ಹನಿಮೂನ್​ ಬಗ್ಗೆ ನೀವೇ ಮಾತನಾಡಿಕೊಳ್ಳಿ; ಮಂಜು-ದಿವ್ಯಾಗೆ ಪ್ರಶಾಂತ್​ ಸಂಬರಗಿ ಕಿವಿಮಾತು

ಮಂಜು ಒಳ್ಳೆಯ ಗುಣಗಳ ಬಗ್ಗೆಯೂ ಪ್ರಶಾಂತ್​ ಸಂಬರಗಿ ಹೇಳಿದ್ದಾರೆ. ಮಂಜು ಯಾವಾಗಲೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುತ್ತಾರೆ. ಅವನಿಗೆ ಕೈ ತುಂಬ ಕೆಲಸ ಇರುತ್ತದೆ ಎಂದರು.

ಹನಿಮೂನ್​ ಬಗ್ಗೆ ನೀವೇ ಮಾತನಾಡಿಕೊಳ್ಳಿ; ಮಂಜು-ದಿವ್ಯಾಗೆ ಪ್ರಶಾಂತ್​ ಸಂಬರಗಿ ಕಿವಿಮಾತು
ಪ್ರಶಾಂತ್​ ಸಂಬರಗಿ- ಮಂಜು ಪಾವಗಡ
Edited By:

Updated on: Mar 29, 2021 | 4:31 PM

ಮಂಜು ಪಾವಗಡ ಅವರಿಂದ ಎಷ್ಟೇ ದೂರ ಹೋಗಬೇಕು ಎಂದರೂ ದಿವ್ಯಾ ಸುರೇಶ್​ ಬಳಿ ಸಾಧ್ಯವಾಗುತ್ತಿಲ್ಲ. ಮಂಜು ಅವರಿಂದ ಅಂತರ ಕಾಯ್ದುಕೊಳ್ಳುವಂತೆ ಪ್ರಶಾಂತ್ ಸಂಬರಗಿ ದಿವ್ಯಾಗೆ ಸೂಚನೆ ನೀಡಿದ್ದರು. ಆದಾಗ್ಯೂ ದಿವ್ಯಾ ಬಳಿ ಇದು ಸಾಧ್ಯವಾಗುತ್ತಿಲ್ಲ. ಈಗ ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ-ಮಂಜು ಮದುವೆ ವಿಚಾರ ಅಷ್ಟೇ ಅಲ್ಲ, ಹನಿಮೂನ್​ ವಿಚಾರ ಕೂಡ ಚರ್ಚೆ ಆಗಿದೆ.

ಬಿಗ್​ ಬಾಸ್ ಮನೆಯಲ್ಲಿ ಮಂಜು, ದಿವ್ಯಾ ಸುರೇಶ್​, ವಿಶ್ವನಾಥ್​ ಹಾಗೂ ಶುಭಾ ಪೂಂಜಾ ಕೂತು ಮಾತನಾಡುತ್ತಿದ್ದರು. ಈ ವೇಳೆ ದಿವ್ಯಾ ನಮ್ಮ ಮನೆಯಲ್ಲಿ ಮದುವೆ ಆದ ನಂತರ ಊರಿಗೆ ಹೋಗಿ ಉಳಿಯೋಕೆ ಹೇಳುತ್ತಾರೆ ಎಂದು ಹೇಳಿದ್ದಾರೆ. ಇದಕ್ಕೆ ಮಂಜು, ಖುಷಿಯಿಂದ ಒಪ್ಪಿಕೊಂಡಿದ್ದಾರೆ.

ಬೆಂಗಳೂರಿನಲ್ಲಿದ್ದರೆ ಬಾಡಿಗೆ ಕಟ್ಟಬೇಕು. ಇಲ್ಲಿ ಬಾಡಿಗೆ ಕಟ್ಟೋ ಬದಲು ಊರಲ್ಲಿ ಹಾಯಾಗಿ ಇರಬಹುದು ಎಂದು ನಕ್ಕಿದ್ದಾರೆ. ಆಗ ಮಂಜು ಒಳ್ಳೆಯ ಗುಣಗಳ ಬಗ್ಗೆ ಪ್ರಶಾಂತ್​ ಸಂಬರಗಿ ಹೇಳಿದ್ದಾರೆ. ಮಂಜು ಯಾವಾಗಲೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುತ್ತಾರೆ. ಅವನಿಗೆ ಕೈ ತುಂಬ ಕೆಲಸ ಇರುತ್ತದೆ. ಬಹುತೇಕ ಎಲ್ಲ ವಿಚಾರಗಳು ಕ್ಲಿಯರ್​ ಆದಂತೆ ಅನಿಸುತ್ತಿದೆ. ಆದರೆ, ಹನಿಮೂನ್​ ಬಗ್ಗೆ ನಾನು ಮಾತನಾಡಲ್ಲ. ನೀವೇ ಮಾತಾಡಿಕೊಳ್ಳಿ ಎಂದು ನಕ್ಕಿದ್ದಾರೆ.

ಈ ವೇಳೆ ದಿವ್ಯಾ, ಮಂಜು ಪ್ರೀತಿನ ಎಲ್ಲರಿಗೂ ಹಂಚುತ್ತಾರಾ? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಪ್ರಶಾಂತ್​, ನಮ್ಮ ಮಂಜುಗೆ ಒಂದೇ ದೇವರು, ಒಂದೇ ಹೆಂಡತಿ ಎಂದು ನಕ್ಕರು. ಕಲರ್ಸ್​ ಕನ್ನಡ ವಾಹಿನಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನ್​ಸೀನ್​ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಸಂಬರಗಿ ಹೀಗೆ ಹೇಳಿದ್ದಾರೆ.

ಇತ್ತೀಚೆಗೆ ದಿವ್ಯಾ-ಪ್ರಶಾಂತ್​ ಆಪ್ತ ಸಮಾಲೋಚನೆ ನಡೆಸಿದ್ದರು. ತಂದೆಯಂತೆ ಅಡ್ವೈಸ್​ ಮಾಡ್ತಾ ಇದೀನಿ. ನಿನ್ನನ್ನು ಮನೆಯಲ್ಲಿ ಕೆಲವರು ಯೂಸ್​ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗೆ ಅನ್ನಿಸಿತು. ಅವರು ಫೇಮಸ್ ಆಗೋಕೆ ನಿನ್ನನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದಿವ್ಯಾಗೆ ಪ್ರಶಾಂತ್​ ಹೇಳಿದ್ದರು.

ಇದನ್ನೂ ಓದಿ: ಗುಟ್ಟಾಗಿ ನಡೆಯುತ್ತಿದ್ದದ್ದು ಬಯಲಾಯ್ತು; ಮೊದಲ ಬಾರಿಗೆ ಮಂಜು ವಿರುದ್ಧ ತಿರುಗಿ ಬಿದ್ರು ದಿವ್ಯಾ ಸುರೇಶ್​

ಒಂದು ವಾರ ಅರವಿಂದ್ ಜತೆ ಮಾತಾಡ್ಬಾರದು; ದಿವ್ಯಾ ಉರುಡುಗಗೆ ಸುದೀಪ್​ ಹೊಸ ಕಂಡೀಷನ್​!

Published On - 4:13 pm, Mon, 29 March 21