ಬಿಗ್ಬಾಸ್ ತೆಲುಗು: ಕನ್ನಡತಿ ತನುಜಾಗೆ ದಾಖಲೆ ವೋಟಿಂಗ್?
Tanuja Puttaswamy: ಕನ್ನಡ ಸಿನಿಮಾಗಳ ಮೂಲಕ ನಟನೆಗೆ ಕಾಲಿಟ್ಟ ಕನ್ನಡತಿ ತನುಜಾ ಪುಟ್ಟಸ್ವಾಮಿ ತೆಲುಗು ಬಿಗ್ಬಾಸ್ನಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಫಿನಾಲೆ ವಾರದ ಸಮೀಪದಲ್ಲಿದ್ದು, ತನುಜಾ ಈ ಬಾರಿ ನಾಮಿನೇಟ್ ಆಗಿದ್ದಾರೆ. ಆದರೆ ಅವರಿಗೆ ದಾಖಲೆ ಸಂಖ್ಯೆಯ ಮತಗಳು ಬಿದ್ದಿವೆ ಎಂಬುದು ಅರ್ಲಿ ಟ್ರೆಂಡ್ಸ್ನಿಂದ ತಿಳಿದು ಬರುತ್ತಿದೆ.

ಬಿಗ್ಬಾಸ್ ತೆಲುಗು ಸೀಸನ್ 09 (Bigg Boss Kannada) ರಲ್ಲಿ ಇಬ್ಬರು ಕನ್ನಡತಿಯರು ಸ್ಪರ್ಧಿಸುತ್ತಿದ್ದಾರೆ. ತನುಜಾ ಪುಟ್ಟಸ್ವಾಮಿ ಮತ್ತು ಸಂಜನಾ ಗರ್ಲಾನಿ. ಸೀಸನ್ 09ರ ಫಿನಾಲೆ ವಾರಕ್ಕೆ ಕೆಲವೇ ದಿನಗಳು ಬಾಕಿ ಇದೆ. ಈ ವಾರ ಕಳೆದರೆ ಸ್ಪರ್ಧಿಗಳು ಫಿನಾಲೆ ವಾರ ತಲುಪುತ್ತಾರೆ. ಸಂಜನಾ, ತನುಜಾ ಜೊತೆಗೆ ಸುಮನ್, ಕಲ್ಯಾಣ್, ರಿತು, ಇಮಾನ್ಯುಯೆಲ್ ಇನ್ನೂ ಕೆಲವು ಗಟ್ಟಿ ಸ್ಪರ್ಧಿಗಳು ಮನೆಯಲ್ಲಿದ್ದಾರೆ. ಆದರೆ ಈ ವಾರ ತನುಜಾ ಅವರಿಗೆ ಭಾರಿ ಸಂಖ್ಯೆಯ ವೋಟಿಂಗ್ ಬಂದಿದೆ ಎಂದು ಕೆಲ ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಅದರಲ್ಲೂ ತನುಜಾಗೆ ದಾಖಲೆ ಸಂಖ್ಯೆಯ ವೋಟಿಂಗ್ ಬಂದಿದೆಯಂತೆ.
ತನುಜಾ ಪುಟ್ಟಸ್ವಾಮಿ ಮೊದಲಿನಿಂದಲೂ ತೆಲುಗು ಬಿಗ್ಬಾಸ್ ಸೀಸನ್ 09ರ ಮೆಚ್ಚಿನ ಕಂಟೆಸ್ಟಂಟ್ ಆಗಿ ಗಮನ ಸೆಳೆದಿದ್ದಾರೆ. ಈ ವಾರ ಅವರು ನಾಮಿನೇಷನ್ನಲ್ಲಿದ್ದು ಅವರನ್ನು ಮನೆಯಲ್ಲಿ ಉಳಿಸಲು ಭಾರಿ ಸಂಖ್ಯೆಯ ವೋಟಿಂಗ್ ಅನ್ನು ಜನ ಮಾಡಿದ್ದಾರೆ ಎನ್ನಲಾಗುತ್ತಿದೆ. ಕೆಲ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯೇಕ ವೋಟಿಂಗ್ ಪೋಲ್ ರನ್ ಮಾಡಿದ್ದು, ಅವುಗಳಲ್ಲಿ ತನುಜಾಗೆ ಭಾರಿ ಸಂಖ್ಯೆಯ ವೋಟಿಂಗ್ ಆಗಿರುವುದು ತಿಳಿದು ಬರುತ್ತಿದೆ. ಇದು ಅಧಿಕೃತ ಅಲ್ಲ, ಆದರೆ ಬಿಗ್ಬಾಸ್ ವೋಟಿಂಗ್ನ ಅನುಕರಣೆ ಇದಾಗಿದ್ದು, ಇದರಿಂದ ಟ್ರೆಂಡ್ ತಿಳಿಯಬಹುದಾಗಿದೆ.
