Haripriya Vasishta Simha: ಸಿಂಹದ ಕೈಯಲ್ಲಿ ಮಗು: ‘ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು’ ಎಂದ ಹರಿಪ್ರಿಯಾ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 02, 2022 | 9:58 PM

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಸಿಂಪಲ್​ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಗೇಜ್​ಮೆಂಟ್ ಆದ ಬೆನ್ನೆಲ್ಲೆ ನಟಿ ಹರಿಪ್ರಿಯಾ ಟ್ವೀಟ್​ ಮಾಡಿದ್ದು, ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

Haripriya Vasishta Simha: ಸಿಂಹದ ಕೈಯಲ್ಲಿ ಮಗು: ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಎಂದ ಹರಿಪ್ರಿಯಾ
ಹರಿಪ್ರಿಯಾ
Follow us on

ಕನ್ನಡದ ಬಹು ಬೇಡಿಕೆ ನಟಿಯರಲ್ಲಿ ಒಬ್ಬರಾದ ಅದಿತಿ ಪ್ರಭುದೇವ ಅವರು ಇತ್ತೀಚೆಗೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ಅದ್ದೂರಿಯಾಗಿ ಮದುವೆ ಮಾಡಿಕೊಂಡರು. ಬಳಿಕ ರೆಬಲ್​ ಸ್ಟಾರ್​ ಅಂಬರೀಷ್​​ ಅವರ ಪುತ್ರ ಯಂಗ್ ರೆಬಲ್​ ಸ್ಟಾರ್​ ಅಭಿಷೇಕ್​ ಅವರು ಮಾಡೆಲ್ ಅವಿವಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲ್ಲಿದ್ದಾರೆ ಎಂದೆಲ್ಲಾ ವಂದತಿ ಹಬ್ಬಿಸಲಾಗಿತ್ತು. ಇವೆಲ್ಲದರ ಮಧ್ಯೆ ನಟಿ ಹರಿಪ್ರಿಯಾ (Haripriya) ಅವರು ಮೂಗು ಚುಚ್ಚಿಸಿಕೊಂಡು ಸುದ್ದಿಯಾಗಿದ್ದರು. ಈ ಕುರಿತಾಗಿ ನಟಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು. ವಿಡಿಯೋ ನೋಡಿದ ಅಭಿಮಾನಿಗಳು ನಟ ವಸಿಷ್ಠ ಸಿಂಹ ಇರುವುದನ್ನು ಪತ್ತೆ ಹಚ್ಚಿದ್ದರು. ಬಳಿಕ ಇವರಿಬ್ಬರು ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಸದ್ಯ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಸಿಂಪಲ್​ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಗೇಜ್​ಮೆಂಟ್ ಆದ ಬೆನ್ನೆಲ್ಲೆ ನಟಿ ಹರಿಪ್ರಿಯಾ ಟ್ವೀಟ್​ ಒಂದನ್ನು ಮಾಡಿದ್ದಾರೆ.

ಹರಿಪ್ರಿಯಾ ಅವರ ನಿವಾಸದಲ್ಲಿ ಸಿಂಪಲ್​ ಆಗಿ ನಿಶ್ಚಿತಾರ್ಥ ಕಾರ್ಯ ನಡೆದಿದೆ. ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಉಂಗುರ ಬದಲಾಯಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ಈ ವಿಚಾರಗಳಿಗೆ ಪುಷ್ಠಿ ನೀಡುವಂತೆ ನಟಿ ಹರಿಪ್ರಿಯಾ ಟ್ವೀಟ್​ ಮಾಡಿದ್ದು, ಸಿಂಹದ ಮಡಿಲಲ್ಲಿ ಮಲಗಿದ ಮಗುವಿನ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ‘ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು’ ಎಂದು ಬರೆದುಕೊಂಡಿದ್ದಾರೆ. ಹೀಗೆ ಪೋಸ್ಟ್‌ ಹಾಕುತ್ತಿದ್ದಂತೆ ಈ ಜೋಡಿಯ ಇಬ್ಬರ ಫ್ಯಾನ್ಸ್​ ವಿಶ್​ ಮಾಡಿದ್ದಾರೆ.

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಜೋಡಿಯ ಪ್ರೇಮ್​ ಕಹಾನಿ ಸದ್ಯ ಗಾಂಧಿನಗರದಲ್ಲಿ ಹಾಟ್​ ನ್ಯೂಸ್​ ಆಗಿದೆ. ಕಳೆದ ಕೆಲ  ದಿನಗಳಿಂದ ಇವರಿಬ್ಬರದೆ ಸುದ್ದಿ ಹರಿದಾಡುತ್ತಿದ್ದರು ಈ ಜೋಡಿ ಮಾತ್ರ ಬಾಯಿಬಿಟ್ಟಿಲ್ಲ. ಹೊಸದೊಂದು ಸಿನಿಮಾದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿತು ಎಂಬ ಮಾತು ಗಾಂಧಿನಗರದಲ್ಲಿ ಹಬ್ಬಿದೆ. ಎಂಗೇಜ್​ಮೆಂಟ್​ ಸಲುವಾಗಿಯೇ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇತ್ತೀಚಿಗೆ ಶಾಪಿಂಗ್​ ಮಾಡಿದ್ದರು ಎಂಬ ಮಾಹಿತಿ ಕೇಳಿಬಂದಿತ್ತು. ಈಗ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಈ ಜೋಡಿಗೆ ಅಭಿನಂದನೆ ತಿಳಿಸಲು ಆರಂಭಿಸಿದ್ದಾರೆ.

ಇದನ್ನೂ ಓದಿ: Haripriya Vasishta Simha Engagement: ಹರಿಪ್ರಿಯಾ-ವಸಿಷ್ಠ ಸಿಂಹ ನಿಶ್ಚಿತಾರ್ಥ; ಕೇವಲ ಆಪ್ತರ ಸಮ್ಮುಖದಲ್ಲಿ ನಡೆಯಿತು ಶುಭಕಾರ್ಯ

2007ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹರಿಪ್ರಿಯಾ ಅವರು ಇಂದಿಗೂ ಚಾರ್ಮ್​ ಉಳಿಸಿಕೊಂಡಿದ್ದಾರೆ. ರಿಷಬ್​ ಶೆಟ್ಟಿ, ರಕ್ಷಿತ್​ ಶೆಟ್ಟಿ, ಶ್ರೀಮುರಳಿ ಮುಂತಾದ ಸ್ಟಾರ್​ ಹೀರೋಗಳ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ನಾಯಕಿ ಪ್ರಧಾನ ಸಿನಿಮಾಗಳನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಹಲವು ಚಿತ್ರಗಳು ಅವರ ಕೈಯಲ್ಲಿವೆ. ವಸಿಷ್ಠ ಸಿಂಹ ಕೂಡ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ವಿಲನ್​ ಪಾತ್ರಗಳ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:57 pm, Fri, 2 December 22