ಸಮಂತಾ ದೇಹದ ಮೇಲಿರುವ ಟ್ಯಾಟೂ ಗತಿಯೇನು? ಅದರಲ್ಲಿದೆ ನಾಗ ಚೈತನ್ಯ ನೆನಪು

ಸುಮಾರು 10 ವರ್ಷಗಳ ಕಾಲ ಸಮಂತಾ ಮತ್ತು ನಾಗ ಚೈತನ್ಯ ಗೆಳೆಯರಾಗಿ, ಪ್ರೇಮಿಗಳಾಗಿದ್ದರು. ನಂತರ ಮದುವೆ ಆದರು. ಇವರ ಮದುವೆಗೆ ನಾಲ್ಕು ವರ್ಷ ತುಂಬುವುದರೊಳಗೆ ವಿಚ್ಛೇದನದ ಸುದ್ದಿ ಹೊರ ಬಿದ್ದಿದೆ.

ಸಮಂತಾ ದೇಹದ ಮೇಲಿರುವ ಟ್ಯಾಟೂ ಗತಿಯೇನು? ಅದರಲ್ಲಿದೆ ನಾಗ ಚೈತನ್ಯ ನೆನಪು
ಸಮಂತಾ
Edited By:

Updated on: Oct 07, 2021 | 2:11 PM

ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯ ಬೇರೆಯಾಗುವ ಬಗ್ಗೆ ಘೋಷಣೆ ಮಾಡಿ ವಾರ ಕಳೆಯುತ್ತಾ ಬಂದಿದೆ. ಇದಾದ ನಂತರದಲ್ಲಿ ಅವರ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿವೆ. ಇದರಲ್ಲಿ ಹಲವು ವದಂತಿಗಳು, ಇನ್ನೂ ಕೆಲವು ನಿಜ. ಈ ಮಧ್ಯೆ ಸಮಂತಾ ಅಕ್ಕಿನೇನಿ ದೇಹದ ಮೇಲಿರುವ ಟ್ಯಾಟೂ ಬಗ್ಗೆ ಅಭಿಮಾನಿಗಳು ಚಿಂತಿಸುತ್ತಿದ್ದಾರೆ. ಏಕೆಂದರೆ ಸಮಂತಾ ದೇಹದ ಮೇಲೆ ನಾಗ ಚೈತನ್ಯ ಅವರ ಸಹಿ ಇದೆ.

ಸುಮಾರು 10 ವರ್ಷಗಳ ಕಾಲ ಸಮಂತಾ ಮತ್ತು ನಾಗ ಚೈತನ್ಯ ಗೆಳೆಯರಾಗಿ, ಪ್ರೇಮಿಗಳಾಗಿದ್ದರು. ನಂತರ ಮದುವೆ ಆದರು. ಇವರ ಮದುವೆಗೆ ನಾಲ್ಕು ವರ್ಷ ತುಂಬುವುದರೊಳಗೆ ವಿಚ್ಛೇದನದ ಸುದ್ದಿ ಹೊರ ಬಿದ್ದಿದೆ. ಈ ವಿಚಾರವನ್ನು ಅಭಿಮಾನಿಗಳ ಬಳಿ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗಲೇ ಅವರ ದೇಹದ ಮೇಲಿರುವ ಹಚ್ಚೆ ಬಗ್ಗೆ ಚರ್ಚೆ ನಡೆಯುತ್ತಿದೆ.

ಸಮಂತಾ ದೇಹದ ಮೇಲೆ ಮೂರು ಟ್ಯಾಟೂಗಳಿವೆ. ಅವರು ಮೊದಲ ಬಾರಿಗೆ ವೈಎಂಸಿ ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಇದರ ಅರ್ಥ ‘ಯೇ ಮಾಯಾ ಚೇಸಾವೆ’. ಈ ಸಿನಿಮಾ ರಾತ್ರೋರಾತ್ರಿ ಸಮಂತಾ ಅವರನ್ನು ಸ್ಟಾರ್​ ಆಗಿ ಮಾಡಿತು. ಮತ್ತೊಂದು ಟ್ಯಾಟೂನಲ್ಲಿ ನಾಗ ಚೈತನ್ಯ ಅವರ ಸಹಿ ಇದೆ. ಸಾಕಷ್ಟು ಫೋಟೋಶೂಟ್​​ಗಳಲ್ಲಿ ಈ ಸಹಿ ಎದ್ದು ಕಾಣಿಸಿದೆ. ಮತ್ತೊಂದು ಟ್ಯಾಟೂ ಬಾಣದ ಚಿಹ್ನೆಯನ್ನು ಹೊಂದಿದೆ. ನಾಗ ಚೈತನ್ಯ ಕೂಡ ಇದೇ ಟ್ಯಾಟೂ ಹಾಕಿಸಿಕೊಂಡಿದ್ದರು.

ಬಾಲಿವುಡ್​ ಸ್ಟಾರ್​ ನಟಿ ದೀಪಿಕಾ ಪಡುಕೋಣೆ ಅವರು ರಣಬೀರ್ ಕಪೂರ್​ ಅವರನ್ನು ಪ್ರೀತಿಸುತ್ತಿದ್ದಾಗ ಆರ್​ಕೆ ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಇನ್ನು, ನಯನತಾರಾ ಪಿಡಿ (ಪ್ರಭುದೇವ) ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಆದರೆ, ಇವೆರಡೂ ಸಂಬಂಧ ಉಳಿದಿಲ್ಲ. ನಂತರ ಅವರು ಲೇಸರ್​ ಸಹಾಯದಿಂದ ಈ ಟ್ಯಾಟೂ ತೆಗೆಸಿ ಹಾಕಿದ್ದರು. ಈಗ ಸಮಂತಾ ಕೂಡ ಇದೇ ಮಾರ್ಗ ತುಳಿಯಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಭಿಮಾನಿ ವಲಯದಲ್ಲಿ ಚರ್ಚೆ ಆಗುತ್ತಿದೆ.

ವಿಚ್ಛೇದನ ಪಡೆದ ನಂತರದಲ್ಲಿ ಸಮಂತಾ ಅವರು ಹಲವು ಪ್ರಾಜೆಕ್ಟ್​ಗಳನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ವಿಚಾರದ ಬಗ್ಗೆ ಅವರ ಕಡೆಯಿಂದ ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.

ಇದನ್ನೂ ಓದಿ: ‘ಜಗತ್ತನ್ನು ಬದಲಾಯಿಸಬೇಕಾದರೆ ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು’; ವಿಚ್ಛೇದನದ ನಂತರ ಸಮಂತಾ ಮೊದಲ ಮಾತು

ಸಮಂತಾ ಮೇಲೆ ನಾಗ ಚೈತನ್ಯಗೆ ಇತ್ತು ಹೊಟ್ಟೆಕಿಚ್ಚು? ವಿಚ್ಛೇದನದ ಅಸಲಿ ವಿಚಾರ ಬಯಲು