ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ; ಇಲ್ಲಿವೆ ಫೋಟೋಸ್
ಕಿಚ್ಚ ಸುದೀಪ್ ಅವರ ಮನೆಯಲ್ಲಿ ಸದ್ದಿಲ್ಲದೆ ಮದುವೆ ಸಂಭ್ರಮ ಜೋರಾಗಿದೆ. ಅರಿಶಿಣ ಶಾಸ್ತ್ರ ನಡೆದಿದ್ದು, ಡಿಸೆಂಬರ್ 4ರಂದು ಪ್ಯಾಲೆಸ್ ಗ್ರೌಂಡ್ನಲ್ಲಿ ರಿಸೆಪ್ಶನ್ ನಡೆಯಲಿದೆ. ಹಾಗಾದರೆ ವಿವಾಹ ಆಗಿದ್ದು ಯಾರು? ಮದುವೆ ಆಗುತ್ತಿರೋದು ಯಾರು? ಆ ಬಗ್ಗೆ ಇಲ್ಲಿ ಇದೆ ವಿವರ .
Updated on: Dec 03, 2025 | 12:53 PM

ಕನ್ನಡದ ಸ್ಟಾರ್ ಹೀರೋ ಕಿಚ್ಚ ಸುದೀಪ್ ಮನೆಯಲ್ಲಿ ಈಗ ಮದುವೆ ಸಂಭ್ರಮ. ಹಾಗಂತ ಸುದೀಪ್ ಮಗಳು ಸಾನ್ವಿ ಸೈಲೆಂಟ್ ಆಗಿ ಮದುವೆ ಆಗುತ್ತಿದ್ದಾರೆ ಎಂದುಕೊಳ್ಳಬೇಡಿ. ಸುದೀಪ್ ಅಕ್ಕ ಸುರೇಖಾ ಅವರ ಮಗ ತಾರಣ್ ಸುರೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಾರಿಣಿ ಹೆಸರಿನ ಹುಡುಗಿಯನ್ನು ತಾರಣ್ ಕೈ ಹಿಡಿದಿದ್ದಾರೆ. ವಿವಾಹಕ್ಕೂ ಮೊದಲು ಅರಿಶಿಣ ಶಾಸ್ತ್ರ ನಡೆದಿದೆ. ಕುಟುಂಬದವರು ಮಾತ್ರ ಇದರಲ್ಲಿ ಭಾಗಿ ಆಗಿದ್ದರು. ತಾಯಿ ನಿಧನದ ನಂತರ ಕಿಚ್ಚನ ಮನೆಯಲ್ಲಿ ನಡೆದ ಮೊದಲ ಶುಭಕಾರ್ಯ ಇದು.

ಈಗಾಗಲೇ ಶ್ರೀಲಂಕಾದಲ್ಲಿ ತಾರಣ್ ಹಾಗೂ ತಾರಿಣಿ ಡೆಸ್ಟಿನೇಷನ್ ಮದುವೆ ಆಗಿದ್ದಾರೆ. ನವ ದಂಪತಿಗೆ ಎಲ್ಲರೂ ಶುಭ ಕೋರುತ್ತಾ ಇದ್ದಾರೆ.ಡಿಸೆಂಬರ್ 4ರಂದು ಪ್ಯಾಲೇಸ್ ಗ್ರೌಂಡ್ ಚಾಮರವಜ್ರದಲ್ಲಿ ಮದುವೆ ರಿಸೆಪ್ಶನ್ ಇದೆ. ಸಂಜೆ 7 ಗಂಟೆ ಬಳಿಕ ಕಾರ್ಯಕ್ರಮ ಆರಂಭ ಆಗುತ್ತದೆ.

ಕಿಚ್ಚ ಸುದೀಪ್ ಹಾಗೂ ಸುದೀಪ್ ಪತ್ನಿ ಪ್ರಿಯಾ ಮಗಳು ಸಾನ್ವಿಗೆ ಅರಿಶಿಣ ಹಚ್ಚುತ್ತಿರುವ ಫೋಟೋ ವೈರಲ್ ಆಗಿದೆ. ಹೀಗಾಗಿ, ಕೆಲವರು ಶಾನ್ವಿ ಮದುವೆ ಎಂದು ಸುದ್ದಿ ಹಬ್ಬಿಸಿದ್ದರು. ಆದರೆ, ಅದು ಫೇಕ್ ನ್ಯೂಸ್.

ಸದ್ಯ ಸಾನ್ವಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಅರಿಶಿನ ಶಾಸ್ತ್ರದ ಫೋಟೋಸ್ ಹಂಚಿಕೊಂಡಿದ್ದಾರೆ. ಸಾನ್ವಿ ಅವರು ಅದ್ಭುತವಾಗಿ ಹಾಡುತ್ತಾರೆ. ಅನೇಕ ಸಿನಿಮಾ ಹಾಡುಗಳಿಗೆ ಅವರು ಧ್ವನಿ ಆಗಿದ್ದಾರೆ. ಗಾಯಕಿ ಆಗಿ ಚಿತ್ರರಂಗದಲ್ಲಿ ಅವರು ಮುಂದುವರಿಯೋ ಸಾಧ್ಯತೆ ಇದೆ.




