‘ಭಾರೀ ಮುಜುಗರ ತಂದಿತ್ತು ಆ ವಿಚಾರ’; ಸ್ಲಿಮ್​ ಆದ ಹಿಂದಿನ ಕಥೆ ಹೇಳಿದ ಖುಷ್ಬೂ

| Updated By: ರಾಜೇಶ್ ದುಗ್ಗುಮನೆ

Updated on: Mar 22, 2022 | 9:41 AM

ಖುಷ್ಬೂ ಅವರಿಗೆ ಈ ವಯಸ್ಸಿನಲ್ಲಿ ಫಿಟ್​ನೆಸ್​ ಬಗ್ಗೆ ಇಷ್ಟೊಂದು ಆಸಕ್ತಿ ಬಂದಿದ್ದು ಏಕೆ? ಈ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಕುಟುಂಬದಲ್ಲಿ ಅವರಿಗೆ ಮುಜುಗರ ಎದುರಾಗಿತ್ತು. ಈ ಕಾರಣಕ್ಕೆ ಫಿಟ್​ ಆಗಲು ಪಣತೊಟ್ಟರು.  

‘ಭಾರೀ ಮುಜುಗರ ತಂದಿತ್ತು ಆ ವಿಚಾರ’; ಸ್ಲಿಮ್​ ಆದ ಹಿಂದಿನ ಕಥೆ ಹೇಳಿದ ಖುಷ್ಬೂ
ಖುಷ್ಬೂ
Follow us on

ಖುಷ್ಬೂ (Khushbu ) ಅವರಿಗೆ ಈಗ ವಯಸ್ಸು 51. ಈ ವಯಸ್ಸಿನಲ್ಲೂ ಅವರು ಯುವತಿಯರನ್ನೂ ನಾಚಿಸುವಂತಹ ಫಿಟ್​ನೆಸ್​ ಕಾಯ್ದುಕೊಂಡಿದ್ದಾರೆ. ಚಿತ್ರರಂಗದಲ್ಲಿ ಆಗೊಂದು, ಈಗೊಂದು ಸಿನಿಮಾ ಮಾಡುವ ಅವರು ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಕೆಲ ವರ್ಷಗಳ ಕಾಲ ಅವರು ಫಿಟ್​ನೆಸ್ (Fitness)​ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರು ಫಿಟ್​ನೆಸ್​ಗೆ ಆದ್ಯತೆ ನೀಡುತ್ತಿದ್ದಾರೆ. ಸಖತ್​ ಸ್ಲಿಮ್ ಆಗಿರೋ ಫೋಟೋ ಹಂಚಿಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಖುಷ್ಬೂ ಅವರಿಗೆ ಈ ವಯಸ್ಸಿನಲ್ಲಿ ಫಿಟ್​ನೆಸ್​ ಬಗ್ಗೆ ಇಷ್ಟೊಂದು ಆಸಕ್ತಿ ಬಂದಿದ್ದು ಏಕೆ? ಈ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಕುಟುಂಬದಲ್ಲಿ ಅವರಿಗೆ ಮುಜುಗರ ಎದುರಾಗಿತ್ತು. ಈ ಕಾರಣಕ್ಕೆ ಫಿಟ್​ ಆಗಲು ಪಣತೊಟ್ಟರು.

‘ನನ್ನ ಪತಿ ಸುಂದರ್ ಅವರು ಮೂರು ಸಿನಿಮಾಗಳಲ್ಲಿ ಪೊಲೀಸ್ ಪಾತ್ರ ಮಾಡಿದ್ದಾರೆ. ಹೀಗಾಗಿ, ಅವರು ಜಿಮ್​ನಲ್ಲಿ ಕಸರತ್ತು ನಡೆಸಿದ್ದರು. ನನ್ನ ಮಕ್ಕಳು ಕೂಡ ಅಷ್ಟೇ, ಅವರು ಫಿಟ್​ನೆಸ್​ಗೆ ಆದ್ಯತೆ ನೀಡುತ್ತಾರೆ. ನನ್ನ ಪತಿ, ಮಕ್ಕಳು ಮೂವರು ಎತ್ತರವಿದ್ದಾರೆ. ಅವರಿಗೆ ಹೋಲಿಸಿದರೆ ನಾನು ದಪ್ಪ ಮತ್ತು ಎತ್ತರ ಕಡಿಮೆ. ಇದು ನನಗೆ ಕೊಂಚ ಮುಜುಗರ ತಂದಿತ್ತು. ಹೀಗಾಗಿ, ನನಗೂ ಸ್ಲಿಮ್​ ಆಗಬೇಕು ಎಂದು ಅನಿಸಿತು. ನಾನು ಯೋಗ ಹಾಗೂ ವ್ಯಾಯಾಮ ಮಾಡೋಕೆ ಪ್ರಾರಂಭಿಸಿದೆ’ ಎಂದು ಸ್ಲಿಮ್​ ಆದ ಹಿಂದಿನ ಕಥೆಯನ್ನು ಅವರು ಹೇಳಿದ್ದಾರೆ.

