ಸುಶಾಂತ್ ಸಿಂಗ್ ಸಾವಿನ ಬಳಿಕವೂ ಪ್ರೀತಿ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ; ಅಚ್ಚರಿಯ ಹೇಳಿಕೆ ನೀಡಿದ ರಿಯಾ ಚಕ್ರವರ್ತಿ

ರಿಯಾ ತಮ್ಮ ಗೆಳತಿಯೊಬ್ಬರೊಂದಿಗೆ ಇರುವ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಫೊಟೊದ ಜೊತೆಗೆ ಲೇಖಕ ರಾಬರ್ಟ್ ಫಾಲ್ಘಮ್ ಸಾಲುಗಳನ್ನು ಕ್ಯಾಪ್ಶನ್ ಆಗಿ ಬಳಸಿಕೊಂಡಿದ್ದಾರೆ.

ಸುಶಾಂತ್ ಸಿಂಗ್ ಸಾವಿನ ಬಳಿಕವೂ ಪ್ರೀತಿ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ; ಅಚ್ಚರಿಯ ಹೇಳಿಕೆ ನೀಡಿದ ರಿಯಾ ಚಕ್ರವರ್ತಿ
ರಿಯಾ ಚಕ್ರವರ್ತಿ
Edited By:

Updated on: Apr 05, 2022 | 1:05 PM

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ, ರಿಯಾ ಬಗ್ಗೆ ಕೆಟ್ಟ ಅಭಿಪ್ರಾಯಗಳು ಕೇಳಿಬಂದಿದ್ದವು. ಸುಶಾಂತ್ ಸಿಂಗ್ ಕುಟುಂಬ ಕೂಡ ರಿಯಾ ಮೇಲೆ ಆರೋಪ ಹೊರಿಸಿದ್ದರು. ಸುಶಾಂತ್ ಸಿಂಗ್ ರಜಪೂತ್ ಹಾಗೂ ರಿಯಾ ಚಕ್ರವರ್ತಿ ಪ್ರೀತಿಯಲ್ಲಿದ್ದ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಈಗ ಈ ವಿಚಾರದ ಬಗ್ಗೆ ರಿಯಾ ಚಕ್ರವರ್ತಿ ಮತ್ತೆ ಮಾತನಾಡಿದ್ದಾರೆ. 

ಡ್ರಗ್ ಪ್ರಕರಣದಲ್ಲಿ ಬಂಧಿತರಾಗಿದ್ದ ರಿಯಾ, ಕೆಲವು ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು. ಈ ಎಲ್ಲಾ ಘಟನೆಗಳ ನಡುವೆಯೂ ರಿಯಾ ಚಕ್ರವರ್ತಿ ತಮ್ಮ ಪ್ರೀತಿಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿಲ್ಲ. ಇಂದಿಗೂ ಕೂಡ ತಮ್ಮ ಪ್ರೀತಿಯ ಬಗ್ಗೆ ಅವರು ಅಭಿಮಾನ ಹೊಂದಿದ್ದಾರೆ. ಅವರ ಇತ್ತೀಚೆಗಿನ ಸಾಮಾಜಿಕ ಜಾಲತಾಣದ ಪೋಸ್ಟ್ ಇದಕ್ಕೆ ಉದಾಹರಣೆ.

ರಿಯಾ ತಮ್ಮ ಗೆಳತಿಯೊಬ್ಬರೊಂದಿಗೆ ಇರುವ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಫೊಟೊದ ಜೊತೆಗೆ ಲೇಖಕ ರಾಬರ್ಟ್ ಫಾಲ್ಘಮ್ ಸಾಲುಗಳನ್ನು ಕ್ಯಾಪ್ಶನ್ ಆಗಿ ಬಳಸಿಕೊಂಡಿದ್ದಾರೆ.

ಈ ಮೊದಲೂ ಕೂಡ ರಿಯಾ ಚಕ್ರವರ್ತಿ ಸುಶಾಂತ್ ಸಿಂಗ್ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು.

ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಜೈಲು ಪಾಲಾಗಿದ್ದ ಬಾಲಿವುಡ್ ನಟಿ ಹಾಗೂ ಸುಶಾಂತ್​ ಸಿಂಗ್​ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್‌ ಅಕ್ಟೋಬರ್​ 7ರಂದು ಜಾಮೀನು ನೀಡಿತ್ತು. ಇದಾದ ನಂತರ ಅವರು ಮನೆಯಿಂದ ಹೊರಗೆ ಕಾಣಿಸಿಕೊಂಡಿದ್ದು ತೀರಾನೇ ಅಪರೂಪ. ವಿಶೇಷ ಎಂದರೆ, ಈಗ ಅವರು ಚಿತ್ರರಂಗಕ್ಕೆ ಮರಳಿದ್ದಾರೆ. ಸಿನಿಮಾದ ಟ್ರೈಲರ್​ ಕೂಡ ರಿಲೀಸ್​ ಆಗಿದೆ.

ಹೌದು, ರಿಯಾ ಚಕ್ರವರ್ತಿ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ನಟನೆಯ ‘ಚೆಹ್ರೆ’ ಸಿನಿಮಾ ಟ್ರೈಲರ್​ ರಿಲೀಸ್​ ಆಗಿದೆ. ಅಮಿತಾಭ್​​ ಬಚ್ಚನ್​ ಮತ್ತು ಇಮ್ರಾನ್ ಹಶ್ಮಿ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದು, ಸಾಕಷ್ಟು ಕುತೂಹಲಕಾರಿಯಾಗಿದೆ. ರಿಯಾ ಚಕ್ರವರ್ತಿ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಬಗ್ಗೆ ಕೆಲವು ದಿನಗಳಿಂದ ಊಹಾಪೋಹಗಳು ಹರಿದಾಡಿದ್ದವು. ಈಗ ಸಿನಿಮಾದ ಟ್ರೈಲರ್​ ರಿಲೀಸ್​ ಆಗಿದ್ದು, ರಿಯಾ ಇರುವ ವಿಚಾರ ಸ್ಪಷ್ಟವಾಗಿದೆ.

ಈ ಸಿನಿಮಾದ ಟ್ರೈಲರ್ ಕುತೂಹಲದ ಗೂಡಾಗಿದೆ. ಅಮಿತಾಭ್​ ಬಚ್ಚನ್​ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಇಮ್ರಾನ್​ ಜಾಹೀರಾತು ಸಂಸ್ಥೆಯ ಮಾಲೀಕರಾಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್​ನಲ್ಲಿ ಸಾಕಷ್ಟು ತಿರುವುಗಳನ್ನು ನೀಡುವ ಕೆಲಸ ಮಾಡಿದ್ದಾರೆ ನಿರ್ದೇಶಕ ರೂಮಿ ಜಾಫ್ರಿ.

ಇದನ್ನೂ ಓದಿ: ಚಿತ್ರರಂಗಕ್ಕೆ ಮರಳಿದ ರಿಯಾ ಚಕ್ರವರ್ತಿ; ರಿಲೀಸ್ ಆಯ್ತು ಹೊಸ ಸಿನಿಮಾದ ಟ್ರೇಲರ್

ಇದನ್ನೂ ಓದಿ: ಜೈಲಿನಿಂದ ಹೊರ ಬಂದ ರಿಯಾ ಚಕ್ರವರ್ತಿ ಏನು ಮಾಡುತ್ತಿದ್ದಾರೆ ಗೊತ್ತಾ?

Published On - 7:40 pm, Mon, 29 March 21