ವಾರಿಯರ್ ಅವತಾರ ತಾಳಿದ ಅಭಿಷೇಕ್ ಅಂಬರೀಶ್; ಮಹೇಶ್ ಕುಮಾರ್ ನಿರ್ದೇಶನಕ್ಕೆ ರಾಕ್ಲೈನ್ ಬಂಡವಾಳ
ಮಹೇಶ್ ಕುಮಾರ್ ಅವರು ‘ಅಯೋಗ್ಯ’ ಚಿತ್ರದ ಮೂಲಕ ದೊಡ್ಡ ಯಶಸ್ಸು ಪಡೆದುಕೊಂಡರು. ಆ ಬಳಿಕ ಶ್ರೀಮುರಳಿ ನಟನೆಯ ‘ಮದಗಜ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದರು. ಇದಾದ ಬಳಿಕ ಅವರ ಯಾವುದೇ ಚಿತ್ರ ಘೋಷಣೆ ಆಗಿರಲಿಲ್ಲ.
ಅಭಿಷೇಕ್ ಅಂಬರೀಶ್ (Abhishek Ambareesh) ಅವರು ಚಿತ್ರರಂಗದಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಿದ್ದಾರೆ. ಹಾಗಂತ ಅವರು ತಮ್ಮ ಬಳಿ ಬಂದ ಎಲ್ಲ ಕಥೆಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅಳೆದು, ತೂಗಿ ಅವರು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. ಅವರ ತಾಯಿ, ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು (ಆಗಸ್ಟ್ 27) ಅಭಿಷೇಕ್ ಹೊಸ ಸಿನಿಮಾದ ಪೋಸ್ಟರ್ ರಿವೀಲ್ ಮಾಡಲಾಗಿದೆ. ವಾರಿಯರ್ ಲುಕ್ನಲ್ಲಿ ಅವರು ಮಿಂಚಿದ್ದಾರೆ. ಸದ್ಯ ಈ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸುತ್ತಿದೆ.
ಮಹೇಶ್ ಕುಮಾರ್ ಅವರು ‘ಅಯೋಗ್ಯ’ ಚಿತ್ರದ ಮೂಲಕ ದೊಡ್ಡ ಯಶಸ್ಸು ಪಡೆದುಕೊಂಡರು. ಆ ಬಳಿಕ ಶ್ರೀಮುರಳಿ ನಟನೆಯ ‘ಮದಗಜ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದರು. ಇದಾದ ಬಳಿಕ ಅವರ ಯಾವುದೇ ಚಿತ್ರ ಘೋಷಣೆ ಆಗಿರಲಿಲ್ಲ. ಈಗ ಒಂದೊಳ್ಳೆಯ ಸಿದ್ಧತೆಯೊಂದಿಗೆ, ಒಳ್ಳೆಯ ದಿನ ಹೊಸ ಸಿನಿಮಾ ಘೋಷಿಸಿದ್ದಾರೆ.
ಅಂಬರೀಶ್ ಅವರ ಸಮಾಧಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿದೆ. ಅಲ್ಲಿಯೇ ಅಭಿಷೇಕ್ ಅಂಬರೀಶ್ ಅವರ ನಾಲ್ಕನೇ ಚಿತ್ರದ ಮುಹೂರ್ತ ನೆರವೇರಿದೆ. ಈ ಚಿತ್ರಕ್ಕೆ ಖ್ಯಾತ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈಗ ರಿಲೀಸ್ ಆಗಿರುವ ಹೊಸ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ.
‘ಬ್ಯಾಡ್ ಮ್ಯಾನರ್ಸ್’ ನಂತರ ಅಭಿಷೇಕ್ ಹೊಸ ಚಿತ್ರಕ್ಕೆ ಸೈನ್ ಮಾಡಿರುವುದು ಫ್ಯಾನ್ಸ್ಗೆ ಖುಷಿ ನೀಡಿದೆ. ಚಿತ್ರದ ಪೋಸ್ಟರ್ ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ವಾರಿಯರ್ ರೀತಿಯಲ್ಲಿ ಈ ಚಿತ್ರದ ಪೋಸ್ಟರ್ ಇದೆ. ಪಿರಿಯಡ್ ಡ್ರಾಮಾ ಕಥೆಯಲ್ಲಿ ಯಂಗ್ ರೆಬೆಲ್ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಚಿತ್ರದ ಕಥೆ 1,000 ವರ್ಷಗಳ ಹಿಂದೆ ನಡೆಯಲಿದೆ ಎಂದು ತಂಡದವರು ಹೇಳಿಕೊಂಡಿದ್ದಾರೆ. ಈ ಕಾರಣದಿಂದಲೂ ಕುತೂಹಲ ಮನೆ ಮಾಡಿದೆ.
The #Rebellion Begins #AbhishekAmbareesh first look from #AA04 @RocklineEnt to bankroll this epic drama. An official announcement with poster was Revealed on @sumalathaA birthday Action entertainer director by @SMaheshDirector will tell a story#Raghavendrachitravani pic.twitter.com/DGWgo4mdeZ
— Sudheendra_Venkatesh PRO (@PRO_SVenkatesh) August 27, 2022
ಇದನ್ನೂ ಓದಿ: ರೆಬೆಲ್ ಸ್ಟಾರ್ ಅಂಬರೀಶ್ ಕನಸನ್ನು ಸೂಪರ್ ಸ್ಟಾರ್ ಸೋಮಣ್ಣ ನೆರೆವೇರಿಸಿದ್ದಾರೆ ಎಂದು ಹಾಡಿಹೊಗಳಿದ ಸುಮಲತಾ
ಸುಮಲತಾ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಸುಮಲತಾ ಅವರಿಗೆ ಶುಭ ಹಾರೈಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಭಿಷೇಕ್ ಅವರ ಹೊಸ ಸಿನಿಮಾ ಕೂಡ ಲಾಂಚ್ ಆಗಿರುವುದು ಈ ಖುಷಿಯನ್ನು ಡಬಲ್ ಮಾಡಿದೆ. ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ, ಚಿತ್ರದ ನಾಯಕಿ ಯಾರು, ಶೂಟಿಂಗ್ ಯಾವಾಗಿನಿಂದ ಆರಂಭ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
Published On - 1:40 pm, Sat, 27 August 22