AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramya Raghupathi: ‘ನಾನು ವಿಚ್ಛೇದನ ಕೊಡಲ್ಲ’; ನರೇಶ್​ಗೆ ನೇರವಾಗಿ ಹೇಳಿದ ಪತ್ನಿ ರಮ್ಯಾ ರಘುಪತಿ

ಸಂದರ್ಶನದಲ್ಲಿ ರಮ್ಯಾ ರಘುಪತಿ ಸುಮಾರು ಮೂರು ಗಂಟೆ ಮಾತನಾಡಿದ್ದಾರೆ. ಸಂದರ್ಶನದುದ್ದಕ್ಕೂ ನರೇಶ್ ಅವರಿಂದ ಆದ ಮೋಸದ ಬಗ್ಗೆ ಹೇಳಿದ್ದಾರೆ.

Ramya Raghupathi: ‘ನಾನು ವಿಚ್ಛೇದನ ಕೊಡಲ್ಲ’; ನರೇಶ್​ಗೆ ನೇರವಾಗಿ ಹೇಳಿದ ಪತ್ನಿ ರಮ್ಯಾ ರಘುಪತಿ
ಪವಿತ್ರಾ ಲೋಕೇಶ್​-ನರೇಶ್​-ರಮ್ಯಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jan 06, 2023 | 10:05 AM

Share

ನರೇಶ್ (Naresh ) ಹಾಗೂ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಕೌಟುಂಬಿಕ ಕಲಹ ಬೀದಿಗೆ ಬಂದು ಬಹಳ ಸಮಯ ಕಳೆದಿದೆ. ನಟಿ ಪವಿತ್ರಾ ಲೋಕೇಶ್ ಅವರನ್ನು ನರೇಶ್ ಲವ್​ ಮಾಡುತ್ತಿದ್ದಾರೆ, ಅವರಿಬ್ಬರು ಒಟ್ಟಿಗೆ ಬಾಳುತ್ತಿದ್ದಾರೆ ಎಂದು ಆರೋಪಿಸಿ ರಮ್ಯಾ ರಘುಪತಿ (Ramya Raghupathi) ಈ ಮೊದಲು ಗಲಾಟೆ ಮಾಡಿದ್ದರು. ಈಗ ನರೇಶ್ ಹಾಗೂ ಪವಿತ್ರಾ ಶೀಘ್ರವೇ ಮದುವೆ ಆಗುವ ಸೂಚನೆ ನೀಡಿದ್ದಾರೆ. ಹೊಸ ವಿಡಿಯೋ ಮೂಲಕ ನರೇಶ್ ಈ ವಿಚಾರವನ್ನು ಖಚಿತಪಡಿಸಿದ್ದರು. ಈಗ ಈ ಬೆಳವಣಿಗೆ ಬಗ್ಗೆ ರಮ್ಯಾ ರಘುಪತಿ ಮಾತನಾಡಿದ್ದಾರೆ.

ತೆಲುಗಿನ ರೆಡ್​ ಟಿವಿಗೆ ನೀಡಿದ ಸಂದರ್ಶನದಲ್ಲಿ ರಮ್ಯಾ ರಘುಪತಿ ಸುಮಾರು ಮೂರು ಗಂಟೆ ಮಾತನಾಡಿದ್ದಾರೆ. ಸಂದರ್ಶನದುದ್ದಕ್ಕೂ ನರೇಶ್ ಅವರಿಂದ ಆದ ಮೋಸದ ಬಗ್ಗೆ ಹೇಳಿದ್ದಾರೆ. ಅಷ್ಟೇ ಅಲ್ಲ ನರೇಶ್ ಅವರನ್ನು ಬಿಡುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ‘ಪವಿತ್ರಾ ಹಾಗೂ ನರೇಶ್ ಮದುವೆ ಆಗುತ್ತಿರುವುದು ನಿಜ. ಆದರೆ, ನನಗೆ ಹಾಗೂ ನರೇಶ್​ಗೆ ವಿಚ್ಛಆದನ ಆಗಿಲ್ಲ. ನಾನು ವಿಚ್ಛೇದನ ಕೊಡುವುದೂ ಇಲ್ಲ. ನಾವಿಬ್ಬರೂ ಬೇರೆ ಆಗುವುದಿಲ್ಲ ಎಂದು ಮಗನಿಗೆ ಪ್ರಾಮಿಸ್ ಮಾಡಿದ್ದೇನೆ. ಅದನ್ನು ಉಳಿಸಿಕೊಳ್ಳುತ್ತೇನೆ’ ಎಂದಿದ್ದಾರೆ ಅವರು.

