AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆರೆಮೇಲೆ ರೊಮ್ಯಾನ್ಸ್​ ಮಾಡುವಾಗ ಕಂಟ್ರೋಲ್ ಕಳೆದುಕೊಂಡಿದ್ದ ಸೆಲೆಬ್ರಿಟಿಗಳು

ಕೆಲವು ಬಾರಿ ಶೂಟಿಂಗ್​​​ ಮಾಡುವ ವೇಳೆ ನಟ-ನಟಿ ಕೆಲವೊಮ್ಮೆ ಅವರು ಕಂಟ್ರೋಲ್ ಕಳೆದುಕೊಂಡು ಬಿಡುತ್ತಾರೆ. ಅಳುವ ದೃಶ್ಯವಿದ್ದರೆ ನಿಜಕ್ಕೂ ಕಣ್ಣೀರು ಹಾಕಿದವರು ಅನೇಕರಿದ್ದಾರೆ. ಕೋಪ ಮಾಡಿಕೊಳ್ಳುವ ದೃಶ್ಯ ಬಂದಾಗ ನಿಜಕ್ಕೂ ಸಿಟ್ಟಾದವರು ಹಲವರು. ರೊಮ್ಯಾಂಟಿಕ್ ದೃಶ್ಯದಲ್ಲಿ ಕಾಣಿಸಿಕೊಳ್ಳುವಾಗಲೂ ನಿಯಂತ್ರಣ ಕಳೆದುಕೊಂಡ ಅನೇಕರಿದ್ದಾರೆ.

ತೆರೆಮೇಲೆ ರೊಮ್ಯಾನ್ಸ್​ ಮಾಡುವಾಗ ಕಂಟ್ರೋಲ್ ಕಳೆದುಕೊಂಡಿದ್ದ ಸೆಲೆಬ್ರಿಟಿಗಳು
 ಶ್ರೀಲಕ್ಷ್ಮೀ ಎಚ್
| Edited By: |

Updated on:Mar 30, 2024 | 3:16 PM

Share

ಶೂಟಿಂಗ್ ಮಾಡುವಾಗ ಅವರು ಕೇವಲ ನಟರಾಗಿರುತ್ತಾರೆ. ಆದರೆ, ಎಲ್ಲಾ ಸಂದರ್ಭದಲ್ಲೂ ನಟನೆ ಮಾಡೋಕೆ ಸಾಧ್ಯವಿಲ್ಲ. ಕೆಲವೊಮ್ಮೆ ಅವರು ಕಂಟ್ರೋಲ್ ಕಳೆದುಕೊಂಡು ಬಿಡುತ್ತಾರೆ. ಅಳುವ ದೃಶ್ಯವಿದ್ದರೆ ನಿಜಕ್ಕೂ ಕಣ್ಣೀರು ಹಾಕಿದವರು ಅನೇಕರಿದ್ದಾರೆ. ಕೋಪ ಮಾಡಿಕೊಳ್ಳುವ ದೃಶ್ಯ ಬಂದಾಗ ನಿಜಕ್ಕೂ ಸಿಟ್ಟಾದವರು ಹಲವರು. ರೊಮ್ಯಾಂಟಿಕ್ ದೃಶ್ಯದಲ್ಲಿ ಕಾಣಿಸಿಕೊಳ್ಳುವಾಗಲೂ ನಿಯಂತ್ರಣ ಕಳೆದುಕೊಂಡ ಅನೇಕರಿದ್ದಾರೆ. ರಣಬೀರ್ ಕಪೂರ್, ಟೈಗರ್ ಶ್ರಾಫ್ (Tiger Shroff) ಸೇರಿ ಅನೇಕರು ಈ ರೀತಿ ನಿಯಂತ್ರಣ ಕಳೆದುಕೊಂಡಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ.

ರಣಬೀರ್ ಕಪೂರ್ ಹಾಗೂ ಎವಲಿನ್ ಶರ್ಮಾ

ರಣಬೀರ್ ಕಪೂರ್ ಅವರು ಬಾಲಿವುಡ್​ನ ಪ್ಲೇ ಬಾಯ್ ಎಂದೇ ಕುಖ್ಯಾತಿ ಪಡೆದಿದ್ದರು. ಅವರನ್ನು ಅನೇಕರು ಟೀಕೆ ಮಾಡಿದ್ದಿದೆ. ಅವರು ‘ಯೇ ಜವಾನಿ ಹೇ ದಿವಾನಿ’ ಸಿನಿಮಾದಲ್ಲಿ ನಟಿಸಿದ್ದರು. ಎವಲಿನ್ ಶರ್ಮಾ ಜೊತೆಗೆ ಫ್ಲರ್ಟ್ ಮಾಡುವ ದೃಶ್ಯವೊಂದು ಬರುತ್ತದೆ. ಈ ವೇಳೆ ಅವರು ರಣಬೀರ್ ಅವರು ಎಲವಿನ್ ಕಾಲನ್ನು ಸವರುತ್ತಾ ಕೂತಿದ್ದರು. ಅವರಿಗೆ ಕಟ್ ಎನ್ನುವುದು ಕೂಡ ಕೇಳಲೇ ಇಲ್ಲ. ತಮ್ಮ ಕಾಯಕವನ್ನು ಅವರು ಮುಂದುವರಿಸಿದ್ದರು.