‘ನಾನು ತಿನ್ನುವುದಕ್ಕೆ ಬ್ರೇಕ್​ ಹಾಕಿಲ್ಲ. ಐಸ್‌ಕ್ರೀಂ ಸೇವನೆ ಕಡಿಮೆ ಮಾಡಿದ್ದೇನೆ. ಮಟನ್ ಬಿರಿಯಾನಿ ತಿನ್ನೋದನ್ನು ನಿಲ್ಲಿಸಿಲ್ಲ. ಆಗೊಮ್ಮೆ, ಈಗೊಮ್ಮೆ ಏನನ್ನಾದರೂ ತಿನ್ನುತ್ತಲೇ ಇರುತ್ತೇನೆ. ನನಗೆ ಚಾಕೋಲೆಟ್​ ಎಂದರೆ ಇಷ್ಟವಿಲ್ಲ. ಆದರೆ, ಚಾಕೊಲೇಟ್​ನಿಂದ ಮಾಡಿದ ತಿನಿಸುಗಳನ್ನು ಇಷ್ಟಪಡುತ್ತೇನೆ’ ಎಂದು ಆಹಾರ ಕ್ರಮದ ಬಗ್ಗೆ ಹೇಳಿಕೊಂಡಿದ್ದಾರೆ ಅವರು.

2018ರಲ್ಲಿ ತೆರೆಗೆ ಬಂದ ‘ಅಜ್ಞಾತವಾಸಿ’ ಸಿನಿಮಾದಲ್ಲಿ ಖುಷ್ಬೂ ನಟಿಸಿದ್ದರು. ಒಂದು ದೊಡ್ಡ ಬ್ರೇಕ್​ ಬಳಿಕ ಅವರು ಒಪ್ಪಿಕೊಂಡ ಸಿನಿಮಾ ಇದಾಗಿತ್ತು. ಆ ಬಳಿಕ ಅವರಿಗೆ ಸಾಕಷ್ಟು ಆಫರ್​ಗಳು ಬರೋಕೆ ಆರಂಭವಾದವು. ಒಂದು ಸಿನಿಮಾ ಬಿಟ್ಟು ಅವರು ಬೇರೆ ಯಾವುದನ್ನೂ ಒಪ್ಪಿಕೊಂಡಿಲ್ಲ. ‘ಅಜ್ಞಾತವಾಸಿ ಬಳಿಕ ಒಂದಷ್ಟು ಆಫರ್‌ಗಳು ಬಂದವು. ಕಂಬ್ಯಾಕ್​ ಮಾಡಿದ ನಂತರದಲ್ಲಿ ಆಸಕ್ತಿದಾಯಕ ಸಿನಿಮಾ ಮಾಡಬೇಕು ಎಂಬುದು ನನ್ನ ಉದ್ದೇಶ. ಕೊನೆಗೂ ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾ ಒಪ್ಪಿಕೊಂಡೆ. ನನ್ನ ಪಾತ್ರಕ್ಕೂ, ನನಗೂ ಕೆಲವು ಸಾಮ್ಯತೆ ಇದ್ದಿದ್ದರಿಂದ ಈ ಸಿನಿಮಾ ಇಷ್ಟಪಟ್ಟು ಮಾಡಿದೆ’ ಎಂದಿದ್ದಾರೆ ಖುಷ್ಬೂ. ರಶ್ಮಿಕಾ ಮಂದಣ್ಣ ಹಾಗೂ ಶರ್ವಾನಂದ್ ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಹೇಳಿಕೊಳ್ಳುವಂತಹ ಯಶಸ್ಸು ಪಡೆದಿಲ್ಲ.

ಇದನ್ನೂ ಓದಿ: Khushbu Sundar | ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಟ್ವಿಟ್ಟರ್​ ಖಾತೆ ಹ್ಯಾಕ್

ಖುಷ್ಬೂ ದಾಂಪತ್ಯ ಜೀವನದಲ್ಲಿ ಹೊಸ ಮೈಲಿಗಲ್ಲು; ಸಂತಸ ಹಂಚಿಕೊಂಡ ನಟಿ