ಸೂಪರ್ ಸ್ಟಾರ್ ರಜನಿಕಾಂತ್ ‘ಅಣ್ಣಾತೆ’ ಸಿನಿಮಾ ರದ್ದು.. ಏಕೆ?
ಸೂಪರ್ ಸ್ಟಾರ್ ರಜನಿಕಾಂತ್ ನೂತನ ಸಿನಿಮಾ ‘ಅಣ್ಣಾತೆ’ ಚಿತ್ರೀಕರಣ ಆರಂಭಗೊಂಡಿತ್ತು. ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಚಿತ್ರೀಕರಣವನ್ನು ರದ್ದುಗೊಳಿಸಲಾಗಿದೆ.
ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ನೂತನ ಸಿನಿಮಾ ‘ಅಣ್ಣಾತೆ’ ಚಿತ್ರೀಕರಣ ಆರಂಭಗೊಂಡಿತ್ತು. ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಚಿತ್ರೀಕರಣವನ್ನು ರದ್ದುಗೊಳಿಸಲಾಗಿದೆ.
ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣವನ್ನು ನಡೆಸಲಾಗುತ್ತಿತ್ತು. ಪಾಲ್ಗೊಂಡಿದ್ದ 8 ಜನರಿಗೆ ಕೊರೊನಾ ಪಾಸಿಟಿವ್ ಬಂದಿರುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಅಣ್ಣಾತೆ ಎಂಬುದು ತಮಿಳಿನ ಆ್ಯಕ್ಷನ್ ನಾಟಕ ಚಲನಚಿತ್ರವಾಗಿತ್ತು. ಸಿರುಥೈ ಸಿವ ಚಿತ್ರ ಕಥೆ ಬರೆದು ನಿರ್ದೇಶನ ಮಾಡಿದ್ದರು. ನಟಿ ಕೀರ್ತಿ ಸುರೇಶ್ ಮತ್ತು ನಯನತಾರಾ ಮುಖ್ಯ ಪಾತ್ರದಲ್ಲಿ ಹಾಗೂ ಮೀನಾ ಮತ್ತು ಖುಷ್ಬೂ ಸುಂದರ್ ಸಹಾಯಕ ಪಾತ್ರದಲ್ಲಿ ನಟಿಸುತ್ತಿದ್ದರು.
ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಪಾಸಿಟಿವ್ ವರದಿಯಿಂದ ಚಿತ್ರೀಕರಣ ರದ್ದಾಗಿದ್ದು, ಚಿತ್ರೀಕರಣದ ಪುನರಾರಂಭ ಯಾವಾಗ ಎಂಬುದನ್ನು ಕಾದು ನೋಡಬೇಕಿದೆ.
ರಾಜಕೀಯ ವಿಶ್ಲೇಷಣೆ | ತಮಿಳುನಾಡು ರಾಜಕೀಯದಲ್ಲೂ ಸೂಪರ್ಸ್ಟಾರ್ ಆಗ್ತಾರಾ ರಜನಿಕಾಂತ್