Fahadh Faasil Net Worth: ಮಾಲಿವುಡ್​ನ ಶ್ರೀಮಂತ ನಟ ಫಹಾದ್ ಫಾಸಿಲ್ ಆಸ್ತಿ ಎಷ್ಟು?

Fahadh Faasil Net Birthday: ಫಹಾದ್ ಫಾಸಿಲ್, ಮಾಲಿವುಡ್‌ನ ಪ್ರಸಿದ್ಧ ನಟ, ತಮ್ಮ ಅದ್ಭುತ ನಟನೆಯಿಂದ ಮತ್ತು ಯಶಸ್ವಿ ಸಿನಿಮಾಗಳಿಂದ ಜನಪ್ರಿಯರಾಗಿದ್ದಾರೆ. ಅವರ ಆಸ್ತಿ 45 ಕೋಟಿ ರೂಪಾಯಿಗಳಷ್ಟು ಅಂದಾಜಿಸಲಾಗಿದೆ. ಅವರು ಐಷಾರಾಮಿ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ ಮತ್ತು ಕೊಚ್ಚಿಯಲ್ಲಿ ದುಬಾರಿ ಮನೆಯನ್ನು ಹೊಂದಿದ್ದಾರೆ.

Fahadh Faasil Net Worth: ಮಾಲಿವುಡ್​ನ ಶ್ರೀಮಂತ ನಟ ಫಹಾದ್ ಫಾಸಿಲ್ ಆಸ್ತಿ ಎಷ್ಟು?
ಫಹಾದ್ ಫಾಸಿಲ್
Updated By: ರಾಜೇಶ್ ದುಗ್ಗುಮನೆ

Updated on: Aug 08, 2025 | 7:43 AM

ಫಹಾದ್ ಫಾಸಿಲ್ (Fahadh Faasil) ಅವರಿಗೆ ಇಂದು (ಆಗಸ್ಟ್ 8) ಹುಟ್ಟಿದ ದಿನ. ಅವರಿಗೆ ಕುಟುಂಬದವರು, ಆಪ್ತರು ಹಾಗೂ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ ಫಹಾದ್ ಅವರು ಖ್ಯಾತ ನಿರ್ದೇಶಕ ಫಾಸಿಲ್ ಅವರ ಪುತ್ರ. ತಂದೆ ನಿರ್ದೇಶನಕನಾಗಿದ್ದರಿಂದ ಫಹಾದ್​ಗೆ ನಟನಾಗಬೇಕು ಎಂಬ ಕನಸು ಸಹಜವಾಗಿಯೇ ಮೂಡಿತ್ತು. ಆ ಕನಸನ್ನು ಅವರು ನನಸು ಮಾಡಿಕೊಳ್ಳಲು ಪ್ರಯತ್ನಿಸಿ ಗೆದ್ದರು. ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಅವರ ಬಳಿ ಇವೆ.

ಫಹಾದ್ ಫಾಸಿಲ್ ಅವರು ಚಿತ್ರರಂಗಕ್ಕೆ ಪರಿಚಯಗೊಂಡಿದ್ದು, ತಂದೆಯಿಂದ ಅನ್ನೋದು ವಿಶೇಷ. 2002ರಲ್ಲಿ ಫಹಾದ್ ಅವರು ಬಣ್ಣದ ಲೋಕ ನೋಡಿದರು. ಆದರೆ, ಈ ಚಿತ್ರ ಗೆಲುವು ಕಾಣಲಿಲ್ಲ. ಆ ಬಳಿಕ ಫಹಾದ್ ಫಾಸಿಲ್ ಅವರು ಗ್ಯಾಪ್ ಕೊಟ್ಟು 2010ರ ಸಂದರ್ಭದಲ್ಲಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದರು. ‘ಚಾಪ್ಪ ಕುರಿಷು’ (2011) ಸಿನಿಮಾದ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಬಂತು. ನಂತರ ಅವರು ಯಶಸ್ಸಿನ ತುದಿಗೆ ಹೋದರು.

ನಿರ್ಮಾಪಕರಾಗಿಯೂ ಫಹಾದ್ ಫೇಮಸ್. 2014ರಲ್ಲಿ ‘ಜೋಜಿ’, ‘ಪ್ರೇಮಲು’ ರೀತಿಯ ಚಿತ್ರಗಳನ್ನು ಫಹಾದ್ ಅವರು ನಿರ್ಮಾಣ ಮಾಡಿದರು ಮತ್ತು ಗೆದ್ದರು. ಅವರು ಇತ್ತೀಚೆಗೆ ‘ಪ್ರೇಮಲು’ ಸಿನಿಮಾ ಮಾಡಿದ್ದಾರೆ ಮತ್ತು ಅದು ಗೆದ್ದಿದೆ.

