AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna: ಸೋಲಿನ ಚಿಂತೆ ಬಿಟ್ಟು ಮಾಲ್ಡೀವ್ಸ್​ಗೆ ತೆರಳಿ ಎಂಜಾಯ್​ ಮಾಡ್ತಿರುವ ವಾಟರ್ ಬೇಬಿ ರಶ್ಮಿಕಾ ಮಂದಣ್ಣ

Rashmika Mandanna Viral Photo: ಮಾಲ್ಡೀವ್ಸ್​ನಿಂದ ಹಲವು ಫೋಟೋಗಳನ್ನು ರಶ್ಮಿಕಾ ಮಂದಣ್ಣ ಶೇರ್​ ಮಾಡುತ್ತಿದ್ದಾರೆ. ಅವು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

Rashmika Mandanna: ಸೋಲಿನ ಚಿಂತೆ ಬಿಟ್ಟು ಮಾಲ್ಡೀವ್ಸ್​ಗೆ ತೆರಳಿ ಎಂಜಾಯ್​ ಮಾಡ್ತಿರುವ ವಾಟರ್ ಬೇಬಿ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ
TV9 Web
| Edited By: |

Updated on:Oct 10, 2022 | 1:39 PM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ಪ್ರವಾಸದ ಮಜಾ ಸವಿಯುತ್ತಿದ್ದಾರೆ. ಸಿನಿಮಾ ಕೆಲಸಗಳಿಗೆ ಕೊಂಚ ಬ್ರೇಕ್​ ನೀಡಿರುವ ಅವರು ಈಗ ಮಾಲ್ಡೀವ್ಸ್​ಗೆ (Maldives) ತೆರಳಿದ್ದಾರೆ. ಅಲ್ಲಿನ ಕಡಲ ತೀರದಲ್ಲಿ ಈಜಾಡುತ್ತಾ ಕಾಲ ಕಳೆಯುತ್ತಿದ್ದಾರೆ. ತಮ್ಮ ಪ್ರವಾಸದ ಬಗ್ಗೆ ಇನ್​ಸ್ಟಾಗ್ರಾಮ್​ ಮೂಲಕ ಅಪ್​ಡೇಟ್​ ನೀಡುತ್ತಿದ್ದಾರೆ. ನೀರಿನಲ್ಲಿ ಎಂಜಾಯ್​ ಮಾಡುತ್ತಿರುವ ತಮ್ಮನ್ನು ತಾವು ‘ವಾಟರ್​ ಬೇಬಿ’ ಎಂದು ಅವರು ಕರೆದುಕೊಂಡಿದ್ದಾರೆ. ಅವರು ನಟಿಸಿದ ‘ಗುಡ್​ಬೈ’ (Goodbye) ಸಿನಿಮಾ ಇತ್ತೀಚೆಗೆ ರಿಲೀಸ್​ ಆಗಿ ಸೋತಿದೆ. ಸೋಲಿನ ಚಿಂತೆ ಬಿಟ್ಟು ಅವರು ಮಾಲ್ಡೀವ್ಸ್​ನಲ್ಲಿ ರಿಲ್ಯಾಕ್ಸ್​ ಮಾಡುತ್ತಿದ್ದಾರೆ.

ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ರಶ್ಮಿಕಾ ಮಂದಣ್ಣ ಅವರಿಗೆ ಬೇಡಿಕೆ ಇದೆ. ಅವರು ನಟಿಸಿದ ‘ಗುಡ್​ಬೈ’ ಸಿನಿಮಾ ಬಗ್ಗೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಯಾಕೆಂದರೆ, ಹಿಂದಿಯಲ್ಲಿ ರಿಲೀಸ್​ ಆದ ರಶ್ಮಿಕಾ ಮಂದಣ್ಣ ಅವರ ಮೊದಲ ಚಿತ್ರವಿದು. ಈ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​, ನೀನಾ ಗುಪ್ತಾ ಮುಂತಾದ ಹಿರಿಯರ ಜೊತೆ ನಟಿಸುವ ಅವಕಾಶವನ್ನು ರಶ್ಮಿಕಾ ಪಡೆದುಕೊಂಡರು. ಟ್ರೇಲರ್​ ಕೂಡ ಮೆಚ್ಚುಗೆ ಗಳಿಸಿತ್ತು. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಸೂಪರ್​ ಹಿಟ್​ ಆಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ.

