‘ಕಲ್ಕಿ 2’ ಬಗ್ಗೆ ಅಪ್​ಡೇಟ್ ಕೊಟ್ಟ ನಾಗ್ ಅಶ್ವಿನ್, ಚಿತ್ರೀಕರಣ ಯಾವಾಗ ಶುರು?

|

Updated on: Apr 06, 2025 | 3:06 PM

Kalki 2: ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ಸಿನಿಮಾದಲ್ಲಿ ಪೌರಾಣಿಕ ಮತ್ತು ಭವಿಷ್ಯದ ಕತೆ ಹೇಳಲಾಗಿತ್ತು. ಈ ಸಿನಿಮಾದ ಎರಡನೇ ಭಾಗದ ಬಗ್ಗೆ ಇದೀಗ ನಿರ್ದೇಶಕ ನಾಗ್ ಅಶ್ವಿನ್ ಮಾತನಾಡಿದ್ದಾರೆ. ಸಿನಿಮಾದ ಶೂಟಿಂಗ್ ಯಾವಾಗ ಪ್ರಾರಂಭ ಆಗಲಿದೆ ಎಂಬುದನ್ನು ತಿಳಿಸಿದ್ದಾರೆ.

‘ಕಲ್ಕಿ 2’ ಬಗ್ಗೆ ಅಪ್​ಡೇಟ್ ಕೊಟ್ಟ ನಾಗ್ ಅಶ್ವಿನ್, ಚಿತ್ರೀಕರಣ ಯಾವಾಗ ಶುರು?
Kalki 2898 Ad
Follow us on

ಪ್ರಭಾಸ್ (Prabhas), ಅಮಿತಾಬ್ ಬಚ್ಚನ್ (Amitabh Bachchan), ದೀಪಿಕಾ ಪಡುಕೋಣೆ (Deepika Padukone) ಇನ್ನೂ ಹಲವಾರು ತಾರೆಯರು ನಟಿಸಿದ್ದ ‘ಕಲ್ಕಿ 2898 ಎಡಿ’ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಯಶಸ್ವಿಯಾಗಿತ್ತು. ಸಿನಿಮಾ, ಮಹಾಭಾರತದ ಕತೆಯ ಜೊತೆಗೆ ಭವಿಷ್ಯದ ಕತೆಯನ್ನು ಒಳಗೊಂಡಿತ್ತು. ಭವಿಷ್ಯ ಮತ್ತು ಪೌರಾಣಿಕ ಕತೆಯನ್ನು ಬ್ಲೆಂಡ್ ಮಾಡಿರುವ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಸಿನಿಮಾದ ಮೊದಲ ಭಾಗವಷ್ಟೆ ಆಗ ಬಿಡುಗಡೆ ಆಗಿದ್ದು, ಎರಡನೇ ಭಾಗದ ಚಿತ್ರೀಕರಣ ಇನ್ನಷ್ಟೆ ಆಗಬೇಕಿದೆ. ಇದೀಗ ಸಿನಿಮಾ ಬಗ್ಗೆ ನಿರ್ದೇಶಕ ನಾಗ್ ಅಶ್ವಿನ್ ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೆ ನಾಗ್ ಅಶ್ವಿನ್, ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೆಲ ಮಾಧ್ಯಮದವರು ಅವರನ್ನು ಸುತ್ತುವರೆದರು. ಈ ವೇಳೆ ಮಾತನಾಡಿದ ನಾಗ್ ಅಶ್ವಿನ್, ‘ಕಲ್ಕಿ 2’ ಸಿನಿಮಾದ ಚಿತ್ರಕತೆ ರೆಡಿ ಮಾಡುವ ಕಾರ್ಯ ಈಗ ನಡೆಯುತ್ತಿದೆ. ಇನ್ನು ಕೆಲ ತಿಂಗಳಲ್ಲಿ ಚಿತ್ರಕತೆ ಫೈನಲ್ ಆಗಲಿದ್ದು, ಸಿನಿಮಾದ ಚಿತ್ರೀಕರಣ ಇದೇ ವರ್ಷದ ಕೊನೆಗೆ ಪ್ರಾರಂಭ ಆಗಲಿದೆ ಎಂದಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ಅವರ ನಿರ್ದೇಶನದ ‘ಎವಡೇ ಸುಬ್ರಹ್ಮಣ್ಯಂ’ ಸಿನಿಮಾದ ರೀ ರಿಲೀಸ್ ಪ್ರಚಾರ ಸಂದರ್ಭದಲ್ಲಿಯೂ ಈ ಬಗ್ಗೆ ಮಾತನಾಡಿದ್ದ ನಾಗ್ ಅಶ್ವಿನ್, ‘ಕಲ್ಕಿ 2’ ಸಿನಿಮಾದಲ್ಲಿ ಪ್ರಭಾಸ್ ಪಾತ್ರಕ್ಕೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇರಲಿದೆ. ಅದು ಮಾತ್ರವೇ ಅಲ್ಲದೆ ಈ ಸಿನಿಮಾ ಪ್ರಮುಖವಾಗಿ ಕರ್ಣ ಮತ್ತು ಅಶ್ವತ್ಥಾಮನ ಪಾತ್ರದ ಕುರಿತಾಗಿಯೇ ಆಗಿರಲಿದೆ ಎಂದಿದ್ದಾರೆ. ‘ಕಲ್ಕಿ 2’ ಸಿನಿಮಾನಲ್ಲಿ ಕಮಲ್ ಹಾಸನ್​ರ ಪಾತ್ರಕ್ಕೂ ಹೆಚ್ಚಿನ ಸ್ಕೋಪ್ ಇರಲಿದೆ ಎಂಬುದಾಗಿ ನಾಗ್ ಅಶ್ವಿನ್ ಹೇಳಿದ್ದರು.