ಇದನ್ನೂ ಓದಿ
‘ಸು ಫ್ರಮ್ ಸೋ’ ಚಿತ್ರಕ್ಕೆ ಎರಡು ವಾರ; ವಿಶ್ವ ಬಾಕ್ಸ್ ಆಫೀಸ್​ ಲೆಕ್ಕ
‘ಹಣ ಕೊಟ್ಟು ಟ್ರೋಲ್ ಮಾಡಿಸಿದರು, ಬೆಳೆಯದಂತೆ ತಡೆದರು’; ರಶ್ಮಿಕಾ ಮಂದಣ್ಣ
50 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಸು ಫ್ರಮ್ ಸೋ’; ಎಲ್ಲಿಂದ ಎಷ್ಟು ಬಂತು?
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

ಫಹಾದ್ ಫಾಸಿಲ್ ಭಿನ್ನ. ಅವರಿಗೆ ತಲೆಯಲ್ಲಿ ಹೆಚ್ಚು ಕೂದಲಿಲ್ಲ. ಅವರು ಬಾಡಿ ಬೆಳೆಸಿಕೊಂಡವರೂ ಅಲ್ಲ. ಸಿಕ್ಸ್ ಪ್ಯಾಕ್ ಅಂತೂ ಮಾಡಿಯೇ ಇಲ್ಲ. ನಟನೆ ಮೂಲಕ ಅವರು ಗಮನ ಸೆಳೆದರು.  ಫಹಾದ್ ಮಾಡಿದ ಸಿನಿಮಾಗಳು ಒಂದಕ್ಕಿಂತ ಒಂದು ಭಿನ್ನವಾಗಿದೆ. ‘22 ಫಿಮೇಲ್ ಕೊಟ್ಟಾಯಮ್, ‘ಅಮೆನ್’, ‘ಜೋಜಿ’, ‘ಮಲಿಕ್’, ‘ಡೈಮಂಡ್ ನೆಕ್ಲೇಸ್’, ‘ವಿಕ್ರಮ್’, ‘ಟ್ರಾನ್ಸ್’ ಪುಷ್ಪ’ ರೀತಿಯ ಸಿನಿಮಾಗಳಲ್ಲಿ ಅವರು ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಿ ಗಮನ ಸೆಳೆದರು ಎಂಬುದು ವಿಶೇಷ.

ಫಹಾದ್ ಫಾಸಿಲ್ ಅವರು ಮಾಲಿವುಡ್ ನಟಿ ನಜ್ರಿಯಾ ನಜೀಮ್ ಅವರನ್ನು ಮದುವೆ ಆಗಿದ್ದಾರೆ. ಇಬ್ಬರೂ ಹಲವು ಸಿನಿಮಾ ಮಾಡಿದ್ದರು. ಇವರ ಮಧ್ಯೆ ದೊಡ್ಡ ವಯಸ್ಸಿನ ಅಂತರ ಇದೆ. ಫಹಾದ್​ ಅವರಿಗೆ 32 ವರ್ಷ ಇದ್ದಾಗ ಮದುವೆ ನಡೆಯಿತು. ಆಗ ನಜ್ರಿಯಾ ವಯಸ್ಸು 19. ಅಂದರೆ ಇವರ ಮಧ್ಯೆ ಸುಮಾರು 13 ವರ್ಷಗಳ ಅಂತರ ಇದೆ.   ಹಲವು ಲಕ್ಷುರಿ ಕಾರುಗಳು ಫಹಾದ್ ಫಾಸಿಲ್ ಬಳಿ ಇವೆ. ಪೋರ್ಷಾ 911 ಕ್ಯಾರೆರಾ ಎಸ್, ಮರ್ಸಿಡೀಸ್ ಬೆಂಜ್ ಇ ಕ್ಲಾಸ್, ರೇಂಜ್ ರೋವರ್ ವೋಗ್ ಕಾರುಗಳು ಇವೆ.

ಇದನ್ನೂ ಓದಿ: ಫಹಾದ್ ಫಾಸಿಲ್ ಬಳಸುವುದು ಕೀಪ್ಯಾಡ್ ಫೋನು, ಆದರೆ ಬೆಲೆ ಎಷ್ಟು ಗೊತ್ತೆ?

2019ರಲ್ಲಿ ಫಹಾದ್ ಅವರು ಕೊಚ್ಚಿಯಲ್ಲಿ ಲಕ್ಷುರಿ ಮನೆ ಖರೀದಿ ಮಾಡಿದರು. ಈ ಮನೆ ಕೋಟ್ಯಂತರ ರೂಪಾಯಿ ಬೆಲೆಬಾಳುತ್ತದೆ. ಫಹಾದ್ ಅವರ ಆಸ್ತಿ 45 ಕೋಟಿ ರೂಪಾಯಿ. ಅವರು ಪ್ರತಿ ಚಿತ್ರಕ್ಕೆ 3.5 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.z