ಮುರಿದುಬಿತ್ತು ನಟಿಯ ಮದುವೆ; ಎಂಗೇಜ್​ಮೆಂಟ್​ ಆದ ನಂತರ ಗೊತ್ತಾಗಿತ್ತು ರಾಜಕಾರಣಿ ಕುಟುಂಬದ ಅಸಲಿಯತ್ತು?

ರಾಜಕಾರಣಿ ಭವ್ಯ ಭಿಷ್ಣೋಯ್​ ಜತೆಗೆ ಮೆಹ್ರೀನ್​ ಮದುವೆ ಆಗಬೇಕಿತ್ತು. ಈಗ ಇವರ ಮದುವೆ ಮುರಿದು ಬಿದ್ದಿರುವ ವಿಚಾರ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಮುರಿದುಬಿತ್ತು ನಟಿಯ ಮದುವೆ; ಎಂಗೇಜ್​ಮೆಂಟ್​ ಆದ ನಂತರ ಗೊತ್ತಾಗಿತ್ತು ರಾಜಕಾರಣಿ ಕುಟುಂಬದ ಅಸಲಿಯತ್ತು?
ಮುರಿದುಬಿತ್ತು ನಟಿಯ ಮದುವೆ; ಎಂಗೇಜ್​ಮೆಂಟ್​ ಆದ ನಂತರ ಗೊತ್ತಾಗಿತ್ತು ರಾಜಕಾರಣಿ ಕುಟುಂಬದ ಅಸಲಿಯತ್ತು
TV9kannada Web Team

| Edited By: Rajesh Duggumane

Jul 05, 2021 | 4:24 PM

ಮದುವೆ ಹಾಗೂ ವಿಚ್ಛೇದನ ಸಿನಿಮಾ ರಂಗಕ್ಕೆ ಹೊಸದಲ್ಲ. ಮದುವೆ ಆದ ಹಲವು ವರ್ಷಗಳ ನಂತರದಲ್ಲಿ ವಿಚ್ಛೇದನ ಪಡೆದ ಸೆಲೆಬ್ರಿಟಿಗಳು ಸಾಕಷ್ಟಿದ್ದಾರೆ. ಆಮಿರ್​ ಖಾನ್​ ಹಾಗೂ ಕಿರಣ್​ ರಾವ್​  ದಂಪತಿ ಇದಕ್ಕೆ ತಾಜಾ ಉದಾಹರಣೆ. ಇನ್ನು ನಿಶ್ಚಿತಾರ್ಥ ಮಾಡಿಕೊಂಡು ಹಸೆಮಣೆವರೆಗೆ ಹೋಗದ ಸಂಬಂಧವೂ ಹಲವಿದೆ. ಈಗ ಟಾಲಿವುಡ್​ ನಟಿಯೊಬ್ಬರು ಎಂಗೇಜ್​ಮೆಂಟ್​ ಆದ ನಂತರದಲ್ಲಿ ಮದುವೆ ಬೇಡ ಎನ್ನುವ ನಿರ್ಧಾರ ಕೈಗೊಂಡಿದ್ದಾರೆ.

ಹೌದು, ‘ಎಫ್​ 2: ಫನ್​ ಆ್ಯಂಡ್ ಫ್ರಸ್ಟ್ರೇಷನ್’ ಸಿನಿಮಾದಲ್ಲಿ ನಟಿಸಿದ ಮೆಹ್ರೀನ್​ ಕೆಲ ತಿಂಗಳ ಹಿಂದೆ ರಾಜಕಾರಣಿ ಭವ್ಯ ಭಿಷ್ಣೋಯ್ ಜತೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದರು. ಕೊವಿಡ್​ ಎರಡನೇ ಅಲೆ ಕಾಣಿಸಿಕೊಳ್ಳದಿದ್ದರೆ ಇಬ್ಬರ ಮದುವೆ ಈಗಾಗಲೇ ಪೂರ್ಣಗೊಂಡಿರುತ್ತಿತ್ತು. ಆದರೆ, ಮದುವೆಯನ್ನು ಈ ಜೋಡಿ ಮುಂದೂಡಿತ್ತು. ಈಗ ಮದುವೆಯೇ ಆಗಬಾರದು ಎನ್ನುವ ನಿರ್ಧಾರಕ್ಕೆ ಮೆಹ್ರೀನ್​ ಬಂದಿದ್ದಾರೆ.