ಈಗ ಹರಿದಾಡುತ್ತಿರುವ ವೋಟಿಂಗ್ ಮಾಹಿತಿ ಪ್ರಕಾರ, ತನುಜಾ ಪುಟ್ಟಸ್ವಾಮಿಗೆ ದೊಡ್ಡ ಸಂಖ್ಯೆಯಲ್ಲಿ ವೋಟಿಂಗ್ ಆಗಿದೆ ಎನ್ನಲಾಗುತ್ತಿದೆ. ಸಹಜವಾಗಿಯೇ ವೋಟಿಂಗ್ ಪಟ್ಟಿಯಲ್ಲಿ ತನುಜಾ ಮೊದಲ ಸ್ಥಾನದಲ್ಲಿದ್ದಾರೆ. ಆದರೆ ದ್ವಿತೀಯ ಸ್ಪರ್ಧಿಗೂ ತನುಜಾಗೂ ಬರೋಬ್ಬರಿ ದುಪ್ಪಟ್ಟು ವೋಟಿಂಗ್ ಅಂತರ ಇದೆ. ವಿಶೇಷವೆಂದರೆ ಮೂರನೇ ಸ್ಥಾನದಲ್ಲಿ ಸಂಜನಾ ಇದ್ದಾರೆ. ಸಂಜನಾ ಸಹ ನಾಮಿನೇಷನ್ನಲ್ಲಿದ್ದು, ಈ ಬಾರಿ ಉಳಿದುಕೊಂಡು ಫಿನಾಲೆ ಪ್ರವೇಶಿಸಲಿದ್ದಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ:ತೆಲುಗು ಬಿಗ್ಬಾಸ್ನ ಕ್ಯೂಟ್ ಸ್ಪರ್ಧಿ, ಕನ್ನಡತಿ ತನುಜಾ ಪುಟ್ಟಸ್ವಾಮಿ
ತನುಜಾ ಈ ಬಾರಿ ಗೆಲ್ಲುವ ಅಭ್ಯರ್ಥಿ ಎನ್ನಲಾಗುತ್ತಿದೆ. ಆದರೆ ಅವರಿಗೆ ಪ್ರಬಲ ಸ್ಪರ್ಧೆ ನೀಡುತ್ತಿರುವುದು ಕಲ್ಯಾಣ್ ಪದಲ. ಆದರೆ ಈ ಬಾರಿ ಅವರು ನಾಮಿನೇಟ್ ಆಗಿಲ್ಲ. ಹಾಗಾಗಿ ಅವರು ಸಹ ಫಿನಾಲೆಗೆ ಬರುವುದು ಬಹುತೇಕ ಪಕ್ಕ ಆಗಿದೆ. ತನುಜಾ ಮತ್ತು ಕಲ್ಯಾಣ್ ನಡುವೆ ಯಾರು ಈ ಬಾರಿ ಕಪ್ಪು ಗೆಲ್ಲಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ತನುಜಾ ಪುಟ್ಟಸ್ವಾಮಿ, ಕನ್ನಡ ಸಿನಿಮಾ ಮೂಲಕ ನಟನೆ ಆರಂಭಿಸಿದರೂ ಸಹ ನೆಲೆ ನಿಂತಿರುವುದು ತೆಲುಗು ಟಿವಿ ರಂಗದಲ್ಲಿ. ತನುಜಾ ಅವರು ಕೆಲವಾರು ತೆಲುಗು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದು, ತೆಲುಗು ಟಿವಿ ಪ್ರೇಕ್ಷಕರ ಮನೆ ಮಗಳಾಗಿ ಗುರುತಿಸಿಕೊಂಡಿದ್ದಾರೆ. ಈಗ ಬಿಗ್ಬಾಸ್ ನಲ್ಲಿಯೂ ಚೆನ್ನಾಗಿ ಆಡಿ ಗಮನ ಸೆಳೆಯುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