ಇದನ್ನೂ ಓದಿ
Image
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Image
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Image
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Image
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

ಮೊದಲ ದಿನ (ಅ.7) ‘ಗುಡ್​ಬೈ’ ಸಿನಿಮಾ ಗಳಿಸಿದ್ದು ಕೇವಲ 90 ಲಕ್ಷ ರೂಪಾಯಿ ಮಾತ್ರ. ಎರಡನೇ ದಿನ 1.35 ಕೋಟಿ ರೂಪಾಯಿ. ನಂತರದ ದಿನಗಳಲ್ಲಿ ಪರಿಸ್ಥಿತಿ ಏನೂ ಸುಧಾರಿಸಲಿಲ್ಲ. ಈ ಚಿತ್ರದಿಂದ ನಿರ್ಮಾಪಕರು ಕೈ ಸುಟ್ಟುಕೊಳ್ಳುವಂತಾಗಿದೆ. ಈ ಚಿಂತೆಯನ್ನು ಬದಿಗಿಟ್ಟು ರಶ್ಮಿಕಾ ಮಂದಣ್ಣ ಅವರು ಪ್ರವಾಸದಲ್ಲಿ ಖುಷಿಯಾಗಿದ್ದಾರೆ.

ಮಾಲ್ಡೀವ್ಸ್​ನಿಂದ ಹಲವು ಫೋಟೋಗಳನ್ನು ರಶ್ಮಿಕಾ ಶೇರ್​ ಮಾಡುತ್ತಿದ್ದಾರೆ. ಸಮುದ್ರದ ಆಳಕ್ಕೆ ಇಳಿದು ಮೀನಿನಂತೆ ಈಜಾಡಿದ್ದಾರೆ. ಅದರ ವಿಡಿಯೋವನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಅವರು ಹಂಚಿಕೊಂಡಿದ್ದಾರೆ. ರಶ್ಮಿಕಾ ಜೊತೆ ವಿಜಯ್​ ದೇವರಕೊಂಡ ಕೂಡ ಮಾಲ್ಡೀವ್ಸ್​ಗೆ ತೆರಳಿದ್ದಾರೆ ಎಂಬ ಅನುಮಾನ ಇದೆ. ಅವರಿಬ್ಬರು ಜೊತೆಯಾಗಿ ಯಾವುದೇ ಫೋಟೋ ಹಂಚಿಕೊಂಡಿಲ್ಲ. ಆದರೆ ಒಂದು ಫೋಟೋದಲ್ಲಿ ರಶ್ಮಿಕಾ ಧರಿಸಿರುವ ಕೂಲಿಂಗ್​ ಗ್ಲಾಸ್​ ವಿಜಯ್​ ದೇವರಕೊಂಡ ಅವರದ್ದು ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

ಅಕ್ಟೋಬರ್ 7ರಂದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಕೆಲವೇ ನಿಮಿಷಗಳ ಅಂತರದಲ್ಲಿ ಮುಂಬೈ ವಿಮಾನ ನಿಲ್ದಾಣ ಪ್ರವೇಶ ಮಾಡಿದ್ದರು. ಇದು ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಅವರಿಬ್ಬರು ಒಟ್ಟಿಗೆ ಪ್ರಯಾಣ ಮಾಡಿರಬಹುದು ಎಂಬ ಅನುಮಾನಕ್ಕೆ ಈ ಘಟನೆ ಕೂಡ ಪುಷ್ಠಿ ನೀಡುವಂತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:39 pm, Mon, 10 October 22

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್