ಅಂಬಾನಿ ನೀಡಿದ 2.2 ಕೋಟಿ ರೂಪಾಯಿ ಬೆಲೆಯ ಬ್ರೇಸ್​ಲೆಟ್ ಧರಿಸಿ ಮಿಂಚಿದ ರಿಯಾನಾ

ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳ ಜೊತೆ ಅಂಬಾನಿ ಕುಟುಂಬಕ್ಕೆ ಒಡನಾಟ ಇದೆ. ಖ್ಯಾತ ಸಿಂಗರ್ ರಿಯಾನಾ ಅವರಿಗೆ ಅಂಬಾನಿ ಫ್ಯಾಮಿಲಿ ನೀಡಿದ ಗಿಫ್ಟ್ ಬಗ್ಗೆ ಈಗ ಚರ್ಚೆ ಆಗುತ್ತಿದೆ. ಈ ಮೊದಲು ರಿಯಾನಾ ಅವರು ಅತಿಥಿಯಾಗಿ ಬಂದಾಗ ಅವರಿಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಬ್ರೇಸ್​ಲೆಟ್ ನೀಡಲಾಗಿತ್ತು.

ಅಂಬಾನಿ ನೀಡಿದ 2.2 ಕೋಟಿ ರೂಪಾಯಿ ಬೆಲೆಯ ಬ್ರೇಸ್​ಲೆಟ್ ಧರಿಸಿ ಮಿಂಚಿದ ರಿಯಾನಾ
Rihanna
Image Credit source: Instagram/thepeoplegallery_

Updated on: Jun 16, 2026 | 9:51 PM

ಜಾಗತಿಕ ಮ್ಯೂಸಿಕ್ ಐಕಾನ್ ರಿಯಾನಾ ಮತ್ತು ಭಾರತದ ಶ್ರೀಮಂತ ಉದ್ಯಮಿ ಅಂಬಾನಿ (Mukesh Ambani) ಕುಟುಂಬದ ನಡುವಿನ ಸ್ನೇಹ ಈಗ ಮತ್ತೆ ಸುದ್ದಿಯಲ್ಲಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಮುಂಬೈನ ಅಂಬಾನಿ ನಿವಾಸಕ್ಕೆ ಭೇಟಿ ನೀಡಿದ್ದ ರಿಯಾನಾ ಅವರಿಗೆ, ಅಂಬಾನಿ ಕುಟುಂಬದವರು ಅತ್ಯಂತ ಬೆಲೆಬಾಳುವ ವಜ್ರದ ಬ್ರೇಸ್ಲೆಟ್ ಉಡುಗೊರೆಯಾಗಿ ನೀಡಿದ್ದರು. ಆ ಬಗ್ಗೆ ಈಗ ರಿಯಾನಾ (Rihanna) ಅವರು ಮಾತನಾಡಿದ್ದಾರೆ. ವಜ್ರದ ಬ್ರೇಸ್ಲೆಟ್ ಬೆಲೆ ಎಷ್ಟು ಎಂಬುದು ತಿಳಿದು ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಅದರ ಬೆಲೆ ಬರೋಬ್ಬರಿ 2.2 ಕೋಟಿ ರೂಪಾಯಿ!