ಇದನ್ನೂ ಓದಿ
ಅನುಮತಿ ಇಲ್ಲದೆ ಚಿತ್ರೀಕರಣ, ರಾಣಾ ಸಿನಿಮಾ ಮೇಲೆ ಅರಣ್ಯ ಇಲಾಖೆಯಿಂದ ದಾಳಿ
ಪ್ರಭಾಸ್ ಕಾರಣದಿಂದ ರಿಷಬ್ ಶೆಟ್ಟಿ ಸಿನಿಮಾ ಮೇಲೆ ಕರಿನೆರಳು
ರನ್ಯಾ ರಾವ್ ಪ್ರಕರಣ, ಚಿನ್ನ, ನಗದು ಸೇರಿ 17.29 ಕೋಟಿ ಪತ್ತೆ
ಮೊಮ್ಮಗ ಮಾಡಿದ ಸಾಲದಿಂದ ಹರಾಜಿಗೆ ಬಂತು ಶಿವಾಜಿ ಗಣೇಶನ್ ಮನೆ

ಇದನ್ನೂ ಓದಿ:ಕಡೆಗೂ ಮದುವೆಗೆ ಮನಸ್ಸು ಮಾಡಿದ ಟಾಲಿವುಡ್ ನಟ ಪ್ರಭಾಸ್

ಪ್ರಭಾಸ್ ಪ್ರಸ್ತುತ ‘ದಿ ರಾಜಾ ಸಾಬ್’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅದರ ಜೊತೆಗೆ ರಾಘು ಹನುಪುಡಿ ನಿರ್ದೇಶನದ ಹೊಸ ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದಾರೆ. ಇದು ಮುಗಿಯುತ್ತಿದ್ದಂತೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾ ಶುರು ಮಾಡಲಿದ್ದಾರೆ. ಇವುಗಳ ಬಳಿಕ ‘ಕಲ್ಕಿ 2’ ಸಿನಿಮಾಕ್ಕೆ ಅವರಿಗೆ ಸಮಯ ಸಿಗಲಿದೆ. ‘ಕಲ್ಕಿ 2’ ಸಿನಿಮಾದ ಬಳಿಕ ‘ಸಲಾರ್ 2’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ. ಅದಾದ ಬಳಿಕ ಮತ್ತೆ ಪ್ರಶಾಂತ್ ವರ್ಮಾ ನಿರ್ದೇಶಿಸಿ, ಹೊಂಬಾಳೆ ನಿರ್ಮಾಣ ಮಾಡಲಿರುವ ಪೌರಾಣಿಕ ಕತೆಯೊಂದರ ಸಿನಿಮಾದಲ್ಲಿ ನಟಿಸಲು ಆರಂಭಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