AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಪ್ರಿಯರಿಗೆ ಖುಷಿ ಸುದ್ದಿ; ಒಟಿಟಿಗೆ ಬರೋಕೆ ರೆಡಿ ಆಯ್ತು ‘ಧುರಂಧರ್’

'ಧುರಂಧರ್' ಚಿತ್ರಮಂದಿರಗಳಲ್ಲಿ ಉತ್ತಮ ಗಳಿಕೆ ಕಂಡ ನಂತರ, ಕೊನೆಗೂ ಜನವರಿ 30ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ರಣವೀರ್ ಸಿಂಗ್ ಅಭಿನಯದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 1300 ಕೋಟಿಗೂ ಹೆಚ್ಚು ಗಳಿಸಿ ಇತಿಹಾಸ ನಿರ್ಮಿಸಿದೆ. ಮೊದಲಿಗೆ 30 ದಿನಗಳಲ್ಲಿ OTTಗೆ ಬರಬೇಕಿದ್ದರೂ, ಅದರ ಅಭೂತಪೂರ್ವ ಯಶಸ್ಸಿನ ಕಾರಣದಿಂದ ದಿನಾಂಕವನ್ನು ಮುಂದೂಡಲಾಯಿತು.

ಸಿನಿಪ್ರಿಯರಿಗೆ ಖುಷಿ ಸುದ್ದಿ; ಒಟಿಟಿಗೆ ಬರೋಕೆ ರೆಡಿ ಆಯ್ತು ‘ಧುರಂಧರ್’
ಧುರಂಧರ್
ರಾಜೇಶ್ ದುಗ್ಗುಮನೆ
|

Updated on: Jan 22, 2026 | 3:03 PM

Share

‘ಧುರಂಧರ್’ ಸಿನಿಮಾ (Dhurandhar) ಬಾಕ್ಸ್​ ಆಫೀಸ್​​​ನಲ್ಲಿ ಮೇಲುಗೈ ಸಾಧಿಸುತ್ತಿದೆ. ರಿಲೀಸ್ ಆಗಿ ಒಂದೂವರೆ ತಿಂಗಳು ಕಳೆದರೂ ಸಿನಿಮಾ ಇನ್ನೂ ಕೋಟಿಗಳಲ್ಲಿ ಕಲೆಕ್ಷನ್ ಮಾಡುತ್ತಿದೆ. ನಿರಂತರ ನಾಗಾಲೋಟದ ನಂತರ ‘ಧುರಂದರ್’ ಸಿನಿಮಾ ಒಟಿಟಿಗೆ ಬರಲು ರೆಡಿ ಆಗಿದೆ. ನೆಟ್​​ಫ್ಲಿಕ್ಸ್​​ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಇದರ ದಿನಾಂಕ ಕೂಡ ರಿವೀಲ್ ಆಗಿದೆ.

ರಣವೀರ್ ಸಿಂಗ್, ಅಕ್ಷಯ್ ಖನ್ನಾ ಮೊದಲಾದವರು ನಟಿಸಿದ ‘ಧುರಂಧರ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ 5ರಂದು ಥಿಯೇಟರ್​​​ನಲ್ಲಿ ರಿಲೀಸ್ ಆಯಿತು. ಸಿನಿಮಾ ರಿಲೀಸ್​​​ಗೂ ಮೊದಲು ಚಿತ್ರದ ಬಗ್ಗೆ ಸಾಕಷ್ಟು ನೆಗೆಟಿವಿಟಿ ಹರಡಿತ್ತು. ಆದರೆ, ಎಲ್ಲವನ್ನೂ ಚಿತ್ರ ಮೆಟ್ಟಿ ನಿಂತಿದೆ. ಈ ಸಿನಿಮಾ ಯಾವಾಗ ಒಟಿಟಿಗೆ ಬರುತ್ತದೆ ಎಂದು ಕೆಲವರು ಕಾದು ಕುಳಿತಿದ್ದಾರೆ. ಅವರಿಗೆ ಸಿಹಿ ಸುದ್ದಿ ಸಿಕ್ಕಿದೆ.

