ಮೂರನೇ ಪತ್ನಿಗೆ ವಿಚ್ಛೇದನ ಕೊಡದೆ ನಾಲ್ಕನೇ ಮದುವೆ ಆದ ನರೇಶ್​; ಕಾನೂನು ತೊಡಕುಗಳೇನು?

|

Updated on: Mar 10, 2023 | 1:27 PM

Naresh Pavitra Lokesh Marriage: ನರೇಶ್ ಅವರು ಈ ಮೊದಲು ಮೂರು ಮದುವೆ ಆಗಿದ್ದರು. ಮೂರನೇ ಪತ್ನಿ ರಮ್ಯಾ ರಘುಪತಿ ಜೊತೆ ಅವರು ಇನ್ನೂ ವಿಚ್ಛೇದನ ಪಡೆದಿಲ್ಲ ಎನ್ನಲಾಗಿದೆ. ಹೀಗಿರುವಾಗಲೇ ಅವರು ನಾಲ್ಕನೇ ಮದುವೆ ಆಗಿದ್ದಾರೆ.

ಮೂರನೇ ಪತ್ನಿಗೆ ವಿಚ್ಛೇದನ ಕೊಡದೆ ನಾಲ್ಕನೇ ಮದುವೆ ಆದ ನರೇಶ್​; ಕಾನೂನು ತೊಡಕುಗಳೇನು?
ರಮ್ಯಾ,ನರೇಶ್​,ಪವಿತ್ರಾ
Follow us on

ತೆಲುಗು ನಟ ನರೇಶ್ (Naresh) ಹಾಗೂ ನಟಿ ಪವಿತ್ರಾ ಲೋಕೇಶ್ ಅಭಿಮಾನಿಗಳಿಗೆ ಸರ್​ಪ್ರೈಸ್ ನೀಡಿದ್ದಾರೆ. ವಿವಾಹ ಆದ ವಿಡಿಯೋ ಹಂಚಿಕೊಳ್ಳುವ ಮೂಲಕ ಅಚ್ಚರಿಮೂಡಿಸಿದ್ದಾರೆ. ಇವರ ಮದುವೆ ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗಿದೆ. ದಂಪತಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ನರೇಶ್ ಹಾಗೂ ಪವಿತ್ರಾ (Pavitra Lokesh) ಹೈದರಾಬಾದ್​ನಲ್ಲಿ ಮದುವೆ ಆಗಿದ್ದಾರೆ ಎನ್ನಲಾಗಿದೆ. ನರೇಶ್​ಗೆ ಈ ಮದುವೆಯಿಂದ ಕಾನೂನಿನ ತೊಡಕು ಬರುವ ಸಾಧ್ಯತೆಯೂ ದಟ್ಟವಾಗಿದೆ. ಆ ಬಗ್ಗೆ ಕಾನೂನು ಏನು ಹೇಳುತ್ತದೆ ಎಂಬುದಕ್ಕೆ ಇಲ್ಲಿದೆ ಉತ್ತರ.

ನಾಲ್ಕನೇ ಮದುವೆ ಬಗ್ಗೆ ತಿಳಿಸಿದ ನಟ

ನರೇಶ್ ಅವರು ಈ ಮೊದಲು ಮೂರು ಮದುವೆ ಆಗಿದ್ದರು. ಮೂರನೇ ಪತ್ನಿ ರಮ್ಯಾ ರಘುಪತಿ ಜೊತೆ ಅವರು ಇನ್ನೂ ವಿಚ್ಛೇದನ ಪಡೆದಿಲ್ಲ ಎನ್ನಲಾಗಿದೆ. ಹೀಗಿರುವಾಗಲೇ ಅವರು ನಾಲ್ಕನೇ ಮದುವೆ ಆಗಿದ್ದಾರೆ. ಟ್ವಿಟರ್​ನಲ್ಲಿ ಮದುವೆಯ ವಿಡಿಯೋ ಪೋಸ್ಟ್ ಮಾಡಿರುವ ಅವರು, ‘ಹೊಸ ಪಯಣ. ಶಾಂತಿ ಮತ್ತು ನೆಮ್ಮದಿಯ ಜೀವನಕ್ಕೆ ನಿಮ್ಮ ಆಶೀರ್ವಾದ ಇರಲಿ. ಒಂದು ಪವಿತ್ರ ಬಂಧ. ಎರಡು ಮನಸ್ಸುಗಳು, ಏಳು ಹೆಜ್ಜೆಗಳು, ನಿಮ್ಮ ಆಶೀರ್ವಾದವನ್ನು ಕೋರಿ. ನಿಮ್ಮ ಪವಿತ್ರಾ ನರೇಶ್​’ ಎಂದು ನರೇಶ್​ ವಿಡಿಯೋಗೆ ಕ್ಯಾಪ್ಶನ್ ನೀಡಿದ್ದಾರೆ.

