ಬಾಲಿವುಡ್ನ ಫಾತಿಮಾ ಸನಾ ಶೇಖ್ ಅವರು ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಅವರ ಬಗ್ಗೆ ಹರಿದಾಡಿದ ದೊಡ್ಡ ಸುದ್ದಿ ಸಾಕಷ್ಟು ವಿಚಲಿತರನ್ನಾಗಿಸಿತ್ತು. ಆದರೆ, ಅವರು ಎದೆಗುಂದಲಿಲ್ಲ. ಸದ್ಯ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಫಾತಿಮಾ ನಟಿಸುತ್ತಿದ್ದಾರೆ. ಹಾಗಾದರೆ ಅವರ ಬಗ್ಗೆ ಹುಟ್ಟಿಕೊಂಡ ವದಂತಿ ಏನು? ಅವರ ಹೆಸರು ತಳುಕು ಹಾಕಿಕೊಂಡಿದ್ದು ಯಾರ ಜೊತೆ ಆಗಿತ್ತು ಎಂಬುದನ್ನು ಅವರ ಜನ್ಮದಿನದಂದು (ಜನವರಿ 11) ನೋಡೋಣ ಬನ್ನಿ.
ಫಾತಿಮಾ ಅವರು ಬಣ್ಣದ ಲೋಕದಲ್ಲಿ ಜನಪ್ರಿಯತೆ ಪಡೆದಿದ್ದು ‘ದಂಗಲ್’ ಸಿನಿಮಾ ಮೂಲಕ. ಈ ಚಿತ್ರ ಅವರ ಬದುಕನ್ನೇ ಬದಲಿಸಿತು. ಅಲ್ಲದೆ, ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ದೊಡ್ಡ ವಿವಾದ ಹುಟ್ಟಿಕೊಳ್ಳಲು ಕಾರಣ ಆಗಿದ್ದು ಕೂಡ ಇದೇ ಸಿನಿಮಾ ಎನ್ನಬಹುದು. ಅವರ ಹೆಸರು ಆಮಿರ್ ಖಾನ್ ಜೊತೆ ತಳುಕು ಹಾಕಿಕೊಂಡಿತು. ಆಮಿರ್ ಖಾನ್ ಹಾಗೂ ಫಾತಿಮಾ ಡೇಟ್ ಮಾಡುತ್ತಿದ್ದಾರೆ ಎನ್ನುವ ವರದಿಗಳು ಹರಿದಾಡಿದವು.
ಕಾಕತಾಳೀಯ ಎಂಬಂತೆ ಕೆಲ ವರ್ಷಗಳ ಹಿಂದೆ ಆಮಿರ್ ಖಾನ್ ಅವರು ತಮ್ಮ ಎರಡನೇ ಪತ್ನಿ ಕಿರಣ್ ರಾವ್ಗೆ ವಿಚ್ಛೇದನ ನೀಡಿದರು. ಈ ವಿಚ್ಛೇದನಕ್ಕೆ ಆಮಿರ್ ಹಾಗೂ ಫಾತಿಮಾ ನಡುವಿನ ಆಪ್ತತೆಯೇ ಕಾರಣ ಎಂದು ಕೂಡ ವರದಿ ಆಯಿತು. ಆದರೆ, ಫಾತಿಮಾ ಇದನ್ನು ಒಪ್ಪಿಕೊಂಡಿಲ್ಲ. ಇವರ ನಡುವಿನ ಸಂಬಂಧ ಸಾಕಷ್ಟು ಚರ್ಚೆ ಆಯಿತು. 60ನೇ ವಯಸ್ಸಲ್ಲಿ ಆಮಿರ್ ಖಾನ್ ಅವರು ಫಾತಿಮಾನ ಮದುವೆ ಆಗಲು ಹೇಗೆ ಸಾಧ್ಯ ಎನ್ನುವ ಚರ್ಚೆಗಳು ಹುಟ್ಟಿಕೊಂಡವು.
ಆಮಿರ್ ಖಾನ್ ಅವರಿಗೆ ಈಗ 60 ವರ್ಷ ತುಂಬುತ್ತಾ ಬಂದಿದೆ. ಇನ್ನು ಫಾತಿಮಾಗೆ 32 ವರ್ಷ. ವಯಸ್ಸಿನ ಅಂತರ ನೋಡುವುದಾದರೆ ಫಾತಿಮಾ ಅವರು ಆಮಿರ್ ಮಗಳ ವಯಸ್ಸಿನವರು. ಹೀಗಾಗಿ, ಇದನ್ನು ಕೂಡ ಅನೇಕರು ಟೀಕೆ ಮಾಡಿದ್ದರು.
ಇದನ್ನೂ ಓದಿ: ಮದ್ಯ, ದೂಮಪಾನದ ವ್ಯಸನಿಯಾಗಿದ್ದ ಆಮಿರ್ ಖಾನ್; ಆ ಪ್ರೀತಿ ಎಲ್ಲವನ್ನೂ ಬದಲಿಸಿತು
ಈಗಾಗಲೇ ಆಮಿರ್ ಖಾನ್ ಹಾಗೂ ಕಿರಣ್ ರಾವ್ ಬೇರೆ ಆಗಿ ಸಾಕಷ್ಟು ಸಮಯ ಕಳೆದಿದೆ. ಆಮಿರ್ ಖಾನ್ ಕೂಡ ಬೇರೆ ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ. ಹೀಗಾಗಿ, ಅವರ ಬಗ್ಗೆ ಹರಡಿದ್ದು ಕೇವಲ ವದಂತಿ ಎಂಬುದು ಸ್ಪಷ್ಟವಾಗಿದೆ. ಸದ್ಯ ಆಮಿರ್ ಖಾನ್ ಅವರು ‘ತಾರೇ ಜಮೀನ್ ಪರ್’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.