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ರಿಯಾನಾ ಈ ಸುಂದರವಾದ ಬ್ರೇಸ್ಲೆಟ್ ಅನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ. ‘ದಿ ಪೀಪಲ್ ಗ್ಯಾಲರಿ’ ಎಂಬ ಇನ್‌ಸ್ಟಾಗ್ರಾಮ್ ಪೇಜ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ರಿಯಾನಾ ಅವರು ತಮ್ಮ ಅಂದಿನ ಫ್ಯಾಷನ್ ಮತ್ತು ಉಡುಪಿನ ಬಗ್ಗೆ ವಿವರಿಸುತ್ತಿದ್ದರು. ಡಬಲ್-ಡೆನಿಮ್ ಔಟ್‌ಫಿಟ್ ಧರಿಸಿದ್ದ ಅವರು, ತಮ್ಮ ಕೈಯಲ್ಲಿದ್ದ ವಜ್ರದ ಬ್ರೇಸ್ಲೆಟ್ ಅನ್ನು ಕ್ಯಾಮೆರಾ ಹತ್ತಿರ ತಂದು, ‘ಇದು ಭಾರತದ ಅಂಬಾನಿ ಕುಟುಂಬದವರು ನೀಡಿದ್ದು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಸೆಲೆಬ್ರಿಟಿ ಜ್ಯುವೆಲ್ಲರಿ ಎಕ್ಸ್‌ಪರ್ಟ್ ಪ್ರಿಯಾಂಶು ಗೋಯಲ್ ಅವರ ಪ್ರಕಾರ, ಈ ವಜ್ರದ ಟೆನ್ನಿಸ್ ಬ್ರೇಸ್ಲೆಟ್​ನ ಅಂದಾಜು ಮೊತ್ತ ಸುಮಾರು 2.2 ಕೋಟಿ ರೂಪಾಯಿಗಳು. ಇದು ಅತ್ಯಂತ ಸರಳ, ಸುಂದರ ಮತ್ತು ಕಾಲಾತೀತ ವಿನ್ಯಾಸವನ್ನು ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಿಯಾನಾ ಮತ್ತು ಅಂಬಾನಿ ಕುಟುಂಬದ ನಡುವಿನ ಒಡನಾಟಕ್ಕೆ ಈ ಉಡುಗೊರೆಯೇ ಸಾಕ್ಷಿಯಾಗಿದೆ.

ರಿಯಾನಾ ವೈರಲ್ ವಿಡಿಯೋ:

ಈ ವಿಡಿಯೋದಲ್ಲಿ ರಿಯಾನಾ ಮತ್ತೊಂದು ಆಸಕ್ತಿದಾಯಕ ವಿಷಯವನ್ನು ಹಂಚಿಕೊಂಡಿದ್ದಾರೆ. ತಾವು ಧರಿಸಿರುವ ಮೇಕಪ್ ಮತ್ತು ಕೇಶವಿನ್ಯಾಸವನ್ನು ಯಾವುದೇ ಗ್ಲಾಮ್ ಟೀಮ್ ಸಹಾಯವಿಲ್ಲದೆ ತಾವೇ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ಅವರು ತಮ್ಮದೇ ಸ್ವಂತ ಬ್ರ್ಯಾಂಡ್ ಆದ ‘ಫೆಂಟಿ ಬ್ಯೂಟಿ’ ಉತ್ಪನ್ನಗಳನ್ನು ಬಳಸಿದ್ದಾರೆ.

ಇದನ್ನೂ ಓದಿ: 6ನೇ ವರ್ಷವೂ ಸಂಬಳ ಬೇಡ ಎಂದ ಮುಕೇಶ್ ಅಂಬಾನಿ; ಏಷ್ಯಾದ ಅತಿ ಶ್ರೀಮಂತ ಉದ್ಯಮಿಗೆ ಆದಾಯ ಎಲ್ಲಿಂದ?

ರಿಯಾನಾ ಅವರು ಏಪ್ರಿಲ್ ತಿಂಗಳಲ್ಲಿ ತಮ್ಮ ಬ್ಯೂಟಿ ಬ್ರ್ಯಾಂಡ್ ಕೆಲಸದ ನಿಮಿತ್ತ ಮುಂಬೈಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ಅಂಬಾನಿ ನಿವಾಸದಲ್ಲಿ ಆರತಿ ಬೆಳಗಿ, ಭಾರತೀಯ ಸಂಪ್ರದಾಯದಂತೆ ಸಂಭ್ರಮಿಸಿದ್ದರು. 2024ರಲ್ಲಿ ಜಾಮ್‌ನಗರದಲ್ಲಿ ನಡೆದ ಅಂಬಾನಿ ಕುಟುಂಬದ ಕಾರ್ಯಕ್ರಮದಲ್ಲಿ ರಿಯಾನಾ ಅವರ ಪ್ರದರ್ಶನ ಇಡೀ ವಿಶ್ವದ ಗಮನ ಸೆಳೆದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us