Cinema Halls: ಮಲ್ಟಿಪ್ಲೆಕ್ಸ್​​ನಲ್ಲಿ ತಿಂಡಿ, ಪಾನೀಯದ ಬೆಲೆ ಇಳಿಕೆ; ಶೇಕಡ 18 ರಿಂದ 5 ಪರ್ಸೆಂಟ್​​ಗೆ ಜಿಎಸ್​ಟಿ ಕಡಿತ

|

Updated on: Jul 12, 2023 | 3:35 PM

Food and Beverage: ಶೇಕಡ 5ಕ್ಕೆ ಜಿಎಸ್​ಟಿ ಇಳಿಕೆ ಆಗಿರುವುದರಿಂದ ಮಲ್ಟಿಪ್ಲೆಕ್ಸ್​ಗಳಲ್ಲಿ ಪಾಪ್​ ಕಾರ್ನ್​, ಕೂಲ್​ ಡಿಂಗ್ಸ್​ ಮುಂತಾದ ಪದಾರ್ಥಗಳ ಬೆಲೆ ತಗ್ಗಲಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೆ ಇದರಿಂದ ಅನುಕೂಲ ಆಗಲಿದೆ.

Cinema Halls: ಮಲ್ಟಿಪ್ಲೆಕ್ಸ್​​ನಲ್ಲಿ ತಿಂಡಿ, ಪಾನೀಯದ ಬೆಲೆ ಇಳಿಕೆ; ಶೇಕಡ 18 ರಿಂದ 5 ಪರ್ಸೆಂಟ್​​ಗೆ ಜಿಎಸ್​ಟಿ ಕಡಿತ
ಮಲ್ಟಿಪ್ಲೆಕ್ಸ್​, ಪಾಪ್​ ಕಾರ್ನ್
Follow us on

ಸಿನಿಮಾ ನೋಡಲು ಜನರು ಥಿಯೇಟರ್​​ಗೆ ಬರುತ್ತಿಲ್ಲ ಎಂಬ ಕೊರಗು ಚಿತ್ರರಂಗದಲ್ಲಿದೆ. ಅದಕ್ಕೆ ಅನೇಕ ಕಾರಣಗಳನ್ನು ಪಟ್ಟಿ ಮಾಡಲಾಗುತ್ತದೆ. ಮಲ್ಟಿಪ್ಲೆಕ್ಸ್​ಗಳಲ್ಲಿ (Multiplex) ಇರುವ ದುಬಾರಿ ಬೆಲೆ ಕೂಡ ಇದಕ್ಕೆ ಒಂದ ಪ್ರಮುಖ ಕಾರಣ. ಆದರೆ ಈಗ ಒಂದು ಗುಡ್​ ನ್ಯೂಸ್​ ಕೇಳಿಬಂದಿದೆ. ಇನ್ಮುಂದೆ ಸಿನಿಮಾ ಹಾಲ್​ಗಳಲ್ಲಿ ತಿಂಡಿ-ತಿನಿಸು ಮತ್ತು ಪಾನೀಯಗಳ (Food and Beverage) ಬೆಲೆ ತಗ್ಗಲಿದೆ. ಈ ಪದಾರ್ಥಗಳ ಮೇಲಿನ ಜಿಎಸ್​ಟಿ (GST) ಕಡಿತ ಮಾಡಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಮಲ್ಟಿಪ್ಲೆಕ್ಸ್​ಗಳಲ್ಲಿನ ವ್ಯಾಪಾರ ವೃದ್ಧಿ ಆಗಲಿದೆ. ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಹೊರೆ ಕಡಿಮೆ ಆಗಲಿದೆ. ಜಿಎಸ್​ಟಿ (ಸರಕು ಮತ್ತು ಸೇವಾ ತೆರಿಗೆ) ಮಂಡಳಿಯ ಐವತ್ತನೇ ಸಭೆಯಲ್ಲಿ ಕೇಂದ್ರ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದೆ. ಅನೇಕ ವಸ್ತುಗಳ ತೆರಿಗೆಯಲ್ಲಿ ಗಣನೀಯ ಇಳಿಕೆ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಜುಲೈ 11ರಂದು ಸಭೆ ನಡೆಯಿತು. ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ.

ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ತಿಂಡಿ ಮತ್ತು ಪಾನೀಯದ ಬೆಲೆ ದುಬಾರಿ ಎಂಬ ದೂರು ಮೊದಲಿನಿಂದಲೂ ಕೇಳಿಬರುತ್ತಲೇ ಇತ್ತು. ಅದಕ್ಕೆ ಶೇಕಡ 18ರಷ್ಟು ಜಿಎಸ್​ಟಿ ಕೂಡ ಸೇರಿದ್ದರಿಂದ ಇನ್ನಷ್ಟು ದುಬಾರಿ ಆಗಿತ್ತು. ಈಗ ಶೇಕಡ 5ಕ್ಕೆ ಜಿಎಸ್​ಟಿ ಇಳಿಕೆ ಆಗಿರುವುದರಿಂದ ಪಾಪ್​ ಕಾರ್ನ್​, ಕೂಲ್​ ಡಿಂಗ್ಸ್​ ಮುಂತಾದ ಪದಾರ್ಥಗಳ ಬೆಲೆ ತಗ್ಗಲಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೆ ಇದರಿಂದ ಅನುಕೂಲ ಆಗಲಿದೆ. ತೆರಿಗೆ ಪ್ರಮಾಣದಲ್ಲಿ ಇಳಿಕೆ ಆಗಿರುವುದನ್ನು ಮಲ್ಟಿಪ್ಲೆಕ್ಸ್​ಗಳು ಸ್ವಾಗತಿಸಿವೆ.

ಇದನ್ನೂ ಓದಿ: ಐಶಾರಾಮಿ ಮಲ್ಟಿಪ್ಲೆಕ್ಸ್​ ನಿರ್ಮಿಸಿದ ಅಲ್ಲು ಅರ್ಜುನ್: ಹೆಸರೇನು? ಎಲ್ಲಿದೆ? ಮೊದಲ ಸಿನಿಮಾ ಯಾವುದು?

ಕೊವಿಡ್​ ಬಂದ ಬಳಿಕ ಲಾಕ್​ಡೌನ್​ನಿಂದ ಮಲ್ಟಿಪ್ಲೆಕ್ಸ್​ಗಳ ಬಿಸ್ನೆಸ್​ ಕುಸಿದಿತ್ತು. ಹಾಗಾಗಿ ಜನರನ್ನು ಸೆಳೆಯಲು ಕೆಲವು ಸಿನಿಮಾಗಳ ಟಿಕೆಟ್​ ಬೆಲೆ ತಗ್ಗಿಸಲಾಗಿತ್ತು. ಆದರೂ ಕೂಡ ಮೊದಲಿನ ರೀತಿಯಲ್ಲಿ ಜನರು ಸಿನಿಮಾ ನೋಡಲು ಬರುತ್ತಿಲ್ಲ ಎಂಬ ಮಾತಿದೆ. ಈಗ ತಿಂಡಿ, ಪಾನೀಯಗಳ ಮೇಲಿನ ಜಿಎಸ್​ಟಿ ಕಡಿಮೆ ಮಾಡಿರುವುದರಿಂದ ಇನ್ಮುಂದೆ ಹೆಚ್ಚಿನ ಜನರು ಮಲ್ಟಿಪ್ಲೆಕ್ಸ್​ಗೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಪಿವಿಆರ್​ ಹೊಸ ಮಲ್ಟಿಪ್ಲೆಕ್ಸ್​ ಆವರಣದಲ್ಲಿ ಕನ್ನಡ ನಟರ ಫೋಟೋ ಇಲ್ಲ; ಸುದೀಪ್​ ಪ್ರತಿಕ್ರಿಯೆ ಏನು?

ಒಂದು ಅಂದಾಜಿನ ಪ್ರಕಾರ ಮಲ್ಟಿಪ್ಲೆಕ್ಸ್​ಗಳ ವ್ಯವಹಾರದ ಶೇಕಡ 35ರಷ್ಟು ಆದಾಯ ಬರುವುದೇ ತಿಂಡಿ ಮತ್ತು ಪಾನೀಯಗಳ ಮಾರಾಟದಿಂದ. ಆದರೆ ದುಬಾರಿ ಬೆಲೆ ಎಂಬ ಕಾರಣಕ್ಕೆ ಬಹುತೇಕ ಪ್ರೇಕ್ಷಕರು ಹಿಂದೇಟು ಹಾಕುತ್ತಿದ್ದರು. ಈಗ ತೆರಿಗೆ ಕಡಿತ ಆಗಿರುವುದರಿಂದ ಮಲ್ಟಿಪ್ಲೆಕ್ಸ್​ನಲ್ಲಿ ಬಿಸ್ನೆಸ್​ ಹೆಚ್ಚುವ ಸೂಚನೆ ಸಿಕ್ಕಿದೆ. 2023ರ ದ್ವಿತೀಯಾರ್ಥದಲ್ಲಿ ಅನೇಕ ದೊಡ್ಡ ಬಜೆಟ್​ ಸಿನಿಮಾಗಳು ಬಿಡುಗಡೆ ಆಗುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.