ನವದೆಹಲಿ: TV9 ನೆಟ್‌ವರ್ಕ್‌ನ (TV9 Network) ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರು ನ್ಯೂಸ್ 9 ಪ್ಲಸ್‌ನಲ್ಲಿ (News9 Plus) ತಮ್ಮ ಹೊಸ ಶೋ – ‘ಡ್ಯುಲೋಗ್ ವಿತ್ ಬರುಣ್ ದಾಸ್’ನಲ್ಲಿ (Duologue with Barun Das) ಲೈಗರ್ ಸಿನಿಮಾ ನಟ ವಿಜಯ್ ದೇವರಕೊಂಡ ಮತ್ತು ಯುಕೆ ಮಾಜಿ ಪಿಎಂ ಡೇವಿಡ್ ಕ್ಯಾಮರೂನ್ (David Cameron) ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಡ್ಯುಲೋಗ್ ವಿತ್ ಬರುಣ್ ದಾಸ್ ಶೋನ ಸರಣಿಯಲ್ಲಿ ಮೊದಲ ಅತಿಥಿಯಾಗಿ ವಿಜಯ್ ದೇವರಕೊಂಡ (Vijay Deverakonda) ಕಾಣಿಸಿಕೊಂಡಿದ್ದಾರೆ.
TV9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರ ಹೊಸ ಟಾಕ್ ಶೋ ‘ಡ್ಯುಲೋಗ್ ವಿತ್ ಬರುನ್ ದಾಸ್’ನಲ್ಲಿ ಬರುಣ್ ದಾಸ್ ರಾಜಕೀಯ, ವ್ಯಾಪಾರ ಮತ್ತು ಸಿನಿಮಾ ಕ್ಷೇತ್ರಗಳ ಅನೇಕ ಸೆಲೆಬ್ರಿಟಿಗಳೊಂದಿಗೆ ವಿಶೇಷ ಸಂದರ್ಶನವನ್ನು ನಡೆಸಲಿದ್ದಾರೆ. ವಿಜಯ್ ದೇವರಕೊಂಡ ಅವರ ಸಂದರ್ಶನದ ಸಂಚಿಕೆಯನ್ನು ಆಗಸ್ಟ್ 26ರಂದು ನ್ಯೂಸ್ 9 ಪ್ಲಸ್ ಅಪ್ಲಿಕೇಶನ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಶೋನಲ್ಲಿ ವಿಜಯ್ ದೇವರಕೊಂಡ ಅವರ ನಂತರ ಅತಿಥಿಯಾಗಿ ಇಂಗ್ಲೆಂಡ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಪಾಲ್ಗೊಳ್ಳಲಿರುವುದು ವಿಶೇಷ. ಭಾರತದೊಂದಿಗೆ ಬಾಂಧವ್ಯವನ್ನು ಉಳಿಸಿಕೊಂಡು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಕಷ್ಟು ಪ್ರಯತ್ನಗಳನ್ನು ಮಾಡಿರುವ ಇವರು ಬರುಣ್ ದಾಸ್ ಅವರ ಜೊತೆ ಟಾಕ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೆಲೆಬ್ರಿಟಿಗಳ ವೈಯಕ್ತಿಕ ಜೀವನ ಮತ್ತು ವೃತ್ತಿಜೀವನದ ಬಗ್ಗೆ ಈ ಶೋನಲ್ಲಿ ಅವರನ್ನು ಪ್ರಶ್ನಿಸಲಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ದೀರ್ಘಾವಧಿಯಲ್ಲಿ ಬದುಕಲು ಪ್ರತಿಯೊಬ್ಬರಿಗೂ ಅವಕಾಶವಿದೆ ಎಂದು ನಾನು ನಂಬುತ್ತೇನೆ. ಶ್ರೇಷ್ಠ ವಿಚಾರಗಳನ್ನು ಒಗ್ಗೂಡಿಸಿ ದೇಶದ ಅಭಿವೃದ್ಧಿಯ ಭಾಗವಾಗಲು ನಾವು ಈ ಶೋ ಮಾಡುತ್ತಿದ್ದೇವೆ ಎಂದು ಬರುಣ್ ದಾಸ್ ಹೇಳಿದ್ದಾರೆ.
