‘ನನಗೆ ಧುರಂಧರ್ 2, ಟಾಕ್ಸಿಕ್ ಬಗ್ಗೆ ಭಯವಿಲ್ಲ’; ನೇರವಾಗಿ ಹೇಳಿದ ನಿರ್ಮಾಪಕ

ಕಳೆದ ವರ್ಷದ ಬ್ಲಾಕ್‌ಬಸ್ಟರ್ 'ಧುರಂಧರ್' 1000 ಕೋಟಿ ರೂಪಾಯಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಇನ್ನೂ ಪ್ರಬಲ್ಯ ಸಾಧಿಸುತ್ತಿದೆ. ಇದರ ಸೀಕ್ವೆಲ್ 'ಧುರಂಧರ್ 2' ಮಾರ್ಚ್ 19ರಂದು ಬಿಡುಗಡೆಯಾಗಲಿದ್ದು, ಅದೇ ದಿನ ಯಶ್ ಅಭಿನಯದ 'ಟಾಕ್ಸಿಕ್' ಸಹ ತೆರೆಕಾಣಲಿದೆ. ಇದು ದೊಡ್ಡ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗಿದ್ದು, ಇತರ ಚಿತ್ರಗಳು ಬಿಡುಗಡೆಯನ್ನು ಮುಂದೂಡುತ್ತಿವೆ. 'ಆವಾರಾಪನ್ 2' ಚಿತ್ರದ ವಿಳಂಬಕ್ಕೆ ಬೇರೆ ಕಾರಣವಿದೆ.

‘ನನಗೆ ಧುರಂಧರ್ 2, ಟಾಕ್ಸಿಕ್ ಬಗ್ಗೆ ಭಯವಿಲ್ಲ’; ನೇರವಾಗಿ ಹೇಳಿದ ನಿರ್ಮಾಪಕ
ಯಶ್-ರಣವೀರ್
Edited By:

Updated on: Jan 12, 2026 | 8:16 AM

ಕಳೆದ ವರ್ಷ ಬಿಡುಗಡೆಯಾದ ‘ಧುರಂಧರ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಯಶಸ್ಸು ಕಾಣುತ್ತಿದೆ. ಕಳೆದ ವರ್ಷ ಸಾವಿರ ಕೋಟಿ ಗಳಿಸಿದ ಏಕೈಕ ಸಿನಿಮಾ ಅದು. ಈ ಚಿತ್ರವು ಇನ್ನೂ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಧುರಂಧರ್‌ಗೆ ಪ್ರತಿಸ್ಪರ್ಧಿಯಾಗಿ ಬೇರೆ ಯಾವುದೇ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಪ್ರತಿದಿನ ಆದಾಯದಲ್ಲಿ ಹೊಸ ಗರಿಷ್ಠ ಮಟ್ಟವನ್ನು ದಾಖಲಿಸುತ್ತಿದೆ. ಈ ಚಿತ್ರದ ಸೀಕ್ವೆಲ್ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಆ ಸಮಯದಲ್ಲಿ ‘ಟಾಕ್ಸಿಕ್’ ಕೂಡ ಬಿಡುಗಡೆ ಆಗುತ್ತಿದೆ. ಈ ಕ್ಲ್ಯಾಶ್ ವೇಳೆ ಉಳಿದ ಸಿನಿಮಾಗಳು ಹಿಂದೇಟು ಹಾಕುತ್ತಿವೆ.

ಬಾಲಿವುಡ್‌ನಲ್ಲಿ ‘ಧುರಂಧರ್’ ಚಿತ್ರದ ಕ್ರೇಜ್ ಮತ್ತು ಯಶಸ್ಸನ್ನು ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರು ಮೆಚ್ಚಿಕೊಂಡಿದ್ದಾರೆ. ‘ಧುರಂಧರ್’ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ‘ಧುರಂಧರ್’ ಚಿತ್ರದ ಮೊದಲ ಭಾಗ ಡಿಸೆಂಬರ್ 5 ರಂದು ಬಿಡುಗಡೆಯಾಯಿತು. ಈಗ ಎರಡನೇ ಭಾಗ ಮಾರ್ಚ್‌ 19ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ.

‘ಧುರಂಧರ್’ ಚಿತ್ರದ ಅದ್ಭುತ ಯಶಸ್ಸನ್ನು ನೋಡಿ, ಅನೇಕ ಬಾಲಿವುಡ್ ನಿರ್ಮಾಪಕರು ಮತ್ತು ದೊಡ್ಡ ನಟರು ಸಹ ‘ಧುರಂಧರ್ 2’ ಬಿಡುಗಡೆಯ ಸಮಯದಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಸಿದ್ಧರಿಲ್ಲ.
ಈಗ ಹಿಂದಿಯ, ‘ಆವಾರಾಪನ್ 2’ ಬಿಡುಗಡೆ ವಿಳಂಬವಾಗಲಿದೆ. ಈ ಬಗ್ಗೆ ಚಿತ್ರನಿರ್ಮಾಪಕ ಮುಖೇಶ್ ಭಟ್ ಸ್ಪಷ್ಟನೆ ನೀಡಿದ್ದಾರೆ. ‘ಧುರಂಧರ್ 2 ಅಥವಾ ಯಶ್ ಅಭಿನಯದ ಟಾಕ್ಸಿಕ್ ಚಿತ್ರದೊಂದಿಗಿನ ಸ್ಪರ್ಧೆಯಿಂದಾಗಿ ಆವಾರಪನ್ 2 ತಡವಾಗಿ ಬಿಡುಗಡೆಯಾಗುತ್ತಿಲ್ಲ’ ಎಂದು ಮುಖೇಶ್ ಭಟ್ ಹೇಳಿದ್ದಾರೆ.

‘ಆವಾರಪನ್ 2’ ಚಿತ್ರದಲ್ಲಿ ಇಮ್ರಾನ್ ಹಶ್ಮಿ ನಾಯಕನಾಗಿ ನಟಿಸುತ್ತಿದ್ದಾರೆ. ಆವರಿಗೆ ಆದ ಗಾಯದಿಂದಾಗಿ ಚಿತ್ರದ ಚಿತ್ರೀಕರಣ ಮುಂದೂಡಲಾಗಿತ್ತು. ಇದರಿಂದಾಗಿ ಚಿತ್ರದ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಮುಖೇಶ್ ಭಟ್ ಹೇಳಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಸಿನಿಮಾದ ‘ರಾಜಕೀಯ’ದ ಬಗ್ಗೆ ಹೃತಿಕ್ ರೋಷನ್ ಅಸಮಾಧಾನ

‘ಧುರಂಧರ್ 2’ ಹಾಗೂ ‘ಟಾಕ್ಸಿಕ್’ ತಂಡಗಳು ಡೇಟ್ ಬದಲಿಸಿಕೊಳ್ಳಲು ರೆಡಿ ಇಲ್ಲ. ಈ ಕಾರಣದಿಂದ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಕ್ಲ್ಯಾಶ್ ನಿರೀಕ್ಷಿಸಬಹುದಾಗಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಯಶ್ ಅವರು ದೊಡ್ಡ ಮಟ್ಟದಲ್ಲಿ ‘ಟಾಕ್ಸಿಕ್’ ಸಿನಿಮಾನ ತರುವ ನಿರೀಕ್ಷೆಯಲ್ಲಿ ಇದ್ದಾರೆ.  ಈ ಚಿತ್ರ ದೊಡ್ಡ ಬಜೆಟ್ ಸಿನಿಮಾ ಕೂಡ ಹೌದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.