ದಿ ಡೆವಿಲ್, ಅಖಂಡ 2, ಧುರಂಧರ್ ಸಿನಿಮಾಗಳ ನಡುವೆ ಕ್ಲ್ಯಾಶ್: ಯಾರಿಗೆ ಲಾಭ?

ಗಲ್ಲಾಪೆಟ್ಟಿಗೆಯಲ್ಲಿ ‘ದಿ ಡೆವಿಲ್’, ‘ಧುರಂಧರ್’ ಹಾಗೂ ‘ಅಖಂಡ 2’ ಸಿನಿಮಾಗಳು ಪರಸ್ಪರ ಫೈಟ್ ನೀಡುತ್ತಿವೆ. ‘ಧುರಂಧರ್’ ಸಿನಿಮಾವನ್ನು 2ನೇ ವಾರ ಕೂಡ ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಬಾಲಯ್ಯ ಅಭಿನಯದ ‘ಅಖಂಡ 2’ ಸಿನಿಮಾಗೆ ಬಹುತೇಕ ನೆಗೆಟಿವ್ ಪ್ರತಿಕ್ರಿಯೆ ಸಿಗುತ್ತಿದೆ. ಈ ಬಗ್ಗೆ ಇಲ್ಲಿದೆ ವಿವರ..

ದಿ ಡೆವಿಲ್, ಅಖಂಡ 2, ಧುರಂಧರ್ ಸಿನಿಮಾಗಳ ನಡುವೆ ಕ್ಲ್ಯಾಶ್: ಯಾರಿಗೆ ಲಾಭ?
Akhanda 2, Dhurandhar, The Devil

Updated on: Dec 12, 2025 | 4:40 PM

ಡಿಸೆಂಬರ್ 2ನೇ ವಾರದಲ್ಲಿ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್​​ನಲ್ಲಿ ಕ್ಲ್ಯಾಶ್ ಏರ್ಪಟ್ಟಿದೆ. ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗಿ ಒಂದಕ್ಕೊಂದು ಪೈಪೋಟಿ ನೀಡುತ್ತಿವೆ. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ದಿ ಡೆವಿಲ್’ (The Devil), ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ (Dhurandhar) ಹಾಗೂ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ (Akhanda 2) ಸಿನಿಮಾಗಳು ಪೈಪೋಟಿಗೆ ಇಳಿದಿವೆ. ಈ ಮೂರೂ ಸಿನಿಮಾಗಳು ಹೆಚ್ಚು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿವೆ. ಈ ರೇಸ್​​ನಲ್ಲಿ ಯಾರಿಗೆ ಹೆಚ್ಚು ಲಾಭ ಆಗುತ್ತಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

‘ಧುರಂಧರ್’ ಸಿನಿಮಾ ಬಿಡುಗಡೆ ಆಗಿದ್ದು ಡಿಸೆಂಬರ್ 5ರಂದು. ದಿನ ಕಳೆದಂತೆ ಈ ಸಿನಿಮಾಗೆ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಕ್ಕಿದೆ. ಉತ್ತಮ ವಿಮರ್ಶೆ ಬಂದ ಹಿನ್ನೆಲೆಯಲ್ಲಿ ಡಿಸೆಂಬರ್ 2ನೇ ವಾರ ಈ ಸಿನಿಮಾದ ಹವಾ ಜೋರಾಗಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಬಿಡುಗಡೆ ಆದ ಅಖಂಡ 2 ಮತ್ತು ದಿ ಡೆವಿಲ್ ಸಿನಿಮಾಗಳಿಗೆ ‘ಧುರಂಧರ್’ ಸಿಕ್ಕಾಪಟ್ಟೆ ಪೈಪೋಟಿ ನೀಡುತ್ತಿದೆ.

ಡಿಸೆಂಬರ್ 11ರಂದು ‘ದಿ ಡೆವಿಲ್’ ಸಿನಿಮಾ ತೆರೆಕಂಡಿತು. ಈ ಚಿತ್ರದಲ್ಲಿ ದರ್ಶನ್ ಅವರು ದ್ವಿಪಾತ್ರ ಮಾಡಿದ್ದಾರೆ. ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡಿದ್ದಾರೆ. ಪೊಲಿಟಿಕಲ್ ಕಥಾಹಂದರ ಈ ಚಿತ್ರದಲ್ಲಿ ಇದೆ. ಸಿನಿಮಾಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನ ಈ ಸಿನಿಮಾ ಅಂದಾಜು 10 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕರ್ನಾಟಕದಲ್ಲೂ ‘ಧುರಂಧರ್’ ಪೈಪೋಟಿ ಇರುವುದರಿಂದ ‘ದಿ ಡೆವಿಲ್’ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ.

ನಂದಮೂರಿ ಬಾಲಕೃಷ್ಣ ಅವರು ‘ಅಖಂಡ 2’ ಸಿನಿಮಾದಲ್ಲಿ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಎಂದಿನ ಶೈಲಿಯಲ್ಲಿ ಲಾಜಿಕ್ ಇಲ್ಲದೇ ಮ್ಯಾಜಿಕ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಈ ಚಿತ್ರಕ್ಕೆ ಬಹುತೇಕ ನೆಗೆಟಿವ್ ವಿಮರ್ಶೆ ಬಂದಿದೆ. ಇದರಿಂದಾಗಿ ಬಾಕ್ಸ್ ಆಫೀಸ್​ ಕ್ಲ್ಯಾಶ್​​ನಲ್ಲಿ ಈ ಸಿನಿಮಾಗೆ ಹಿನ್ನಡೆ ಆಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ‘ಅಖಂಡ 2’: ಮ್ಯಾಜಿಕ್ ಮಾತ್ರವನ್ನೇ ನಂಬಿಕೊಂಡ ಲಾಜಿಕ್​​ಲೆಸ್ ಸಿನಿಮಾ

ಮೂರೂ ಸಿನಿಮಾಗಳಿಗೆ ಹೋಲಿಸಿದರೆ ಸದ್ಯದ ಪರಿಸ್ಥಿತಿಯಲ್ಲಿ ‘ಧುರಂಧರ್’ ಬಹಳ ಗಟ್ಟಿಯಾಗಿ ನಿಂತಿದೆ. ಎರಡನೇ ವಾರದಲ್ಲೂ ಈ ಸಿನಿಮಾದ ಕ್ರೇಜ್ ಜೋರಾಗಿದೆ. ಪ್ರೇಕ್ಷಕರು ಮತ್ತೆ ಮತ್ತೆ ಈ ಸಿನಿಮಾವನ್ನು ವೀಕ್ಷಿಸುತ್ತಿದ್ದಾರೆ. ಮೊದಲ ವೀಕೆಂಡ್ ಬಳಿಕ 2ನೇ ವೀಕೆಂಡ್​​ನಲ್ಲೂ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಆಗಲಿದೆ. ಈಗಾಗಲೇ ಈ ಸಿನಿಮಾಗೆ 200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಆಗಿದೆ. ‘ದಿ ಡೆವಿಲ್’ ಸಿನಿಮಾಗೆ ವಿಶ್ರಪ್ರತಿಕ್ರಿಯೆ ಹಾಗೂ ‘ಅಖಂಡ 2’ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಸಿಕ್ಕಿರುವುದರಿಂದ ‘ಧುರಂಧರ್’ ಸಿನಿಮಾಗೆ ಲಾಭ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.