ಇದನ್ನೂ ಓದಿ: ಟಿವಿ9 ನೆಟ್‌ವರ್ಕ್ ಸಿಇಒ ಬರುಣ್ ದಾಸ್ ಜತೆ ವಿಜಯ್ ದೇವರಕೊಂಡ ವಿಶೇಷ ಸಂದರ್ಶನ: ‘ನ್ಯೂಸ್ 9 ಪ್ಲಸ್’ನಲ್ಲಿ ವೀಕ್ಷಿಸಿ
ಬರುಣ್ ದಾಸ್ ವೃತ್ತಿಪರ ನಿರೂಪಕರಲ್ಲದಿದ್ದರೂ ಸಿಇಒ ಆಗಿ ಮಾಧ್ಯಮ ಕ್ಷೇತ್ರದಲ್ಲಿ ವಿಶೇಷ ಹೆಸರು ಮಾಡಿದ್ದಾರೆ. ಆದರೆ, ಜನಸಾಮಾನ್ಯರಿಗೆ ಅವರ ಬಗ್ಗೆ ಹೆಚ್ಚು ತಿಳಿದಿಲ್ಲ. ಆದರೆ, ಅವರು ಸೆಲೆಬ್ರಿಟಿಗಳೊಂದಿಗೆ ಮುಖಾಮುಖಿ ಸಂದರ್ಶನಗಳನ್ನು ನಡೆಸುವುದು, ದೇಶದ ಅಭಿವೃದ್ಧಿಗಾಗಿ ಪ್ರತಿಭಾವಂತ ವ್ಯಕ್ತಿಗಳೊಂದಿಗೆ ವಿಶೇಷ ಸಂದರ್ಶನಗಳನ್ನು ಮಾಡುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದ್ದಾರೆ. ಇಂತಹ ಸಂಗತಿಗಳು ಸಾರ್ವಜನಿಕ ವಲಯದಲ್ಲಿ ಕಾಣಸಿಗುವುದು ಅಪರೂಪ ಎಂದು ನ್ಯೂಸ್ 9 ಪ್ಲಸ್ ಸಂಪಾದಕ ಸಂದೀಪ್ ಉನ್ನಿಥಾನ್ ಹೇಳಿದ್ದಾರೆ. ನಾಲ್ಕು ಮಿನಿ ಎಪಿಸೋಡ್‌ಗಳನ್ನು ಹೊಂದಿರುವ ಈ ಕಾರ್ಯಕ್ರಮದ ಮೊದಲ ಸೀಸನ್ ವಿಜಯ್ ದೇವರಕೊಂಡ ಮತ್ತು ಬರುಣ್ ದಾಸ್ ನಡುವಿನ ಸಂಭಾಷಣೆ ಮಾತ್ರವಲ್ಲದೆ ಸಾರ್ವಜನಿಕರಿಗೆ ತಿಳಿದಿಲ್ಲದ ಬಹಳಷ್ಟು ಆಸಕ್ತಿದಾಯಕ ಸಂಗತಿಗಳನ್ನು ಒಳಗೊಂಡಿದೆ.
ವಿಜಯ್ ದೇವರಕೊಂಡ ಸಂದರ್ಶನ:
ಅರ್ಜುನ್ ರೆಡ್ಡಿ ಸಿನಿಮಾದ ಅಭಿನಯದ ಮೂಲಕ ಖ್ಯಾತಿ ಗಳಿಸಿದ ಜನಪ್ರಿಯ ತೆಲುಗು ನಟ ವಿಜಯ್ ದೇವರಕೊಂಡ ಇದೀಗ ಬಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ. ಬಾಲಿವುಡ್ನಲ್ಲಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ 2 ದಿನಗಳ ಹಿಂದಷ್ಟೆ ಬಿಡುಗಡೆಯಾಗಿದೆ. ಈ ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್ ಆಗುತ್ತಿದ್ದಂತೆ ನಟ ವಿಜಯ್ ದೇವರಕೊಂಡ ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ: ‘ಲೈಗರ್ಗೋಸ್ಕರ ಎಣ್ಣೆ ಬಿಟ್ಟೆ, ಈವರೆಗೂ ಮುಟ್ಟಿಲ್ಲ’: ವಿಜಯ್ ದೇವರಕೊಂಡ
ಈ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ನಟನೆಯ ತಮ್ಮ ಪ್ರಯಾಣ, ತೆಲುಗು ಚಿತ್ರರಂಗದ ಯಶಸ್ಸು ಮತ್ತು ಇತ್ಯಾದಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಲ್ಲು ಅರ್ಜುನ್‌ನ ಪುಷ್ಪ, ಪ್ರಶಾಂತ್ ನೀಲ್ ಅವರ ಕೆಜಿಎಫ್ ಸರಣಿ, ನಿರ್ದೇಶಕ ಎಸ್‌ಎಸ್ ರಾಜಮೌಳಿಯ ಬಾಹುಬಲಿ ಸರಣಿ ಮತ್ತು ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಒಳಗೊಂಡ ಅವರ ಇತ್ತೀಚಿನ ಚಿತ್ರ RRR ಮತ್ತು ವಿಜಯ್ ದೇವರಕೊಂಡ ಅವರ ಅರ್ಜುನ್ ರೆಡ್ಡಿ ಮುಂತಾದ ದಕ್ಷಿಣ ಭಾರತದ ಚಲನಚಿತ್ರಗಳು ದೇಶಾದ್ಯಂತ ಭಾರೀ ಸದ್ದು ಮಾಡಿದ ಬೆನ್ನಲ್ಲೇ ತೆಲುಗು ನಟ ವಿಜಯ್ ದೇವರಕೊಂಡ ಅವರ ಲೈಗರ್ ಸಿನಿಮಾ ತೆರೆಗೆ ಬಂದಿದೆ.
ಈ ಚಲನಚಿತ್ರಗಳ ಯಶಸ್ಸು ದಕ್ಷಿಣ ಚಿತ್ರರಂಗದಲ್ಲಿ ಅಂತಾರಾಷ್ಟ್ರೀಯ ಮನ್ನಣೆಯ ಸಾಮರ್ಥ್ಯ, ಪ್ರತಿಭೆ ಮತ್ತು ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಿದೆ. ಇದೇ ವಿಚಾರವಾಗಿ ಮಾತನಾಡಿದ ವಿಜಯ್ ದೇವರಕೊಂಡ, “ಖಂಡಿತವಾಗಿಯೂ ತೆಲುಗು ಚಿತ್ರರಂಗಕ್ಕೆ ಇದು ಉತ್ತಮ ಸಮಯ. ದೇಶಕ್ಕಾಗಿ ಸಿನಿಮಾ ಮಾಡುವ ಮೂಲಕ ಬಾಹುಬಲಿ ನಮಗೆ ಏನು ಮಾಡಬಹುದೆಂದು ತೋರಿಸಿದೆ. ತೆಲುಗು ಚಿತ್ರರಂಗ ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ನನಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದ್ದಾರೆ.
Published On - 8:54 am, Sat, 27 August 22