‘ವಾರ್ 2’ ಹಂಚಿಕೆ ಮಾಡಿ ಕೈ ಸುಟ್ಟುಕೊಂಡ ನಾಗ ವಂಶಿ ಚಿತ್ರರಂಗಕ್ಕೆ ಗುಡ್​ ಬೈ?

Producer Naga Vamsi: ನಾಗ ವಂಶಿ ತೆಲುಗು ಚಿತ್ರರಂಗದ ಯುವ ಮತ್ತು ಧೈರ್ಯವಂತ ಸಿನಿಮಾ ನಿರ್ಮಾಪಕ. ಸಂದರ್ಶನಗಳಲ್ಲಿಯೂ ಸಿನಿಮಾಗಳ ಬಗ್ಗೆ, ನಿರ್ಮಾಣ ವ್ಯವಹಾರದ ಬಗ್ಗೆ ಮುಚ್ಚುಮರೆಯಿಲ್ಲದೆ ಧೈರ್ಯದಿಂದ ಉತ್ತರಗಳನ್ನು ನೀಡುತ್ತಾರೆ. ‘ವಾರ್ 2’ ವಿತರಣೆ ಸೇರಿದಂತೆ ಅವರ ನಿರ್ಮಾಣದ ಕೆಲ ಸಿನಿಮಾಗಳು ಸೋತ ಕಾರಣ ಅವರು ಚಿತ್ರರಂಗ ಬಿಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

‘ವಾರ್ 2’ ಹಂಚಿಕೆ ಮಾಡಿ ಕೈ ಸುಟ್ಟುಕೊಂಡ ನಾಗ ವಂಶಿ ಚಿತ್ರರಂಗಕ್ಕೆ ಗುಡ್​ ಬೈ?
Naga Vamsi
Updated By: ಮಂಜುನಾಥ ಸಿ.

Updated on: Aug 21, 2025 | 6:57 PM

ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್​ಟಿಆರ್ (Jr NTR) ನಟನೆಯ ‘ವಾರ್ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಂದುಕೊಂಡಂತೆ ಯಶಸ್ಸು ಕಂಡಿಲ್ಲ.  ಈ ಸಿನಿಮಾ ಪ್ರೇಕ್ಷಕರನ್ನು ನಿರಾಸೆಗೊಳಿಸಿದೆ. ಸಿನಿಮಾದಲ್ಲಿ ಯಾವುದೇ ಕಥೆ ಇಲ್ಲ ಎಂದು ಅನೇಕರು ಹೇಳಿದ್ದಾರೆ. ಈ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಮೊದಲ ಕೆಲ ದಿನ ಅಬ್ಬರದ ಕಲೆಕ್ಷನ್ ಮಾಡಿತು. ನಂತರ ಸಂಖ್ಯೆ ಇಳಿಕೆ ಆಗಿದೆ. ಈಗ ಈ ಚಿತ್ರದ ತೆಲುಗು ಹಂಚಿಕೆದಾರ ನಾಗ ವಂಶಿ ಅವರು ಚಿತ್ರರಂಗದಿಂದ ದೂರ ಇರಲು ನಿರ್ಧರಿಸಿದ್ದಾರೆ ಎಂದು ವರದಿ ಆಗಿತ್ತು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.

‘ವಾರ್ 2’ ಹಂಚಿಕೆ ಮಾಡಿ ನಾಗ ವಂಶಿ ಕೈ ಸುಟ್ಟುಕೊಂಡಿದ್ದಾರೆ. ಇದರಿಂದ ಅವರು ಚಿತ್ರರಂಗಕ್ಕೆ ಗುಡ್​ಬೈ ಹೇಳುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ನಾಗ ವಂಶಿ ಅವರು ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ. ‘ಏನು ಎಲ್ಲರೂ ನನ್ನ ಮಿಸ್ ಮಾಡಿಕೊಳ್ಳುತ್ತಿದ್ದೀರಾ? ವಂಶಿ ಹಾಗೆ, ವಂಶಿ ಹೀಗೆ ಎಂದು ಸುದ್ದಿ ಹರಿದಾಡುತ್ತಿದೆ. ಟ್ವಿಟರ್​ನಲ್ಲಿ ಸಾಕಷ್ಟು ಬರಹಗಾರರು ಇದ್ದಾರೆ. ನಿಮ್ಮ ಡಿಸಪಾಯಿಂಟ್ ಮಾಡಿದ್ದಕ್ಕೆ ಕ್ಷಮೆ ಇರಲಿ. ಆ ಸಮಯ ಇನ್ನೂ ಬಂದಿಲ್ಲ. ಅದಕ್ಕೆ ಇನ್ನೂ 10-15 ವರ್ಷ ಇದೆ.  ಸಿನಿಮಾಗಾಗಿ, ಸಿನಮಾಗೋಸ್ಕರ ಯಾವಾಗಲೂ ಇರುತ್ತೇನೆ. ‘ಮಾಸ್ ಜಾತ್ರಾ’ ಮೂಲಕ ಸಿಗೋಣ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ತೀವ್ರವಾಗಿ ಕುಸಿದ ‘ಕೂಲಿ’ ಕಲೆಕ್ಷನ್; ಒಂದಂಕಿಗೆ ಬಂತು ‘ವಾರ್ 2’ ಗಳಿಕೆ

ಅಯಾನ್ ಮುಖರ್ಜಿ ಅವರು ‘ವಾರ್ 2’ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಬಜೆಟ್ 300-400 ಕೋಟಿ ರೂಪಾಯಿ ಇದೆ. ಯಶ್ ರಾಜ್ ಫಿಲ್ಮ್ಸ್ ಇದನ್ನು ನಿರ್ಮಾಣ ಮಾಡಿದೆ. ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್​ಟಿಆರ್ ಇದರಲ್ಲಿ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ, ಅನಿಲ್ ಕಪೂರ್ ಹಾಗೂ ಅಶುತೋಷ್ ರಾಣಾ ಇದರಲ್ಲಿ ನಟಿಸಿದ್ದಾರೆ.

‘ವಾರ್ 2’ ಕಲೆಕ್ಷನ್ 200 ಕೋಟಿ ರೂಪಾಯಿ ಅತ್ತ ಸಾಗುತ್ತಿದೆ. ಆದರೆ, ಸಿನಿಮಾದ ಬಜೆಟ್​ಗೆ ಹೋಲಿಸಿದರೆ ಈ ಕಲೆಕ್ಷನ್​ನಿಂದ ನಿರ್ಮಾಪಕರಿಗೆ ಲಾಭ ಆಗುವುದಿಲ್ಲ. ಈ ಸಿನಿಮಾ 500 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದರೆ ಮಾತ್ರ ಸಿನಿಮಾದಿಂದ ನಿರ್ಮಾಪಕರಿಗ ಲಾಭ ಆಗಲಿದೆ. ಆದರೆ, ಸದ್ಯ ಮಟ್ಟಿಗೆ ಅದು ಅಸಾಧ್ಯವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