‘ಮದುವೆಯಾದ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಮಗ ಹುಟ್ಟಿದ ನಂತರದಲ್ಲಿ ನರೇಶ್ ಬದಲಾದರು. ಅವರ ಶರ್ಟ್​​ನಿಂದ​ ಲೇಡಿಸ್ ಪರ್ಫ್ಯೂಮ್ ಪರಿಮಳ ಬರುತ್ತಿತ್ತು. ಈ ಬಗ್ಗೆ ಕೇಳಿದರೆ ಬೇರೆ ಯಾವುದೋ ಕಥೆಯನ್ನು ಹೇಳುತ್ತಿದ್ದರು. ಮೀಟಿಂಗ್​​ನಲ್ಲಿ ಇದ್ದೆ ಎನ್ನುತ್ತಿದ್ದರು. ಆದರೆ, ಕ್ರಾಸ್​ಚೆಕ್ ಮಾಡಿದರೆ ಅದು ಸುಳ್ಳು ಎಂಬುದು ಗೊತ್ತಾಗುತ್ತಿತ್ತು’ ಎಂದಿದ್ದಾರೆ ರಮ್ಯಾ.

ಇದನ್ನೂ ಓದಿ
Image
ಮದುವೆ ಅಲ್ಲ, ಸಿನಿಮಾ ಪ್ರಮೋಷನ್ ಗಿಮಿಕ್​? ಪವಿತ್ರಾ​-ನರೇಶ್ ಕಿಸ್ಸಿಂಗ್ ವಿಡಿಯೋ ಬಗ್ಗೆ ಅನುಮಾನ
Image
Pavitra Lokesh Marriage: ಪವಿತ್ರಾ ಲೋಕೇಶ್​ ತುಟಿಗೆ ಮುತ್ತಿಟ್ಟು ಮದುವೆ ನ್ಯೂಸ್​ ತಿಳಿಸಿದ ನರೇಶ್​; ವಿಡಿಯೋ ವೈರಲ್​
Image
Pavitra Lokesh: ಮುಖಾಮುಖಿ ಬೈಯ್ದುಕೊಂಡ ರಮ್ಯಾ-ಪವಿತ್ರಾ ಲೋಕೇಶ್​; ಖುಷಿಯಿಂದ ಕೇಕೆ ಹಾಕಿದ ನರೇಶ್​
Image
ಒಂದೇ ರೂಮ್​ನಲ್ಲಿ ನಟಿ ಪವಿತ್ರಾ ಲೋಕೇಶ್, ನಟ ನರೇಶ್: ರೂಂ ಮುಂದೆ ರಮ್ಯ ರಘುಪತಿ ಹೈಡ್ರಾಮಾ

ಕಿಸ್ ಮಾಡುವ ವಿಡಿಯೋ ಹಂಚಿಕೊಂಡಿದ್ದ ನರೇಶ್

‘ಹೊಸ ವರ್ಷ, ಹೊಸ ಆರಂಭ. ನಿಮ್ಮೆಲ್ಲರ ಹಾರೈಕೆ ಬೇಕು’ ಎಂದು ಕ್ಯಾಪ್ಷನ್​ ನೀಡುವ ಮೂಲಕ ನರೇಶ್​ ಅವರು ಈ ವಿಡಿಯೋ ಹಂಚಿಕೊಂಡಿದ್ದರು. 2023ರ ಹೊಸ ವರ್ಷವನ್ನು ನರೇಶ್​ ಮತ್ತು ಪವಿತ್ರಾ ಲೋಕೇಶ್​ ತುಂಬ ರೊಮ್ಯಾಂಟಿಕ್ ಆಗಿ ಸ್ವಾಗತಿಸುತ್ತಿದ್ದರು. ಕ್ಯಾಂಡಲ್​ ಹಚ್ಚಿ, ಕೇಕ್​ ಕತ್ತರಿಸಿ, ಪರಸ್ಪರ ಸಿಹಿ ತಿನಿಸಿ ನಂತರ ತುಟಿಗೆ ಚುಂಬಿಸುತ್ತಿರುವ ವಿಡಿಯೋವನ್ನು ಈ ಜೋಡಿ ಹಂಚಿಕೊಂಡಿತ್ತು. ಇದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:24 am, Fri, 6 January 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