‘ಧುರಂಧರ್’ ಸಿನಿಮಾ ಜನವರಿ 30ರಂದು ನೆಟ್​​ಫ್ಲಿಕ್ಸ್ ಮೂಲಕ ಪ್ರಸಾರ ಆಂಭಿಸಲಿದೆ. ಈ ಮೊದಲಿನ ಯೋಜನೆ ಪ್ರಕಾರ 30 ದಿನಕ್ಕೆ ಚಿತ್ರವನ್ನು ಒಟಿಟಿಗೆ ತರೋ ಆಲೋಚನೆ ಇತ್ತು. ಆದರೆ, ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಕಲೆಕ್ಷನ್ ಆಗಿದ್ದರಿಂದ ಸಿನಿಮಾ ಒಟಿಟಿ ರಿಲೀಸ್ ದಿನಾಂಕವನ್ನು 25 ದಿನ ಮತ್ತೆ ಮುಂದಕ್ಕೆ ಹಾಕಲಾಯಿತು. ಈಗ ಅಂತಿಮವಾಗಿ ಡಿಸೆಂಬರ್ 30ರಂದು ಸಿನಿಮಾ ಒಟಿಟಿಗೆ ಬರಲಿದೆ.

ಇದನ್ನೂ ಓದಿ: ‘ಧುರಂಧರ್’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣ್ವೀರ್ ಸಿಂಗ್

ಮಾರ್ಚ್ 19ರಂದು ‘ಧುರಂಧರ್ 2’ ಥಿಯೇಟರ್​​ ಅಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಮೊದಲ ಭಾಗವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲೇಬೇಕಾದ ಅನಿವಾರ್ಯತೆ ತಂಡಕ್ಕೆ ಇದೆ. ಅಲ್ಲದೆ, ಮೊದಲ ಭಾಗವನ್ನು ಥಿಯೇಟರ್​​​ನಲ್ಲಿ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಿಸಿ ಇಷ್ಟಪಟ್ಟರೆ, ಸೀಕ್ವೆಲ್​​​ಗೆ ಸಹಕಾರಿ ಆಗಲಿದೆ. ‘ಧುರಂಧರ್’ ಚಿತ್ರವನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್​ದಾರೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು ಸ್ಪೈ ಆಗಿ ಕಾಣಿಸಿಕೊಂಡಿದ್ದಾರೆ. ಹಿಂದಿಯಲ್ಲಿ ಮಾತ್ರ ರಿಲೀಸ್ ಆದರೂ ಚಿತ್ರ ವಿಶ್ವಾದ್ಯಂತ 1300 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ವಾಸ್ತವಕ್ಕೆ ಬರಲು ಒದ್ದಾಡಿದ ಗಿಲ್ಲಿ; ಹೊಸ ವಿಡಿಯೋ ವೈರಲ್
ವಾಸ್ತವಕ್ಕೆ ಬರಲು ಒದ್ದಾಡಿದ ಗಿಲ್ಲಿ; ಹೊಸ ವಿಡಿಯೋ ವೈರಲ್
ನರೇಗಾ ಹೆಸರು ಬದಲಾವಣೆ ವಿವಾದ, ರಾಜ್ಯಪಾಲರ ಭಾಷಣ
ನರೇಗಾ ಹೆಸರು ಬದಲಾವಣೆ ವಿವಾದ, ರಾಜ್ಯಪಾಲರ ಭಾಷಣ
ಕೊನೆಯ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿ 3 ರನ್​ಗಳಿಂದ ಗೆದ್ದ ಹೋಬಾರ್ಟ್​ ಪಡೆ
ಕೊನೆಯ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿ 3 ರನ್​ಗಳಿಂದ ಗೆದ್ದ ಹೋಬಾರ್ಟ್​ ಪಡೆ
ಬೀದಿಯಲ್ಲಿ ವ್ಯಕ್ತಿಯ ಬೆನ್ನಟ್ಟಿ ಚಾಕುವಿನಿಂದ ಇರಿದು ಪುರುಷರ ಗುಂಪು
ಬೀದಿಯಲ್ಲಿ ವ್ಯಕ್ತಿಯ ಬೆನ್ನಟ್ಟಿ ಚಾಕುವಿನಿಂದ ಇರಿದು ಪುರುಷರ ಗುಂಪು
ಮಾಲೀಕರ ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ
ಮಾಲೀಕರ ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ
2 ಓವರ್​ಗಳ ಮೂಲಕ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಅಫ್ಘಾನ್ ಸ್ಪಿನ್ನರ್
2 ಓವರ್​ಗಳ ಮೂಲಕ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಅಫ್ಘಾನ್ ಸ್ಪಿನ್ನರ್