ಇದನ್ನೂ ಓದಿ
ನಾಲ್ಕನೇ ಮದುವೆ ಆದ ನರೇಶ್; ನಟಿ ಪವಿತ್ರಾ ಲೋಕೇಶ್ ಜೊತೆ ಸಪ್ತಪದಿ ತುಳಿದ ಹೀರೋ
‘NBK108’ ಸೆಟ್​ನಲ್ಲಿ ಕನ್ನಡತಿ ಶ್ರೀಲೀಲಾ; ಕಣ್​ ಹೊಡೆದು ಬಾಲಯ್ಯನ ಚಿತ್ರಕ್ಕೆ ಎಂಟ್ರಿ
Ramya Raghupathi: ‘ನಾನು ವಿಚ್ಛೇದನ ಕೊಡಲ್ಲ’; ನರೇಶ್​ಗೆ ನೇರವಾಗಿ ಹೇಳಿದ ಪತ್ನಿ ರಮ್ಯಾ ರಘುಪತಿ
ಮದುವೆ ಅಲ್ಲ, ಸಿನಿಮಾ ಪ್ರಮೋಷನ್ ಗಿಮಿಕ್​? ಪವಿತ್ರಾ​-ನರೇಶ್ ಕಿಸ್ಸಿಂಗ್ ವಿಡಿಯೋ ಬಗ್ಗೆ ಅನುಮಾನ

ವಿಚ್ಛೇದನ ಕೊಡಲ್ಲ ಎಂದಿದ್ದ ರಮ್ಯಾ ರಘುಪತಿ

ರಮ್ಯಾ ರಘುಪತಿ ಹಾಗೂ ನರೇಶ್ ಪ್ರೀತಿಸಿ ಮದುವೆ ಆದವರು. ಈ ದಂಪತಿಗೆ ಓರ್ವ ಮಗನಿದ್ದಾನೆ. ಮಗನಿಗೆ ತಂದೆ-ತಾಯಿ ಬೇರೆ ಆಗೋದು ಇಷ್ಟವಿಲ್ಲ. ಈ ವಿಚಾರವಾಗಿ ರಮ್ಯಾ ರಘುಪತಿ ಕೆಲ ತಿಂಗಳ ಹಿಂದೆ ಮಾತನಾಡಿದ್ದರು. ‘ಮಗನಿಗೋಸ್ಕರ ನಾನು ಎಲ್ಲವನ್ನೂ ಸಹಿಸಿಕೊಂಡಿದ್ದೀನಿ. ಪತಿ ಜೊತೆ ಇರ್ತೀನಿ. ನಾನು ಏನೇ ಮಾಡಿದರೂ ಅವರಿಗೆ ವಿಚ್ಛೇದನ ಕೊಡಲ್ಲ’ ಎಂದು ಹೇಳಿದ್ದರು.

ಕಾನೂನಿನ ತೊಡಕು:

ಮದುವೆ ಆಗಿ, ಅದನ್ನು ನೋಂದಣಿ ಮಾಡಿಸಿದ ನಂತರ ಹೆಣ್ಣು/ಗಂಡು ಬೇರೆ ಮದುವೆ ಆಗಬೇಕು ಎಂದರೆ ವಿಚ್ಛೇದನ ನೀಡಲೇಬೇಕು. ಕಾನೂನಾತ್ಮಕವಾಗಿ ಬೇರೆ ಆದ ಬಳಿಕವೇ ಗಂಡು/ಹೆಣ್ಣು ಬೇರೆ ಮದುವೆ ಆಗಬಹುದು. ವಿಚ್ಛೇದನ ಪಡೆಯದೇ ಬೇರೆ ಮದುವೆ ಆದರೆ, ಅದನ್ನು ಮದುವೆ ಎಂದು ಪರಿಗಣಿಸಲು ಕಾನೂನಿಂದ ಸಾಧ್ಯವಿಲ್ಲ. ನರೇಶ್ ಅವರು ಮೂರನೇ ಪತ್ನಿಯಿಂದ ವಿಚ್ಛೇದನ ಪಡೆದಿಲ್ಲ ಎನ್ನಲಾಗಿದೆ. ಹೀಗಿರುವಾಗಲೇ ನಾಲ್ಕನೇ ಮದುವೆ ಆಗಿದ್ದರಿಂದ ಇದನ್ನು ವಿವಾಹ ಎಂದು ಕಾನೂನಿನಲ್ಲಿ ಪರಿಗಣಿಸಲು ಸಾಧ್ಯವಿಲ್ಲ. ಪವಿತ್ರಾ ಲೋಕೇಶ್ ಜೊತೆಗಿನ ಮದುವೆ ವಿಚಾರದಲ್ಲಿ ರಮ್ಯಾ ಅವರು ನರೇಶ್ ವಿರುದ್ಧ ಕೇಸ್ ದಾಖಲಿಸಬಹುದು. ಈ ಸಂಬಂಧ ಬೇರೆ ಯಾರೂ ಕೇಸ್ ದಾಖಲು ಮಾಡಲು ಬರುವುದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