
ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಇಂದು ಸಿನಿಮಾರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಆದರೆ, ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಿಗುತ್ತಿದ್ದ ಹಣಕ್ಕೂ ಮತ್ತು ಇಂದು ಅವರು ಪಡೆಯುವ ಮೊತ್ತಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇತ್ತೀಚೆಗೆ ಸಂದರ್ಶನದಲ್ಲಿ ನಯನತಾರಾ ತಮ್ಮ ಮೊದಲ ಕೆಲಸ ಮತ್ತು ಅದಕ್ಕೆ ಸಿಕ್ಕ ಸಂಭಾವನೆಯನ್ನು ನೆನಪಿಸಿಕೊಂಡಿದ್ದಾರೆ.
ತಮ್ಮ ಮೊದಲ ಸಂಪಾದನೆಯ ಕುರಿತು ಮಾತನಾಡಿದ ನಯನತಾರಾ, ‘ನನ್ನ ಮೊದಲ ಕೆಲಸ ‘ವನಿತಾ’ ಮ್ಯಾಗಜಿನ್‌ನ ಕವರ್ ಶೂಟ್ ಹಾಗೂ ಫ್ಯಾಷನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಅದಕ್ಕೆ ನನಗೆ ಸಿಕ್ಕಿದ್ದು ಕೇವಲ 2,000 ರಿಂದ 3,000 ರೂಪಾಯಿ ಸಂಭಾವನೆ’ ಎಂದು ಹಳೆಯ ದಿನಗಳನ್ನು ಹಂಚಿಕೊಂಡಿದ್ದಾರೆ.
ನಯನತಾರಾ ಎಂದಿಗೂ ಚಿತ್ರರಂಗಕ್ಕೆ ಬರಬೇಕೆಂದು ಯೋಜನೆ ರೂಪಿಸಿದವರಲ್ಲ. ‘ವನಿತಾ’ ಮ್ಯಾಗಜಿನ್‌ನಲ್ಲಿ ಅವರ ಫೋಟೋ ನೋಡಿದ ನಿರ್ದೇಶಕ ಸತ್ಯನ್ ಅಂತಿಕ್ಕಾಡ್, 2003ರಲ್ಲಿ ಮೂಡಿಬಂದ ‘ಮನಸ್ಸಿನಕ್ಕರೆ’ ಮಲಯಾಳಂ ಸಿನಿಮಾ ಮೂಲಕ ಅವರಿಗೆ ನಟನೆಯ ಅವಕಾಶ ನೀಡಿದರು.
ಮೊದಲ ಫೋಟೋ ಶೂಟ್‌ಗೆ ಕೇವಲ ಕೆಲವೇ ಸಾವಿರ ರೂಪಾಯಿ ಪಡೆದಿದ್ದ ನಯನತಾರಾ, ಇಂದು ದಕ್ಷಿಣ ಭಾರತದ ಅತ್ಯಂತ ದುಬಾರಿ ನಟಿ. ವರದಿಗಳ ಪ್ರಕಾರ, ‘ಟಾಕ್ಸಿಕ್’ ಸಿನಿಮಾಗೆ 12 ಕೋಟಿಯಿಂದ 18 ಕೋಟಿ ರೂಪಾಯಿವರೆಗೆ ಸಂಭಾವನೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ‘ಟಾಕ್ಸಿಕ್’ ಕಥೆ ಕೇಳಿ ಮೊದಲು ‘ನೋ’ ಎಂದಿದ್ದ ನಯನತಾರಾ; ಬಳಿಕ ಒಪ್ಪಿದ್ದು ಯಾಕೆ?
ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಇಂದು (ಆಗಸ್ಟ್ 26) ವಿಶ್ವದಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರೊಂದಿಗೆ ಆಗಸ್ಟ್ 28ಕ್ಕೆ ಅವರ ನಟನೆಯ ‘ಹಾಯ್’ ಎಂಬ ತಮಿಳು ರೊಮ್ಯಾಂಟಿಕ್ ಡ್ರಾಮಾ ಸಿನಿಮಾ ಕೂಡ ತೆರೆಗೆ ಬರಲು ಸಜ್ಜಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.