AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್​’ಗೆ ದೊಡ್ಡ ಹೊಡೆತ ಕೊಟ್ಟ ನೆಪೋ ಕಿಡ್ ಚಿತ್ರ

ಆದಿತ್ಯ ಧಾರ್ ನಿರ್ದೇಶನದ 'ಧುರಂಧರ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಈಗ ಅಮಿತಾಭ್ ಮೊಮ್ಮಗ ಅಗಸ್ತ್ಯ ನಂದ ಅವರ ಚೊಚ್ಚಲ ಚಿತ್ರ 'ಇಕ್ಕಿಸ್' ಬಿಡುಗಡೆಯಾಗಿದೆ. ಇದರ ಪರಿಣಾಮವಾಗಿ, 'ಧುರಂಧರ್' ಚಿತ್ರದ ಪ್ರದರ್ಶನಗಳನ್ನು ಅರ್ಧದಷ್ಟು ಕಡಿತಗೊಳಿಸಲಾಗಿದೆ. ಒಂದೇ ವಿತರಕರ ಕಾರಣದಿಂದ 'ಇಕ್ಕಿಸ್'ಗೆ ಆದ್ಯತೆ ನೀಡಲಾಗಿದೆ.

‘ಧುರಂಧರ್​’ಗೆ ದೊಡ್ಡ ಹೊಡೆತ ಕೊಟ್ಟ ನೆಪೋ ಕಿಡ್ ಚಿತ್ರ
ಇಕ್ಕಿಸ್- ಧುರಂಧರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 02, 2026 | 11:01 AM

Share

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ ಬಿಡುಗಡೆಯಾದಾಗಿನಿಂದ ಸಾಕಷ್ಟು ಮೆಚ್ಚುಗೆ ಪಡೆದಿದೆ. ಗಳಿಕೆ ಕೂಡ ಚೆನ್ನಾಗಿಯೇ ಆಗುತ್ತಿದೆ. ಈ ಚಿತ್ರದ ಮುಂದೆ, ‘ಕಿಸ್ ಕಿಸ್ಕೋ ಪ್ಯಾರ್ ಕರೂ 2’, ‘ಅವತಾರ್: ಫೈರ್ ಅಂಡ್ ಆ್ಯಶ್’ ಮತ್ತು ‘ತು ಮೇರಿ ಮೇ ತೇರಾ ಮೇ ತೇರಾ ತು ಮೇರಿ’ ಕೂಡ ಬಾಕ್ಸ್ ಆಫೀಸ್‌ನಲ್ಲಿ ಉಳಿಯಲು ವಿಫಲವಾಯಿತು. ಚಿತ್ರಮಂದಿರಗಳಲ್ಲಿ ಪರದೆ ಹಂಚಿಕೆ ಮತ್ತು ವಿತರಣೆಯ ವಿಷಯದಲ್ಲಿ ‘ಧುರಂಧರ್’ ಚಿತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಆದರೆ ಈಗ ‘ಧುರಂಧರ್’ ಹೊಸ ವರ್ಷದಲ್ಲಿ ದೊಡ್ಡ ಹೊಡೆತ ಬಿದ್ದಿದೆ.

‘ಧುರಂಧರ್’ ಚಿತ್ರಕ್ಕೆ ನೀಡಿದ್ದ ಶೇ. 50 ರಷ್ಟು ಪ್ರದರ್ಶನಗಳನ್ನು ತೆಗೆದು ಹಾಕಲಾಗಿದೆಯಂತೆ, ಅದು ಕೂಡ ಹೊಸ ಸ್ಟಾರ್ ಕಿಡ್‌ನ ಚಿತ್ರದ ಕಾರಣದಿಂದಾಗಿ. ಈ ಸ್ಟಾರ್ ಕಿಡ್‌ನ ಚೊಚ್ಚಲ ಚಿತ್ರ ಜನವರಿ 1, 2026 ರಂದು ಬಿಡುಗಡೆಯಾಯಿತು. ಅದರ ನಂತರ, ‘ಧುರಂಧರ್’ ಚಿತ್ರದ ಪ್ರದರ್ಶನಗಳನ್ನು ಕಡಿಮೆ ಮಾಡಲಾಯಿತು ಎನ್ನಲಾಗಿದೆ.

