ಅಲ್ಲು ಅರ್ಜುನ್ ಬಳಿ ಇರುವ ದುಬಾರಿ ಐದು ವಸ್ತುಗಳಿವು
Allu Arjun: ಅಲ್ಲು ಅರ್ಜುನ್, ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು. ಇತ್ತೀಚೆಗೆ ಬಿಡುಗಡೆ ಆದ ‘ಪುಷ್ಪ 2’ ಸಿನಿಮಾಕ್ಕೆ ಅವರು ಅತ್ಯಂತ ಹೆಚ್ಚು ಸಂಭಾವನೆ ಪಡೆದು ಸುದ್ದಿಯಾಗಿದ್ದಾರೆ. ಸ್ಟೈಲಿಷ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್, ಆದಾಯಕ್ಕೆ ತಕ್ಕಂತೆ ಖರ್ಚು ಸಹ ಮಾಡುತ್ತಾರೆ. ಅಲ್ಲು ಅರ್ಜುನ್ ಬಳಿ ಇರುವ ಐದು ದುಬಾರಿ ವಸ್ತುಗಳು ಇವು.
ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2′ ಸದ್ದು ಮಾಡುತ್ತಿದೆ. ಚಿತ್ರವು 1500 ಕೋಟಿ ರೂಪಾಯಿ ವ್ಯವಹಾರ ಮಾಡುವ ಸನಿಹದಲ್ಲಿದೆ. ಈ ಮೂಲಕ ಹಲವು ದಾಖಲೆಗಳನ್ನು ಮುರಿದಿವೆ. ಅಲ್ಲು ಅರ್ಜುನ್ ಸಿನಿಮಾದ ಮೂಲಕ ಸುದ್ದಿ ಆಗುತ್ತಿರುವುದು ಒಂದು ಕಡೆ ಆದರೆ ಅವರ ಅವಘಡದಿಂದ ಸುದ್ದಿ ಆಗುತ್ತಿದ್ದಾರೆ. ಅಲ್ಲದೇ ಜೈಲಿಗೆ ಹೋಗಿ ಈಗ ಅವರ ಮನೆ ಮೇಲೆ ದಾಳಿ ನಡೆದಿರುವ ಕಾರಣ ಅಲ್ಲು ಅರ್ಜುನ್ ಮಾತ್ರ ಟಾಕ್ ಆಫ್ ಟೌನ್ ಆಗಿದ್ದಾರೆ.
ಅಲ್ಲು ಅರ್ಜುನ್ ಸೌತ್ ಇಂಡಸ್ಟ್ರಿಯ ‘ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್’. ಅರ್ಜುನ್ ಅವರ ಮನೆ, ಅವರ ಕುಟುಂಬ ಮತ್ತು ಅವರ ನಿವ್ವಳ ಮೌಲ್ಯದ ವಿಚಾರದಲ್ಲಿ ಸುದ್ದಿ ಆಗುತ್ತಾರೆ. ಆದರೆ ಅಲ್ಲು ಅರ್ಜುನ್ ಅವರ ಬಳಿ ಇರುವ ದುಬಾರಿ ವಸ್ತುಗಳೇನು ಗೊತ್ತಾ? ಇದರ ಬೆಲೆ ನಿಜವಾಗಿಯೂ ನಿಮ್ಮನ್ನು ಅಚ್ಚರಿಗೊಳಿಸುತ್ತದೆ. ಅಲ್ಲು ಅರ್ಜುನ್ ಅವರ ಬಳಿ ಇರುವ ದುಬಾರಿ ವಸ್ತುಗಳು ಯಾವುವು ಎಂದು ತಿಳಿಯೋಣ?
ಸಂಪತ್ತು
ಮಾಧ್ಯಮ ವರದಿಗಳ ಪ್ರಕಾರ 2024ರಲ್ಲಿ ಅಲ್ಲು ಅರ್ಜುನ್ ಅವರ ಸಂಪತ್ತು 460 ಕೋಟಿ ರೂಪಾಯಿ. ಅಲ್ಲು ಅರ್ಜುನ್ ಅವರ ಅನೇಕ ಹಿಟ್ ಚಿತ್ರ ನೀಡಿದ್ದಾರೆ. ಅದೇ ರೀತಿ ‘ಪುಷ್ಪ 1’ ಮತ್ತು ‘ಪುಷ್ಪ 2’ ಅವರ ಅವರ ಗಳಿಕೆ ಹೆಚ್ಚಿಸಿದೆ. ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅಲ್ಲು ಅರ್ಜುನ್ ಅವರ ಸಂಪತ್ತಿನಲ್ಲಿ ಅತ್ಯಂತ ದುಬಾರಿ ವಸ್ತುಗಳೆಂದು ಪರಿಗಣಿಸಲಾದ 5 ವಸ್ತುಗಳು ಇವೆ.
ಇದನ್ನೂ ಓದಿ:Allu Arjun: ಪೊಲೀಸ್ ವಿಚಾರಣೆ ವೇಳೆ ಅಲ್ಲು ಅರ್ಜುನ್ಗೆ ಕೇಳಿದ ಪ್ರಶ್ನೆಗಳಿವು
ಅಲ್ಲು ಅರ್ಜುನ್ ಅವರ ಐಷಾರಾಮಿ ‘ಫಾಲ್ಕನ್ ವ್ಯಾನಿಟಿ ವ್ಯಾನ್’ ಸುಮಾರು 7 ಕೋಟಿ ಮೌಲ್ಯದ್ದಾಗಿದೆ. ಅದರ ನಂತರ ಅಲ್ಲು ಅರ್ಜುನ್ ಬಳಿ ಐಷಾರಾಮಿ ಕಾರು ‘ಜಾಗ್ವಾರ್ ಎಕ್ಸ್‌ಜೆಎಲ್’ ಇದೆ. ಈ ಕಾರಿನ ಬೆಲೆ 1.2 ಕೋಟಿ ರೂಪಾಯಿ.
ಅಲ್ಲು ಅರ್ಜುನ್ ಕೂಡ ಇಂತಹ ಹಲವು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಇದರಲ್ಲಿ 75 ಲಕ್ಷ ಮೌಲ್ಯದ ‘ಹಮ್ಮರ್ ಎಚ್3′ ಕೂಡ ಸೇರಿದೆ. 4 ಕೋಟಿ ಮೌಲ್ಯದ ಜೆಟ್ ಬ್ಲಾಕ್ ರೇಂಜ್ ರೋವರ್ ಕೂಡ ಹೊಂದಿದ್ದಾರೆ. ಅಲ್ಲು ಅರ್ಜುನ್ ಹೊಂದಿರುವ ಅತ್ಯಂತ ದುಬಾರಿ ವಸ್ತುವೆಂದರೆ ಹೈದರಾಬಾದ್‌ನಲ್ಲಿರುವ ಅವರ ಐಷಾರಾಮಿ ಬಂಗಲೆ. ಈ ಬಂಗಲೆಯ ಬೆಲೆ ಸುಮಾರು 100 ಕೋಟಿ ರೂಪಾಯಿ. ಅಲ್ಲು ಅರ್ಜುನ್ ಅವರು ತಮ್ಮ ಶ್ರಮದಿಂದ ಅವುಗಳನ್ನು ಗಳಿಸಿದ್ದಾರೆ. ಹಾಗಾಗಿ ಅವರ ನಟನೆ, ಶ್ರಮ ಮತ್ತು ಸ್ವಭಾವವನ್ನು ಎಲ್ಲರೂ ಯಾವಾಗಲೂ ಮೆಚ್ಚುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