ವಿಕ್ರಮ್ ಚಿತ್ರಕ್ಕೆ ಮತ್ತೆ ಹಿನ್ನಡೆ; ಕೊನೇ ಕ್ಷಣದಲ್ಲಿ ಸಿನಿಮಾ ರಿಲೀಸ್ ಆಗಲ್ಲ ಎಂದ ನಿರ್ದೇಶಕ

ನವೆಂಬರ್ 24ರಂದು ಚಿತ್ರ ರಿಲೀಸ್ ಆಗಲಿದೆ ಎಂದು ತಂಡ ಹೇಳಿಕೊಂಡಿತ್ತು. ಹಲವು ಕಡೆಗಳಲ್ಲಿ ಗೌತಮ್ ಸಂದರ್ಶನ ಕೂಡ ನೀಡಿದ್ದರು. ಆದರೆ, ಸಿನಿಮಾ ರಿಲೀಸ್ ಆಗಿಲ್ಲ.

ವಿಕ್ರಮ್ ಚಿತ್ರಕ್ಕೆ ಮತ್ತೆ ಹಿನ್ನಡೆ; ಕೊನೇ ಕ್ಷಣದಲ್ಲಿ ಸಿನಿಮಾ ರಿಲೀಸ್ ಆಗಲ್ಲ ಎಂದ ನಿರ್ದೇಶಕ
ವಿಕ್ರಮ್

Updated on: Nov 24, 2023 | 11:49 AM

ತಮಿಳಿನ ‘ಧ್ರುವ ನಕ್ಷತ್ರಂ’ (Dhruva Natchathiram) ಸಿನಿಮಾ ಕೆಲಸ ಆರಂಭ ಆಗಿದ್ದು 2018ರಲ್ಲಿ. ಸತತ ಐದು ವರ್ಷಗಳಿಂದ ಸಿನಿಮಾ ಕೆಲಸಗಳು ನಡೆಯುತ್ತಲೇ ಇದ್ದವು. ವಿಕ್ರಮ್ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಗೌತಮ್ ಮೆನನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಿನಿಮಾ ಇಂದು (ನವೆಂಬರ್ 24) ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾ ರಿಲೀಸ್ ವಿಳಂಬ ಆಗಿದೆ. ಈ ಬಗ್ಗೆ ನಿರ್ದೇಶಕ ಗೌತಮ್ ಮೆನನ್ ಮಾಹಿತಿ ನೀಡಿದ್ದಾರೆ. ಅದೂ ಕೆಲವೇ ಗಂಟೆ ಮೊದಲು.

2018ರಲ್ಲಿ ‘ಧ್ರುವ ನಕ್ಷತ್ರಂ’ ಸಿನಿಮಾ ಸೆಟ್ಟೇರಿತು. ವಿಕ್ರಮ್, ರೀತು ವರ್ಮ, ಪಾರ್ಥಿಬನ್, ಐಶ್ವರ್ಯಾ ರಾಜೇಶ್, ರಾಧಿಕಾ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಒಂದು ವರ್ಷದಲ್ಲಿ ರಿಲೀಸ್ ಆಗಬಹುದು ಎಂಬುದು ಅನೇಕರ ಊಹೆ ಆಗಿತ್ತು. ಆದರೆ, ಹಲವು ಕಾರಣದಿಂದ ರಿಲೀಸ್ ದಿನಾಂಕ ವಿಳಂಬ ಆಗುತ್ತಲೇ ಬಂತು. ನವೆಂಬರ್ 24ರಂದು ಚಿತ್ರ ರಿಲೀಸ್ ಆಗಲಿದೆ ಎಂದು ತಂಡ ಹೇಳಿಕೊಂಡಿತ್ತು. ಹಲವು ಕಡೆಗಳಲ್ಲಿ ಗೌತಮ್ ಸಂದರ್ಶನ ಕೂಡ ನೀಡಿದ್ದರು. ಆದರೆ, ಸಿನಿಮಾ ರಿಲೀಸ್ ಆಗಿಲ್ಲ.

ಮುಂಜಾನೆ ಮೂರು ಗಂಟೆ ಸುಮಾರಿಗ ಗೌತಮ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.  ‘ಕ್ಷಮಿಸಿ, ಇಂದು ಸಿನಿಮಾ ರಿಲೀಸ್​ ಮಾಡಲು ಸಾಧ್ಯವಾಗುತ್ತಿಲ್ಲ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಇನ್ನೂ ಒಂದೆರಡು ದಿನ ಬೇಕು. ಕೆಲವೇ ದಿನಗಳಲ್ಲಿ ನಾವು ಬರುತ್ತೇವೆ’ ಎಂದು ಅವರು ಬರೆದುಕೊಂಡಿದ್ದಾರೆ.

ಆರ್ಥಿಕ ತೊಂದರೆಯಿಂದ ಸಿನಿಮಾ ರಿಲೀಸ್​ ವಿಳಂಬ ಆಗುತ್ತಿದೆ ಎನ್ನಲಾಗಿದೆ. ಗೌತಮ್ ಟ್ವೀಟ್​ಗೆ ಅನೇಕರು ಪಾಸಿಟಿವ್ ಆಗಿ ಕಮೆಂಟ್ ಮಾಡಿದ್ದಾರೆ. ‘ಸಿನಿಮಾ ವಿಳಂಬಕ್ಕೆ ಕಾರಣ ಏನು ಎಂಬುದು ಗೊತ್ತಿದೆ. ಹಣ ಶೀಘ್ರದಲ್ಲೇ ಅರೇಂಜ್ ಆಗಲಿ ಎಂದು ನಾನು ಕೋರುತ್ತೇನೆ. ಈ ಚಿತ್ರವನ್ನು ದೊಡ್ಡ ಪರದೆಯಲ್ಲಿ ನೋಡಲು ನಾವು ಕಾದಿದ್ದೇವೆ’ ಎಂದು ವ್ಯಕ್ತಿಯೋರ್ವ ಕಮೆಂಟ್ ಮಾಡಿದ್ದಾರೆ. ‘ಈ ಚಿತ್ರ ಯಾವಾಗಲೇ ಬಂದರೂ ವೀಕ್ಷಿಸುತ್ತೇವೆ’ ಎಂದು ಫ್ಯಾನ್ಸ್​ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಪರಭಾಷೆಯ ಸಿನಿಮಾಗಳು ಕನ್ನಡಕ್ಕೆ ಹೆಚ್ಚು ಡಬ್ ಆಗಲ್ಲ ಏಕೆ? ಲೆಕ್ಕಾಚಾರವೇ ಬೇರೆ ಇದೆ..

‘ಧ್ರುವ ನಕ್ಷತ್ರಂ’ ಸಿನಿಮಾದಲ್ಲಿ ವಿಕ್ರಮ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ ರಿಲೀಸ್ ಆಯಿತು. 2011ರಲ್ಲಿ ನಡೆದ ಮುಂಬೈ ಬ್ಲಾಸ್ಟ್ ಬಗ್ಗೆ ಸಿನಿಮಾ ಹೇಳಿದೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us