
ಫಹಾದ್ ಫಾಸಿಲ್ (Fahadh Faasil) ಅವರು ಕಥೆಯ ಆಯ್ಕೆಯಲ್ಲಿ ಎಂದಿಗೂ ಹಿಂದೆ ಬಿದ್ದವರಲ್ಲ ಅನ್ನೋದು ಗೊತ್ತಿದೆ. ಅವರ ನಟನೆಯ ಎಲ್ಲಾ ಚಿತ್ರಗಳು ಭಿನ್ನವಾಗಿಯೇ ಇವೆ ಎನ್ನಬಹುದು. ‘ಪುಷ್ಪ 2’ ಚಿತ್ರದಲ್ಲಿ ಅವರು ಶೇಖಾವತ್ ಪಾತ್ರವನ್ನು ಮಾಡಿ ಮೆಚ್ಚುಗೆ ಪಡೆದರು. ಆ ಬಳಿಕ ಅವರು ಆ ರೀತಿಯದ್ದೇ ಸಿನಿಮಾ ಮಾಡುತ್ತೇನೆ ಎಂದು ಕುಳಿತವರಲ್ಲ ಎಂದೇ ಹೇಳಬಹುದು. ಈಗ ಫಹಾದ್ ಅವರ ಹೊಸ ಚಿತ್ರವೊಂದು ಒಟಿಟಿಯಲ್ಲಿ ಬಂದಿದೆ. ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಲಭ್ಯವಿದೆ. ಇದರ ಟ್ವಿಸ್ಟ್‌ಗಳು ಯಾರೂ ಊಹಿಸಲೂ ಸಾಧ್ಯವಿಲ್ಲ ಎಂದೇ ಹೇಳಬಹುದು.
ಈ ಚಿತ್ರದ ಹೆಸರು ‘ಮಾರೀಸನ್’ ಎಂದು. ಈ ಸಿನಿಮಾ ಮೂಲತಃ ತಮಿಳು ಚಿತ್ರ. ಈ ಚಿತ್ರ ಕನ್ನಡದಲ್ಲೂ ಲಭ್ಯವಿದೆ. ಸುಧೀಶ್ ಶಂಕರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸುಧೀಶ್ ಅವರು ಧಾರಾವಾಹಿಗಳನ್ನು ಮಾಡಿ ಫೇಮಸ್ ಆದವರು. ಅವರು ಕಿರುತೆರೆಯಲ್ಲಿ ಚೆನ್ನಾಗಿ ಹೆಸರು ಮಾಡಿದ್ದಾರೆ. ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
2025ರ ಜುಲೈ 25ರಂದು ಥಿಯೇಟರ್ನಲ್ಲಿ ರಿಲೀಸ್ ಆಯಿತು. ಈಗ ಚಿತ್ರವು ಒಟಿಟಿಯಲ್ಲಿ ಬಿಡುಗಡೆ ಕಂಡಿದೆ. ಫಹಾದ್ ಫಾಸಿಲ್ ಅವರು ದಯಾಳ್ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ವದಿವೇಲು ವೇಲಾಯುಧಂ ಪಿಳ್ಳಯ್ ಪಾತ್ರ ಮಾಡಿದ್ದಾರೆ. ದಯಾಳ್ ಹುಟ್ಟು ಕಳ್ಳ. ಕದಿಯೋದು ಎಂದರೆ ಆತನಿಗೆ ಇಷ್ಟ. ಆತ ಜೈಲಿನಿಂದ ಬಿಡುಗಡೆ ಕಾಣುತ್ತಾನೆ ಮತ್ತು ಒಂದು ಮನೆಗೆ ಕಳ್ಳತನ ಮಾಡಲು ಬರುತ್ತಾನೆ. ಆಗ ವೇಲಾಯುಧಂ ಸಿಗುತ್ತಾನೆ. ವೇಲಾಯುಧಂಗೆ ಮರೆವಿನ ಕಾಯಿಲೆ.
ವೇಲಾಯುಧಂನ ತಾನೇ ಊರಿಗೆ ಬಿಡುವ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ ದಯಾಳ್. ಇದಕ್ಕೆ ಕಾರಣ ಏನು? ಮುಂದೆ ಏನಾಗುತ್ತದೆ ಎಂಬುದೆಲ್ಲವನ್ನೂ ಸಿನಿಮಾದಲ್ಲೇ ನೋಡಿ ತಿಳಿದುಕೊಳ್ಳಬೇಕು. ಸಿನಿಮಾದಲ್ಲಿ ಆರಂಭದಲ್ಲಿ ಹಾಸ್ಯ ಇದೆ. ಮುಂದೆ ಏನಾಗುತ್ತದೆ? ಅಸಲಿಗೆ ಸಿನಿಮಾದಲ್ಲಿ ಏನಿದೆ ಎಂಬುದು ಸಂಪೂರ್ಣ ನೋಡಿದ ಬಳಿಕವೇ ಸಿಗಲಿದೆ. ಇದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ.
ಇದನ್ನೂ ಓದಿ: ಆಸ್ಕರ್ ವಿಜೇತ ನಿರ್ದೇಶಕನಿಗೆ ನೋ ಹೇಳಿದ ಫಹಾದ್ ಫಾಸಿಲ್
‘ಮಾರೀಸನ್’ ಸಿನಿಮಾದಲ್ಲಿ ಹಲವು ಟ್ವಿಸ್ಟ್‌ಗಳು ಇವೆ. ಆ ಟ್ವಿಸ್ಟ್ಗಳನ್ನು ನೀವು ಊಹಿಸಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಚಿತ್ರವನ್ನು ಇಷ್ಟಪಡುವವರಿಗೆ ಈ ಚಿತ್ರ ಇಷ್ಟ ಆಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.