ಕೊನೆಗೂ ನಿಗದಿಯಾಯ್ತು ‘ಕಾಗೆ ಬಂಗಾರ’ಕ್ಕೆ ಮುಹೂರ್ತ, ನಾಯಕ ಯಾರು?
ದುನಿಯಾ ಸೂರಿ ಕೊನೆಗೂ ‘ಕಾಗೆ ಬಂಗಾರ’ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ‘ಕಾಗೆ ಬಂಗಾರ’ ಸಿನಿಮಾ ಮಾಡುವುದಾಗಿ ಘೋಷಿಸಿ ಒಂಬತ್ತು ವರ್ಷವಾಗಿತ್ತು. ಈಗ ಸಿನಿಮಾ ಸೆಟ್ಟೇರಲು ಮುಹೂರ್ತ ನಿಗದಿಯಾಗಿದೆ.
ದುನಿಯಾ ಸೂರಿ (Duniya Suri) ‘ಕಾಗೆ ಬಂಗಾರ’ (Kaage Bangara) ಸಿನಿಮಾ ಘೋಷಿಸಿ ಒಂಬತ್ತು ವರ್ಷಗಳಾಗುತ್ತಾ ಬಂತು. ‘ಕೆಂಡಸಂಪಿಗೆ’ ಸಿನಿಮಾದಲ್ಲಿ ‘ಕಾಗೆ ಬಂಗಾರ’ದ ಸುಳಿವು ನೀಡಲಾಗಿತ್ತು. ಆಗಿನಿಂದಲೂ ಸಹ ‘ಕಾಗೆ ಬಂಗಾರ’ ಸಿನಿಮಾ ಈಗ ಬರುತ್ತೆ, ಆಗ ಬರುತ್ತೆ ಎಂದು ನಿರೀಕ್ಷಿಸಲಾಗಿತ್ತು. ‘ಪಾಪ್ ಕಾರ್ನ್ ಮಂಕಿ ಟೈಗರ್’ನಲ್ಲಿ ‘ಕಾಗೆ ಬಂಗಾರ’ದ ಸಣ್ಣ ಝಲಕ್ ನೀಡಲಾಗಿತ್ತು. ಇದೀಗ ಕೊನೆಗೂ ‘ಕಾಗೆ ಬಂಗಾರ’ ಸಿನಿಮಾಕ್ಕೆ ಮುಹೂರ್ತ ನಿಗದಿಯಾಗಿದೆ. ದುನಿಯಾ ಸೂರಿ ಕೊನೆಗೂ ‘ಕಾಗೆ ಬಂಗಾರ’ವನ್ನು ಕೈಗೆತ್ತಿಕೊಂಡಿದ್ದಾರೆ.
ಈ ಹಿಂದೆ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾವನ್ನು ಸೂರಿ ನಿರ್ದೇಶಿಸಿದ್ದರು, ಅಭಿಷೇಕ್ ಅಂಬರೀಶ್ ನಾಯಕ ನಟನಾಗಿ ನಟಿಸಿದ್ದ ಈ ಸಿನಿಮಾ ಹಿಟ್ ಆಗಲಿಲ್ಲ. ಇದೀಗ ಸೂರಿ ‘ಕಾಗೆ ಬಂಗಾರ’ವನ್ನು ಕೈಗೆತ್ತಿಕೊಂಡಿದ್ದಾರೆ. ಜಯಣ್ಣ ಕಂಬೈನ್ಸ್ ಮೂಲಕ ಸಿನಿಮಾ ನಿರ್ಮಾಣಗೊಳ್ಳಲಿದೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ಪುತ್ರಿ ರಿತನ್ಯ ನಾಯಕಿಯಾಗಿ ನಟಿಸಲಿದ್ದು, ವಿರಾಟ್ ನಾಯಕ ನಟನಾಗಿ ನಟಿಸಲಿದ್ದಾರೆ.
ಇದನ್ನೂ ಓದಿ:ರಂಗಾಯಣ ರಘು ಬಗ್ಗೆ ದುನಿಯಾ ಸೂರಿ ಮನದಲ್ಲಿದೆ ಬೆಟ್ಟದಷ್ಟು ಗೌರವ
‘ಕೆಂಡಸಂಪಿಗೆ’ ಸಿನಿಮಾ ಬಿಡುಗಡೆ ಆದಾಗಲೇ ಈ ಸಿನಿಮಾದ ಪ್ರೀಕ್ವೆಲ್ ಹಾಗೂ ಸೀಕ್ವೆಲ್ ಅನ್ನು ನಿರ್ದೇಶನ ಮಾಡುವುದಾಗಿ ದುನಿಯಾ ಸೂರಿ ಹೇಳಿದ್ದರು. ‘ಕಾಗೆ ಬಂಗಾರ’ ಹಾಗೂ ‘ಬ್ಲಾಕ್ ಮ್ಯಾಜಿಕ್’ ಹೆಸರಿನಲ್ಲಿ ಆ ಸಿನಿಮಾಗಳು ಬಿಡುಗಡೆ ಆಗುವುದಾಗಿ ಘೋಷಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. 2017ರಲ್ಲಿ ‘ಕಾಗೆ ಬಂಗಾರ’ ಸಿನಿಮಾ ಕೈಗೆತ್ತಿಕೊಳ್ಳುವ ಪ್ರಯತ್ನ ಮಾಡಿದರಾದರೂ ಆಗಲೂ ಸಹ ಅದು ಸಾಧ್ಯವಾಗಲಿಲ್ಲ. ಇದೀಗ ಅಂತಿಮವಾಗಿ ಸಿನಿಮಾ ಸೆಟ್ಟೇರುತ್ತಿದೆ. ಮುಂದಿನ ತಿಂಗಳಾಂತ್ಯಕ್ಕೆ ಶೂಟಿಂಗ್ ಪ್ರಾರಂಭವಾಗಲಿದೆ.
ದುನಿಯಾ ವಿಜಯ್ ಗಾಗಿ ಹೊಸ ಸಿನಿಮಾ ಒಂದನ್ನು ದುನಿಯಾ ಸೂರಿ ನಿರ್ದೇಶನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ದುನಿಯಾ ವಿಜಯ್ ಪ್ರಸ್ತುತ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜಡೇಶ್ ಕುಮಾರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಿಖಿಲ್ ರ ಹೊಸ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಸಿನಿಮಾಗಳು ದುನಿಯಾ ವಿಜಯ್ ಕೈಯಲ್ಲಿವೆ. ಹಾಗಾಗಿ ದುನಿಯಾ ವಿಜಯ್ ಹಾಗೂ ದುನಿಯಾ ಸೂರಿಯ ಕಾಂಬಿನೇಷನ್ ಸಿನಿಮಾ ತಡವಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