‘ಅವರು ಯಾವತ್ತಿದ್ರೂ ನಮ್ಮ ಹೀರೋಯಿನ್​’; ಡ್ರಾಮಾ ಜ್ಯೂನಿಯರ್ಸ್​ನಲ್ಲಿ ಒಂದಾದ ‘ಮಲ್ಲ’ ಜೋಡಿ

| Updated By: ರಾಜೇಶ್ ದುಗ್ಗುಮನೆ

Updated on: Jul 09, 2022 | 7:00 AM

ಜೀ ಕನ್ನಡ ವಾಹಿನಿಯಲ್ಲಿ ‘ಡ್ರಾಮಾ ಜ್ಯೂನಿಯರ್ಸ್’ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ ಪ್ರಸಾರ ಆಗಲಿದೆ. ಈ ವೀಕೆಂಡ್​ನಲ್ಲಿ ​​ಪ್ರಿಯಾಂಕಾ ಉಪೇಂದ್ರ ಅವರು ಅತಿಥಿಯಾಗಿ ಆಗಮಿಸಿದ ಶೋ ಪ್ರಸಾರ ಕಾಣಲಿದೆ.

‘ಅವರು ಯಾವತ್ತಿದ್ರೂ ನಮ್ಮ ಹೀರೋಯಿನ್​’; ಡ್ರಾಮಾ ಜ್ಯೂನಿಯರ್ಸ್​ನಲ್ಲಿ ಒಂದಾದ ‘ಮಲ್ಲ’ ಜೋಡಿ
ಪ್ರಿಯಾಂಕಾ-ರವಿಚಂದ್ರನ್
Follow us on

ಪ್ರಿಯಾಂಕಾ ಉಪೇಂದ್ರ (Priyanka Upendra) ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಸಖತ್ ಬೇಡಿಕೆ ಇದೆ. ಅವರು ನಟಿಸಿದ ಅನೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಬೆಂಗಾಲಿ ಮೂಲದವರಾದರೂ ಅವರು ಈಗ ನೆಲೆಸಿರುವುದು ಕರ್ನಾಟಕದಲ್ಲಿ. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ. ಸದ್ಯ, ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಈ ಮಧ್ಯೆ ಬಿಡುವು ಮಾಡಿಕೊಂಡು ಅವರು ಕಿರುತೆರೆ ಶೋಗೂ ಬಂದಿದ್ದಾರೆ. ಜೀ ಕನ್ನಡ ವಾಹಿನಿಯ ‘ಡ್ರಾಮಾ ಜ್ಯೂನಿಯರ್ಸ್​​’ ಶೋಗೆ  (Drama Juniors Season 4) ಅವರ ಆಗಮನ ಆಗಿದೆ.

‘ಡ್ರಾಮಾ ಜ್ಯೂನಿಯರ್ಸ್​’ನ 4ನೇ ಸೀಸನ್ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ. ಇದಕ್ಕೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಸಾಕಷ್ಟು ಕಲಾವಿದರಿಗೆ ಈ ವೇದಿಕೆ ಅವಕಾಶ ನೀಡಿದೆ. ರವಿಚಂದ್ರನ್ ಹಾಗೂ ಲಕ್ಷ್ಮೀ ಇಬ್ಬರೂ ಈ ಕಾರ್ಯಕ್ರಮಕ್ಕೆ ಜಡ್ಜ್​ ಆಗಿದ್ದಾರೆ. ಈ ಬಾರಿ ಈ ವೇದಿಕೆಗೆ ಪ್ರಿಯಾಂಕಾ ಉಪೇಂದ್ರ ಅವರ ಆಗಮನ ಆಗಿದೆ. ‘ಡ್ರಾಮಾ ಜ್ಯೂನಿಯರ್ಸ್​​’ ವೇದಿಕೆಗೆ ಹೊಸ ಕಳೆ ಬಂದಿದೆ.

