Khushbu Sundar | ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಟ್ವಿಟ್ಟರ್​ ಖಾತೆ ಹ್ಯಾಕ್

Khushbu Sundar Twitter | ಖುಷ್ಬೂ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿದವರು ಅದರ ಅಕೌಂಟ್ ನೇಮ್ ಅನ್ನು ಬ್ರಿಯಾನ್ ಎಂದು ಬದಲಾಯಿಸಿದ್ದಾರೆ. ಹಾಗೇ, ಡಿಸ್​ಪ್ಲೇ ಫೋಟೋವನ್ನು ಕೂಡ ಬದಲಾಯಿಸಲಾಗಿದೆ.

Khushbu Sundar | ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಟ್ವಿಟ್ಟರ್​ ಖಾತೆ ಹ್ಯಾಕ್
ಖುಷ್ಬೂ ಸುಂದರ್
TV9kannada Web Team

| Edited By: Sushma Chakre

Jul 20, 2021 | 12:40 PM

ಚೆನ್ನೈ: ಖ್ಯಾತ ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರ್ ಅವರ ಟ್ವಿಟ್ಟರ್​ ಖಾತೆಯನ್ನು ಮತ್ತೊಮ್ಮೆ ಹ್ಯಾಕ್ ಮಾಡಲಾಗಿದೆ. 2020ರ ಏಪ್ರಿಲ್ ತಿಂಗಳಲ್ಲಿ ಕೂಡ ಖುಷ್ಬೂ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು. ಆಕೆಯ ಅಭಿಮಾನಿಗಳಿಂದ ಈ ವಿಷಯ ಬೆಳಕಿಗೆ ಬಂದಿತ್ತು. ಇದೀಗ ಮತ್ತೊಂದು ಬಾರಿ ಖುಷ್ಬೂ ಟ್ವಿಟ್ಟರ್​ ಅಕೌಂಟ್ ಅನ್ನು ಹ್ಯಾಕ್ ಮಾಡಲಾಗಿದ್ದು, ಅಕೌಂಟ್ ನೇಮ್ ಮತ್ತು ಕವರ್ ಪೇಜ್ ಅನ್ನು ಬದಲಾಯಿಸಲಾಗಿದೆ. ಅಷ್ಟೇ ಅಲ್ಲದೆ, ನಟಿ ಖುಷ್ಬೂ ಇದುವರೆಗೆ ಮಾಡಿರುವ ಎಲ್ಲ ಟ್ವೀಟ್​ಗಳನ್ನೂ ಡಿಲೀಟ್ ಮಾಡಲಾಗಿದೆ.

ಖುಷ್ಬೂ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿದವರು ಅದರ ಅಕೌಂಟ್ ನೇಮ್ ಅನ್ನು ಬ್ರಿಯಾನ್ ಎಂದು ಬದಲಾಯಿಸಿದ್ದಾರೆ. ಹಾಗೇ, ಡಿಸ್​ಪ್ಲೇ ಫೋಟೋವನ್ನು ಕೂಡ ಬದಲಾಯಿಸಲಾಗಿದೆ. ಈ ಹಿಂದೆ 2020ರಲ್ಲಿ ತಮ್ಮ ಟ್ವಿಟ್ಟರ್​ ಖಾತೆ ಹ್ಯಾಕ್ ಆದಾಗ ನಟಿ ಖುಷ್ಬೂ ತಮ್ಮ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಈ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿದ್ದರು.

Actress BJP Leader Khushbu Sundar's Twitter account hacked Tweets Deleted

ಹ್ಯಾಕ್ ಆಗಿರುವ ಖುಷ್ಬೂ ಟ್ವಿಟ್ಟರ್ ಖಾತೆ

ಅಂದಹಾಗೆ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿದ್ದ ನಟಿ ಖುಷ್ಬೂ ಸುಂದರ್ 2020ರ ಅಕ್ಟೋಬರ್ 12ರಂದು ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದರು. ಅದೇ ದಿನ ಬಿಜೆಪಿಗೆ ಸೇರ್ಪಡೆಯಾಗಿದ್ದರು. ತಮಿಳುನಾಡಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ನಟಿ ಖುಷ್ಬೂ 2021ರ ಚುನಾವಣೆಯಲ್ಲಿ ಥೌಸಂಡ್ ಲೈಟ್ಸ್​ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಬರೋಬ್ಬರಿ 32,200 ಮತಗಳ ಅಂತರದಿಂದ ಡಿಎಂಕೆ ಅಭ್ಯರ್ಥಿ ವಿರುದ್ಧ ಹೀನಾಯವಾಗಿ ಸೋತಿದ್ದರು.

ಹಲವಾರು ವಿವಾದಗಳಿಂದ ಹೆಸರಾಗಿರುವ ಖುಷ್ಬೂ ಸುಂದರ್ ಕಳೆದ ಮೂರು ವರ್ಷಗಳಿಂದ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿರಲಿಲ್ಲ. ರಾಜಕೀಯದಲ್ಲಿ ಸಕ್ರಿಯರಾಗಿದ್ದ ಖುಷ್ಬೂ ಇದೀಗ ರಜನಿಕಾಂತ್ ಅಭಿನಯದ ಅಣ್ಣಾತೆ ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ವಾಪಾಸಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ: BJP ನಾಯಕಿ ಖುಷ್ಬೂ ಕಾರು ಅಪಘಾತ: ‘ಗಂಡ ಮುರುಗನ ಆರಾಧಕ; ಅವನೇ ನನ್ನನ್ನು ಕಾಪಾಡಿದ’

(Actress BJP Leader Khushbu Sundar’s Twitter account hacked Tweets Deleted)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada