ನಟ ಫಹಾದ್ ಫಾಸಿಲ್​ಗೆ ಇದೆ ವಿಚಿತ್ರ ಕಾಯಿಲೆ; ಇದರಿಂದ ಆಗೋ ಸಮಸ್ಯೆಗಳೇನು?

|

Updated on: May 28, 2024 | 7:36 AM

ADHD ಅನ್ನೋದು ಈ ಕಾಯಿಲೆಯ ಹೆಸರು. ಇದು ನರಕ್ಕೆ ಸಂಬಂಧಪಟ್ಟಿದ್ದು. ಇದು ಮಿದುಳಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಇದು ಮಕ್ಕಳಲ್ಲಿ ಸಾಮಾನ್ಯ ಸಮಸ್ಯೆ. ಆದರೆ, ದೊಡ್ಡವರಿಗೆ ಈ ರೋಗದಿಂದ ತೊಂದರೆ ಉಂಟಾಗುತ್ತದೆ. ಈ ರೀತಿಯ ವಿಚಿತ್ರ ಕಾಯಿಲೆಯಿಂದ ಅವಳು ಬಳಲುತ್ತಿದ್ದಾರೆ.

ನಟ ಫಹಾದ್ ಫಾಸಿಲ್​ಗೆ ಇದೆ ವಿಚಿತ್ರ ಕಾಯಿಲೆ; ಇದರಿಂದ ಆಗೋ ಸಮಸ್ಯೆಗಳೇನು?
ಫಹಾದ್
Follow us on

ದಕ್ಷಿಣದ ಖ್ಯಾತ ನಟ ಫಹಾದ್ ಫಾಸಿಲ್ (Fahadh Faasil) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ನಟನೆಯ ‘ಆವೇಶಂ’ ಸಿನಿಮಾ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದೆ. ಈ ಸಿನಿಮಾದಲ್ಲಿ ಅವರು ಮಾಡಿದ ರೌಡಿ ರಂಗ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಈ ಮಧ್ಯೆ ಒಂದು ಶಾಕಿಂಗ್ ವಿಚಾರ ಹೊರ ಬಿದ್ದಿದೆ. ಫಹಾದ್​ಗೆ ಒಂದು ವಿಚಿತ್ರ ಕಾಯಿಲೆ ಇದೆಯಂತೆ. ಈ ಬಗ್ಗೆ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅವರಿಗೆ ಈ ರೋಗ ಇತ್ತೀಚೆಗೆ ಪತ್ತೆಯಾಗಿದೆ.

ADHD ಅನ್ನೋದು ಈ ಕಾಯಿಲೆಯ ಹೆಸರು. ಇದು ನರಕ್ಕೆ ಸಂಬಂಧಪಟ್ಟಿದ್ದು. ಇದು ಮಿದುಳಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಅದರಲ್ಲೂ ಮುಖ್ಯವಾಗಿ ನಡವಳಿಕೆ, ಉದ್ವೇಗ, ನಿಯಂತ್ರಣ ಸಾಮರ್ಥ್ಯ ಕಡಿಮೆ ಮಾಡುತ್ತದೆ. ಇದು ಮಕ್ಕಳಲ್ಲಿ ಸಾಮಾನ್ಯ ಸಮಸ್ಯೆ. ಆದರೆ, ದೊಡ್ಡವರಿಗೆ ಈ ರೋಗದಿಂದ ತೊಂದರೆ ಉಂಟಾಗುತ್ತದೆ. ಈ ರೀತಿಯ ವಿಚಿತ್ರ ಕಾಯಿಲೆಯಿಂದ ಅವಳು ಬಳಲುತ್ತಿದ್ದಾರೆ.

‘ಸಣ್ಣ ವಯಸ್ಸಿನಲ್ಲೇ ಈ ರೋಗ ಪತ್ತೆ ಆದರೆ ಅದನ್ನು ಗುಣಪಡಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ವಯಸ್ಸಾದ ಮೇಲೆ ಇದನ್ನು ಗುಣಪಡಿಸುವುದು ಕಷ್ಟ ಎಂಬುದು ವೈದ್ಯರ ಅಭಿಪ್ರಾಯ. ನಾನು ವೈದ್ಯಕೀಯವಾಗಿ ADHD ರೋಗಿ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಫಹಾದ್ ಫಾಸಿಲ್ ಹಿಂದಿ ಸಿನಿಮಾಗಳಿಂದ ದೂರ ಇರೋದೇಕೆ? ಕಾರಣ ಕೊಟ್ಟ ನಟ

ಆವೇಶಂ ಸಿನಿಮಾ ಏಪ್ರಿಲ್ 11ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಒಟಿಟಿಯಲ್ಲಿ  ಪ್ರಸಾರ ಕೂಡ ಆರಂಭಿಸಿದೆ. ಫಹಾದ್ ಫಾಸಿಲ್ ಅವರು ಸದ್ಯ ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರಲ್ಲಿ ಅವರು ಪೊಲೀಸ್ ಪಾತ್ರ ಮಾಡುತ್ತಿದ್ದು, ಇದಕ್ಕೆ ನೆಗೆಟಿವ್ ಶೇಡ್ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.