ಇದನ್ನೂ ಓದಿ
Priyanka Upendra: ಡಾಕ್ಟರ್​ ಪ್ರಿಯಾಂಕಾ ಉಪೇಂದ್ರ: ಡಾಕ್ಟರೇಟ್​ ಸಿಕ್ಕ ಖುಷಿಯಲ್ಲಿ ಮಾತನಾಡಿದ ನಟಿ
Kabza Movie: 7 ಭಾಷೆಗಳಲ್ಲಿ ಧೂಳೆಬ್ಬಿಸಲಿದೆ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ; ಭರದಿಂದ ಸಾಗುತ್ತಿದೆ ಡಬ್ಬಿಂಗ್​ ಕೆಲಸ
‘ಹೆಂಗಸರು ಉಪ್ಪಿ ಚಿತ್ರ ನೋಡೋಕಾಗಲ್ಲ ಅಂತಿದ್ರು’: ಉಪೇಂದ್ರ ಬಗ್ಗೆ ಮಾತಾಡಿದ ಕುಮಾರ್​ ಗೋವಿಂದ್​
Upendra: ‘ನಾವೆಲ್ಲಾ ಕಾಯೋದು ಆ ಒಂದು ದಿನಕ್ಕೆ’; ಸಿನಿಮಾ ರಿಲೀಸ್ ಸಂಭ್ರಮದ ಬಗ್ಗೆ ಉಪೇಂದ್ರ ಮನದಾಳದ ಮಾತು

ಪ್ರಿಯಾಂಕಾ ಉಪೇಂದ್ರ ಅವರು ವೇದಿಕೆ ಮೇಲೆ ಬರುತ್ತಿದ್ದಂತೆ ರವಿಚಂದ್ರನ್​ ಅವರು ‘ಅವರು ಯಾವಾಗಲೂ ನಮ್ಮ ಹೀರೋಯಿನ್​’ ಎಂದು ಸ್ವಾಗತಿಸಿದರು. ರವಿಚಂದ್ರನ್​ ಹಾಗೂ ಪ್ರಿಯಾಂಕಾ ‘ಮಲ್ಲ’ ಹಾಗೂ ‘ಕ್ರೇಜಿ ಸ್ಟಾರ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಕಾರಣಕ್ಕೆ ಇಬ್ಬರ ನಡುವೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ಈ ಕಾರಣದಿಂದ ಅವರನ್ನು ತುಂಬಾನೇ ಪ್ರೀತಿಯಿಂದ ಬರಮಾಡಿಕೊಂಡರು ರವಿಚಂದ್ರನ್.

‘ಡ್ರಾಮಾ ಜ್ಯೂನಿಯರ್ಸ್​’ ವೇದಿಕೆ ಮೇಲೆ ಪ್ರಿಯಾಂಕಾ ಉಪೇಂದ್ರ ಹಾಗೂ ರವಿಚಂದ್ರನ್ ಸಖತ್ ಆಗಿ ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದರು. ಇದನ್ನು ರೀಲ್ಸ್​ ಮಾಡಿ ಜೀ ಕನ್ನಡ ವಾಹಿನಿ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ‘ಮಲ್ಲ’ ಚಿತ್ರದ ‘ಯಮ್ಮೋ ಯಮ್ಮೋ ನೋಡ್ಡೇ ನೋಡ್ಡೇ..’ ಹಾಡು ಸಖತ್ ಫೇಮಸ್ ಆಗಿತ್ತು. ಇದೇ ಹಾಡಿಗೆ ರವಿಚಂದ್ರನ್ ಹಾಗೂ ಪ್ರಿಯಾಂಕಾ ಡ್ಯಾನ್ಸ್ ಮಾಡಿದ್ದಾರೆ.

ಇದನ್ನೂ ಓದಿ: ಸ್ಕೂಲ್​ ಟೀಚರ್​ ಆದ್ರು ಪ್ರಿಯಾಂಕಾ ಉಪೇಂದ್ರ; ‘ಮಿಸ್​ ನಂದಿನಿ’ ಚಿತ್ರದಲ್ಲಿ ಹಿರಿಯ ನಟಿ ಭವ್ಯಾ ಪಾತ್ರ ಏನು? 

 ಜೀ ಕನ್ನಡ ವಾಹಿನಿಯಲ್ಲಿ ‘ಡ್ರಾಮಾ ಜ್ಯೂನಿಯರ್ಸ್’ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ ಪ್ರಸಾರ ಆಗಲಿದೆ. ಈ ವೀಕೆಂಡ್​ನಲ್ಲಿ ​​ಪ್ರಿಯಾಂಕಾ ಉಪೇಂದ್ರ ಅವರು ಅತಿಥಿಯಾಗಿ ಆಗಮಿಸಿದ ಎಪಿಸೋಡ್ ಪ್ರಸಾರ ಕಾಣಲಿದೆ. ಇದಕ್ಕಾಗಿ ಅವರ ಫ್ಯಾನ್ಸ್ ಕಾದು ಕೂತಿದ್ದಾರೆ.