ರಾಜಕಾರಣಿ ಭವ್ಯ ಭಿಷ್ಣೋಯ್​ ಜತೆಗೆ ಮೆಹ್ರೀನ್​ ಮದುವೆ ಆಗಬೇಕಿತ್ತು. ಈಗ ಇವರ ಮದುವೆ ಮುರಿದು ಬಿದ್ದಿರುವ ವಿಚಾರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಆದರೆ, ಇದಕ್ಕೆ ಕಾರಣ ಏನು ಎನ್ನುವ ವಿಚಾರ ಬಹಿರಂಗಗೊಂಡಿರಲಿಲ್ಲ. ಈಗ ಇದಕ್ಕೆ ಉತ್ತರ ಸಿಕ್ಕಿದೆ.

ಮೆಹ್ರೀನ್​ ಮದುವೆ ನಂತರವೂ ಸಿನಿಮಾ ಇಂಡಸ್ಟ್ರಿಯಲ್ಲಿ ಮುಂದುವರಿಯಬೇಕು, ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಕನಸು ಕಂಡಿದ್ದರು. ಬಿಷ್ಣೋಯ್​ ಕುಟುಂಬ ಆರಂಭದಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸಿತ್ತು. ಎಂಗೇಜ್​ಮೆಂಟ್​ ಆದ ನಂತರದಲ್ಲಿ ಕುಟುಂಬದವರು ಉಲ್ಟಾ ಹೊಡೆದಿದ್ದರು. ಮದುವೆ ನಂತರದಲ್ಲಿ ಮನೆಯಲ್ಲೇ ಇರಬೇಕು ಎನ್ನುವ ಕಂಡೀಷನ್​ ಹಾಕಿದ್ದರು. ಮದುವೆಗಿಂತ ತಮ್ಮ ಕೆರಿಯರ್​ ಮುಖ್ಯ ಎನ್ನುವ ನಿರ್ಧಾರಕ್ಕೆ ಬಂದ ಮೆಹ್ರೀನ್​ ಎಂಗೇಜ್​ಮೆಂಟ್​ ಕ್ಯಾನ್ಸಲ್​ ಮಾಡಿಕೊಂಡಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

2019ರಲ್ಲಿ ತೆರೆಗೆ ಬಂದ ‘ಎಫ್​ 2: ಫನ್​ ಆ್ಯಂಡ್ ಫ್ರಸ್ಟ್ರೇಷನ್’​ ಸಿನಿಮಾ ಹಿಟ್​ ಆಗಿತ್ತು. ಸದ್ಯ ಮೆಹ್ರೀನ್​ ಏಫ್​ 3 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಿಂದಿ, ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಮೆಹ್ರೀನ್​ ಅವರಿಗಿದೆ. ಈಗತಾನೇ ಗುರುತಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಚಿತ್ರರಂಗದಿಂದ ದೂರ ಸರಿಯುವುದು ಉತ್ತಮವಲ್ಲ ಎನ್ನುವುದು ಅವರ ಉದ್ದೇಶ.

ಇದನ್ನೂ ಓದಿ: ‘ವಿಚ್ಛೇದನವನ್ನು ಸಂಭ್ರಮಿಸಬೇಕು’; ಆಮಿರ್​-ಕಿರಣ್​ಗೆ ಕಿವಿಮಾತು ಹೇಳಿದ ಖ್ಯಾತ ನಿರ್ದೇಶಕ

Aamir Khan: ಆಮಿರ್​​ ಖಾನ್​-ಕಿರಣ್​ ರಾವ್​ ವಿಚ್ಛೇದನ; 15 ವರ್ಷದ ದಾಂಪತ್ಯ ಜೀವನ ಅಂತ್ಯ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada