ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಮೊದಲ ಇನ್ನಿಂಗ್ಸ್ಗಿಂತಲೂ ಈ ಬಾರಿ ಭಿನ್ನವಾಗಿ ಆಡುತ್ತಿದ್ದಾರೆ. ಮಂಜು ಕಳೆದ ಬಾರಿ ಒಂದು ಕಡೆ ಕಳೆದು ಹೋದಂತೆ ಭಾಸವಾಗುತ್ತಿತ್ತು. ಆದರೆ, ಸೆಕೆಂಡ್ ಇನ್ನಿಂಗ್ಸ್ನಲ್ಲಿ ಹಾಗೆ ಆಗುತ್ತಿಲ್ಲ. ದಿವ್ಯಾ ಬಳಿ ಮಂಜು ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಮಾತ್ರ ಮಾತನಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ, ಮಂಜುಗೆ ದಿವ್ಯಾ ಗುಡ್ಬೈ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳನ್ನು ಮಾಡಲಾಗಿದೆ. ಎರಡೂ ತಂಡಗಳಿಗೆ ಟಾಸ್ಕ್ ನೀಡಲಾಗುತ್ತಿದೆ. ಈ ಟಾಸ್ಕ್ ವೇಳೆ ದಿವ್ಯಾ ಸುರೇಶ್ ಕಾಲಿಗೆ ಗಾಯವಾಗಿದೆ. ಅಲ್ಲದೆ, ಅವರು ಗಳಗಳನೆ ಅತ್ತಿದ್ದಾರೆ. ಅವರಿಗೆ ವೈದ್ಯರು ಬಂದು ಬ್ಯಾಂಡೇಜ್ ಕೂಡ ಹಾಕಿದರು. ಇಷ್ಟಾದರೂ ಮಂಜು ಪಾವಗಡ ಎದ್ದೇಳಲಿಲ್ಲ. ಇದಕ್ಕೆ ಕಾರಣ ಕುರ್ಚಿ ಪಾಲಿಟಿಕ್ಸ್ ಟಾಸ್ಕ್.
ಹೌದು, ಬಿಗ್ ಬಾಸ್ ಮನೆಯಲ್ಲಿ 6 ಚೇರ್ಗಳನ್ನು ಹಾಕಲಾಗಿದೆ. ಈ ಚೇರ್ನಲ್ಲಿ ಎರಡು ತಂಡದ ತಲಾ ಮೂರು ಸದಸ್ಯರು ಕುಳಿತುಕೊಳ್ಳಬೇಕು. ಒಂದೊಮ್ಮೆ ಚೇರ್ನಿಂದ ಎದ್ದರೆ ಔಟ್. ಮಂಜು ಕೂಡ ಈ ಟಾಸ್ಕ್ನಲ್ಲಿ ಕುಳಿತಿದ್ದಾರೆ. ಹೀಗಾಗಿ, ದಿವ್ಯಾಗೆ ಗಾಯವಾದಾಗಲೂ ಅವರು ಎದ್ದಿಲ್ಲ.
ಈ ವೇಳೆ ಅಳುತ್ತಲೇ ಮಂಜು ಬಳಿ ಬಂದರು ದಿವ್ಯಾ ಸುರೇಶ್. ‘ಮಂಜು ಇಷ್ಟೇ ಅಲ್ವಾ? ಫ್ರೆಂಡ್ಶಿಪ್ ಬೆಲೆ ತೋರ್ಸಿದ್ಯಲ. ನಿಂಗೂ ನಿನ್ನ ಫ್ರೆಂಡ್ಶಿಪ್ಗೂ ಗುಡ್ ಬೈ’ ಎಂದರು. ಇದನ್ನು ಮಂಜು ಗಂಭೀರವಾಗಿ ತೆಗೆದುಕೊಂಡಿಲ್ಲ. ಅವರು ನಗುತ್ತಲ್ಲೇ ಪರಿಸ್ಥಿತಿಯನ್ನು ನಿಭಾಯಿಸಿದರು.
‘ಬಹುಶಃ ಗಾಯ ಆದ ಕೂಡಲೇ ನಾನು ಕಾಲನ್ನು ಮುಟ್ಟಿದ್ದರೆ ನೋವು ಇಲ್ಲಿವರೆಗೆ ಮಾಯವಾಗುತ್ತಿತ್ತು’ ಎಂದು ಮಂಜು ಹೇಳಿದರು. ಆಗ ಸಿಟ್ಟಲ್ಲಿದ್ದ ದಿವ್ಯಾ, ‘ಸುಮ್ಮನಿರಪ್ಪಾ’ ಎಂದರು.
ಇದನ್ನೂ ಓದಿ: ‘ಭಾಷಣ ಚೆನ್ನಾಗಿ ಮಾಡ್ತೀರಾ’; ಬಿಗ್ ಬಾಸ್ ವೇದಿಕೆ ಮೇಲೆ ದಿವ್ಯಾ ಉರುಡುಗಗೆ ಸುದೀಪ್ ಎಚ್ಚರಿಕೆ
Bigg Boss Kannada: ದಿವ್ಯಾ ಸುರೇಶ್ ಜತೆ ಅಂತರ ಕಾಯ್ದುಕೊಳ್ಳುವ ಸೂಚನೆ ನೀಡಿದ ಮಂಜು ಪಾವಗಡ