ಟೈಗರ್ ಶ್ರಾಫ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್

‘ಎ ಫ್ಲೈಯಿಂಗ್ ಜಟ್’ ಸಿನಿಮಾದಲ್ಲಿ ಟೈಗರ್ ಶ್ರಾಫ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಒಟ್ಟಾಗಿ ನಟಿಸಿದ್ದರು. ಇಬ್ಬರೂ ಆಪ್ತವಾಗಿ ಕಾಣಿಸಿಕೊಳ್ಳುವ ದೃಶ್ಯ ಇತ್ತು. ನಿರ್ದೇಶಕರು ಹೇಳದ ಹೊರತಾಗಿಯೂ ಇಬ್ಬರೂ ಲಿಪ್ ಲಾಕ್ ಮಾಡಿದರು. ಆದರೆ, ಕಟ್ ಎಂದು ನಿರ್ದೇಶಕರು ಹೇಳಲೇ ಇಲ್ಲ.

ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್

ಸಿದ್ದಾರ್ಥ್ ಮಲ್ಹೋತ್ರಾ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ‘ಎ ಜಂಟ್ಲ್​ಮೆನ್’ ಸಿನಿಮಾದಲ್ಲಿ ಜಾಕ್ವೆಲಿನ್ ಜೊತೆ ಅವರು ನಟಿಸಿದ್ದರು. ಇಬ್ಬರೂ ಲಿಪ್ ಲಾಕ್ ಮಾಡುವ ದೃಶ್ಯ ಇತ್ತು. ನಿರ್ದೇಶಕರು ಕಟ್ ಎಂದ ಹೊರತಾಗಿಯೂ ಸಿದ್ದಾರ್ಥ್ ಹಾಗೂ ಜಾಕ್ವೆಲಿನ್ ಕಿಸ್ ಮಾಡೋದನ್ನು ಮುಂದುವರಿಸಿದ್ದರು.

ರುಸ್ಲಾನ್ ಮಮ್ತಾಜ್ ಹಾಗೂ ಚೇತನ್ ಪಾಂಡೆ

‘ಐ ಡೋಂಟ್ ಲವ್ ಯೂ’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಒತ್ತಾಯ ಪೂರ್ವಕವಾಗಿ ಚೇತನಾ ಪಾಂಡೆ ಜೊತೆ ರುಸ್ಲಾನ್ ಮಮ್ತಾಜ್ ರೊಮ್ಯಾನ್ಸ್ ಮಾಡಿದ್ದರು ಎನ್ನಲಾಗಿದೆ. ಆ ಬಳಿಕ ಅವರು ಕ್ಷಮೆ ಕೇಳಿದ್ದರು.

ಇಮ್ರಾನ್ ಹಷ್ಮಿ

ಇಮ್ರಾನ್​ ಹಷ್ಮಿ ಸೀರಿಯಲ್​ ಕಿಸ್ಸರ್​ ಎಂದೇ ಫೇಮಸ್​. ಅವರ ನಟನೆಯ ಪ್ರತಿ ಸಿನಿಮಾದಲ್ಲೂ ಕಿಸ್ಸಿಂಗ್​ ಸೀನ್​ಗೆ ಸಾಕಷ್ಟು ಮಹತ್ವ ಇರುತ್ತಿತ್ತು. ಇಮ್ರಾನ್​ ಹಾಗೂ ನರ್ಗೀಸ್​ ‘ಅಜರ್’​ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ‘ಬೋಲ್​ ದೋ ನಾ ಜರಾ..’ ಸಾಂಗ್​ನಲ್ಲಿ ಕಿಸ್ಸಿಂಗ್​ ದೃಶ್ಯವೊಂದು ಇದೆ. ನಿರ್ದೇಶಕರು ಕಟ್ ಎಂದರೂ ನರ್ಗಿಸ್ ಕಿಸ್ ಮಾಡೋದನ್ನು ನಿಲ್ಲಿಸಿರಲಿಲ್ಲ.

ರಂಜೀತ್ ಹಾಗೂ ಮಾಧುರಿ ದೀಕ್ಷಿತ್

‘ಪ್ರೇಮ್ ಪ್ರತಿಗ್ಯಾ’ ಸಿನಿಮಾದಲ್ಲಿ ರೇಪ್ ಸೀನ್ ಶೂಟ್ ಮಾಡುವುದಿತ್ತು. ರಂಜೀತ್ ಅವರು ಪದೇಪದೇ ಮಾಧುರಿ ದೀಕ್ಷಿತ್ ಅವರನ್ನು ಮುಟ್ಟುತ್ತಿದ್ದರು. ಇದನ್ನು ನೋಡಿ ಮಾಧುರಿ ದೀಕ್ಷಿತ್ ಕೂಗಿಕೊಂಡರು. ಆ ಬಳಿಕ ರಂಜಿತ್ ಅವರನ್ನು ಬೇರೆ ಕಡೆ ಕರೆದುಕೊಂಡು ಹೋಗಲಾಯಿತು.

ಇದನ್ನೂ ಓದಿ: ಮೆಟ್ರೋ ಒಳಗೆ ಅಕ್ಷಯ್ ಕುಮಾರ್-ಇಮ್ರಾನ್ ಹಷ್ಮಿ ಡ್ಯಾನ್ಸ್; ಅರೆಸ್ಟ್ ಮಾಡಿ ಎಂದ ನೆಟ್ಟಿಗರು

ವಿನೋದ್ ಖನ್ನಾ-ಡಿಂಪಲ್ ಕಪಾಡಿಯಾ

ವಿನೋದ್ ಖನ್ನಾ ಹಾಗೂ ಡಿಂಪಲ್ ಕಪಾಡಿಯಾ ‘ಪ್ರೇಮ ಧರಮ್’ ಸಿನಿಮಾದಲ್ಲಿ ನಟಿಸಿದ್ದರು. ರೊಮ್ಯಾಂಟಿಕ್ ದೃಶ್ಯ ಮುಗಿದ ಬಳಿಕವೂ ಕಪಾಡಿಯ ಅವರನ್ನು ಕಳುಹಿಸಲು ವಿನೋದ್ ಸಿದ್ಧರಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:41 pm, Sat, 30 March 24