಾದ ಶೂಟಿಂಗ್​ ಶುರುವಾಗಿದೆ ಎಂದು ತಿಳಿಸುವ ಸಲುವಾಗಿ ಮೊದಲ ಪೋಸ್ಟರ್ ಹಂಚಿಕೊಳ್ಳಲಾಗಿದೆ.

‘D50’ ಪೋಸ್ಟರ್​ ಭಿನ್ನವಾಗಿ ಮೂಡಿಬಂದಿದೆ. ಧನುಷ್​ ಅವರು ಕ್ಯಾಮೆರಾಗೆ ಬೆನ್ನು ಹಾಕಿ ನಿಂತಿದ್ದಾರೆ. ಶರ್ಟ್​ಲೆಸ್​ ಆಗಿ ಅವರು ಪೋಸ್​ ನೀಡಿದ್ದು, ತಲೆ ಬೋಳಿಸಿಕೊಂಡಂತಿದೆ. ಪೋಸ್ಟರ್​ನಲ್ಲಿ ಕೆಂಪು ಬಣ್ಣ ಹೈಲೈಟ್​ ಆಗಿದೆ. ಹಾಗಾಗಿ ಇದು ಭರ್ಜರಿ ಆ್ಯಕ್ಷನ್​ ಸಿನಿಮಾ ಎಂದು ಫ್ಯಾನ್ಸ್​ ಊಹಿಸುತ್ತಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ, ಈ ಸಿನಿಮಾವನ್ನು ಸ್ವತಃ ಧನುಷ್​ ಅವರು ನಿರ್ದೇಶಿಸುತ್ತಿದ್ದಾರೆ. ‘ಸನ್​ ಪಿಕ್ಚರ್ಸ್​’ ಬ್ಯಾನರ್​ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

ಇದನ್ನೂ ಓದಿ: ಪೋಷಕರಿಗೆ 150 ಕೋಟಿ ರೂಪಾಯಿ ಮನೆ ಉಡುಗೊರೆ ನೀಡಿದ ಧನುಷ್​; ಹೇಗಿದೆ ನೋಡಿ ನಿವಾಸ

ಧನುಷ್​ ಅವರು ಇತ್ತೀಚೆಗಷ್ಟೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಅವರ ಜೊತೆ ಮಕ್ಕಳಾದ ಯಾತ್ರಾ ಮತ್ತು ಲಿಂಗ ಕೂಡ ಇದ್ದರು. ದೇವಸ್ಥಾನದ ಆವರಣದಲ್ಲಿ ಕಾಣಿಸಿಕೊಂಡ ಅವರ ಫೋಟೋಗಳು ವೈರಲ್​ ಆಗಿದ್ದವು. ಧನುಷ್​ ಅವರು ಸಂಪೂರ್ಣ ತಲೆ ಬೋಳಿಸಿಕೊಂಡಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. D50 ಚಿತ್ರದಲ್ಲಿ ಅವರ ಲುಕ್​ ಹೀಗೆ ಇರಲಿದೆ ಎಂದು ಅಭಿಮಾನಿಗಳು ಊಹಿಸಿದ್ದರು. ‘D50’ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

 

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us