ಈ ಸ್ಟಾರ್ ಮಗ ಬೇರೆ ಯಾರೂ ಅಲ್ಲ, ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ. ಅಗಸ್ತ್ಯ ಅವರ ‘ಇಕ್ಕಿಸ್’ ಚಿತ್ರ ಹೊಸ ವರ್ಷದ ಮೊದಲ ದಿನದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇದು ದಿವಂಗತ ನಟ ಧರ್ಮೇಂದ್ರ ಅವರ ಕೊನೆಯ ಚಿತ್ರ.

‘ಇಕ್ಕಿಸ್’ ಮತ್ತು ‘ಧುರಂಧರ್’ ಚಿತ್ರಗಳ ವಿತರಕರು ಮತ್ತು ನಿರ್ಮಾಪಕರು ಒಂದೇ. ಆದ್ದರಿಂದ, ರಣವೀರ್ ಸಿಂಗ್ ನಟಿಸಿದ ‘ಧುರಂಧರ್’ ಚಿತ್ರದ ಪ್ರದರ್ಶನಗಳನ್ನು ಕಡಿಮೆ ಮಾಡಿದರೂ ಅವರಿಗೆ ಯಾವುದೇ ಅಭ್ಯಂತರವಿರಲಿಲ್ಲ.ಈ ಚಿತ್ರವು ಈಗಾಗಲೇ ಉತ್ತಮ ಹಣ ಗಳಿಸಿದೆ. ‘ಇಕ್ಕಿಸ್’ ಚಿತ್ರಕ್ಕೆ ಆ ಅವಕಾಶ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ‘ಧುರಂಧರ್’ ಬಿಡುಗಡೆಯಾದ ಐದು ವಾರಗಳನ್ನು ಪೂರ್ಣಗೊಳಿಸಿರುವುದರಿಂದ, ಆ ಚಿತ್ರದ ಪ್ರದರ್ಶನ ಏರಿಸಲಾಗಿದೆ.

ಇದನ್ನೂ ಓದಿ: ಕನ್ನಡತಿ ಭೂಮಿ ಶೆಟ್ಟಿ ಸಿನಿಮಾನಲ್ಲಿ ‘ಧುರಂಧರ್’ ಸ್ಟಾರ್ ಅಕ್ಷಯ್ ಖನ್ನಾ

‘ಧುರಂಧರ್’ ಪ್ರದರ್ಶನ ಕಾಣತ್ತಿದ್ದ ಸಿಂಗಲ್ ಸ್ಕ್ರೀನ್‌ಗಳಲ್ಲಿ ಈಗ’ಇಕ್ಕಿಸ್’ ಪ್ರದರ್ಶನ ಕಾಣಲಿದೆ. ಆದ್ದರಿಂದ, ಅಗಸ್ತ್ಯ ಅವರ ಚಿತ್ರಕ್ಕೆ ದೊಡ್ಡ ಅನುಕೂಲ ಸಿಗಲಿದೆ. ಮುಂಬೈನಲ್ಲಿ ಕಾರ್ತಿಕ್ ಆರ್ಯನ್ ಮತ್ತು ಅನನ್ಯ ಪಾಂಡೆ ಅವರ ‘ತು ಮೇರಿ ಮೈ ತೇರಾ ಮೈ ತೇರಾ ತು ಮೇರಿ’ಗಿಂತ ‘ಇಕ್ಕಿಸ್’ ಚಿತ್ರಕ್ಕೆ ಹೆಚ್ಚಿನ ಶೋ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.