ಪ್ರಭಾಸ್ಗೆ ಕೂಡಿಬಂತು ಕಂಕಣ ಭಾಗ್ಯ; ಆದ್ರೆ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ನಿರಾಸೆ
ಟಾಲಿವುಡ್ ಹೀರೋ ಪ್ರಭಾಸ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರ ಜೊತೆಗೆ ಅವರು ವೈಯಕ್ತಿಕ ಜೀವನದ ಕಡೆಗೂ ಗಮನ ಹರಿಸಿದ್ದಾರೆ. ಸದ್ಯದಲ್ಲೇ ಅವರ ಮದುವೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಹೈದರಾಬಾದ್ ಮೂಲದ ಹುಡುಗಿ ಜೊತೆ ಪ್ರಭಾಸ್ ವಿವಾಹ ನಡೆಯಲಿದೆ ಎಂದು ವರದಿ ಆಗಿದೆ.

ನಟ ಪ್ರಭಾಸ್ (Prabhas) ಅವರ ಮದುವೆ ಬಗ್ಗೆ ಯಾವಾಗಲೂ ಪ್ರಶ್ನೆ ಎದುರಾಗುತ್ತದೆ. ಈ ಪ್ಯಾನ್ ಇಂಡಿಯಾ ಹೀರೋ ಯಾವಾಗ ಮದುವೆ ಆಗುತ್ತಾರೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾಯುತ್ತಿದ್ದಾರೆ. ಈಗ ಪ್ರಭಾಸ್ ಅವರಿಗೆ 45 ವರ್ಷ ವಯಸ್ಸು. ಚಿತ್ರರಂಗದಲ್ಲಿ ಅವರು ಸಾಧನೆ ಮಾಡಿದ್ದಾರೆ. ಆದರೆ ಮದುವೆ ವಿಚಾರದಲ್ಲಿ ವಿಳಂಬ ಮಾಡಿದ್ದಾರೆ. ಈಗ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ ಎಂದು ಸುದ್ದಿ ಹಬ್ಬಿದೆ. ಈ ಸುದ್ದಿ ಕೇಳುತ್ತಿದ್ದಂತೆಯೇ ಅಭಿಮಾನಿಗಳಿಗೆ ಅನುಷ್ಕಾ ಶೆಟ್ಟಿ (Anushka Shetty) ನೆನಪಾಗಿದೆ. ಆದರೆ ಪ್ರಭಾಸ್ ಮದುವೆ (Prabhas Marriage) ಆಗುತ್ತಿರುವ ಹುಡುಗಿ ಅನುಷ್ಕಾ ಶೆಟ್ಟಿ ಅಲ್ಲ ಎಂಬುದು ಬೇಸರದ ವಿಷಯ.
ವರದಿಗಳ ಪ್ರಕಾರ, ಪ್ರಭಾಸ್ ಅವರ ಮದುವೆ ಮಾತುಕಥೆ ಜಾರಿಯಲ್ಲಿದೆ. ಹೈದರಾಬಾದ್ನ ಹುಡುಗಿ ಜೊತೆ ಪ್ರಭಾಸ್ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ದೊಡ್ಡ ಉದ್ಯಮಿಯೊಬ್ಬರ ಮಗಳ ಜೊತೆ ಪ್ರಭಾಸ್ ಮದುವೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮದುವೆ ತಯಾರಿ ನಡೆದಿತ್ತು ಪ್ರಭಾಸ್ ಸಂಬಂಧಿ ಶ್ಯಾಮಲಾ ದೇವಿ ಅವರು ಎಲ್ಲ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ವರದಿ ಆಗಿದೆ.
ಸದ್ಯಕ್ಕಂತೂ ಇದು ಅಂತೆ-ಕಂತೆಗಳ ಹಂತದಲ್ಲೇ ಇದೆ. ಆದರೂ ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂಬುದನ್ನು ಗಾಸಿಪ್ ಮಂದಿ ಬಲವಾಗಿ ನಂಬಿದ್ದಾರೆ. ಕೇಳಿಬರುತ್ತಿರುವ ಗಾಸಿಪ್ಗಳ ಬಗ್ಗೆ ಪ್ರಭಾಸ್ ಕುಟುಂಬದವರು ಇನ್ನೂ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಕುಟುಂಬದ ಯಾರಾದರೂ ಪ್ರತಿಕ್ರಿಯೆ ನೀಡಿದರೆ ಮಾತ್ರ ಈ ಸುದ್ದಿ ಖಚಿತ ಆಗುತ್ತದೆ.
ಇದನ್ನೂ ಓದಿ: ಸೂಪರ್ ಹೀರೋ ಪಾತ್ರದಲ್ಲಿ ಪ್ರಭಾಸ್, ಕನ್ನಡದ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ
ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಉತ್ತಮ ಬಾಂಧವ್ಯ ಇದೆ. ‘ಬಾಹುಬಲಿ’, ‘ಮಿರ್ಚಿ’ ಮುಂತಾದ ಸಿನಿಮಾಗಳಲ್ಲಿ ಅವರಿಬ್ಬರು ಒಟ್ಟಿಗೆ ನಟಿಸಿದ್ದಾರೆ. ಅವರಿಬ್ಬರು ರಿಯಲ್ ಲೈಫ್ನಲ್ಲಿ ಕೂಡ ಜೋಡಿ ಆಗಬೇಕು ಎಂಬುದು ಅಭಿಮಾನಿಗಳ ಆಸೆ. ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಅನೇಕ ಬಾರಿ ಸುದ್ದಿ ಹಬ್ಬಿತ್ತು. ಆದರೆ ತಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ಅವರು ಗಾಳಿಸುದ್ದಿಗೆ ಅಂತ್ಯ ಹಾಡಿದ್ದರು. ಈಗ ಪ್ರಭಾಸ್ ಅವರು ಅನುಷ್ಕಾ ಶೆಟ್ಟಿ ಬದಲು ಬೇರೆ ಹುಡುಗಿ ಜೊತೆ ಮದುವೆ ಆಗಲಿದ್ದಾರೆ ಎಂಬುದನ್ನು ತಿಳಿದು ಅಭಿಮಾನಿಗಳಿಗೆ ನಿರಾಸೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.