Bigg Boss Kannada: ರಘು ಹೆಂಡತಿ ತನ್ನ ಪತಿ ಬದಲು ವೈಷ್ಣವಿಗೆ ವೋಟ್​ ಮಾಡಿದ್ದೇಕೆ?

| Updated By: Digi Tech Desk

Updated on: May 03, 2021 | 4:41 PM

Vaishnavi: ವೈಷ್ಣವಿ ಅವರದ್ದು ಎಲ್ಲರಿಗೂ ಇಷ್ಟವಾಗುವ ಗುಣ. ಹೀಗಾಗಿ, ಅವರು ಬಿಗ್​ ಬಾಸ್​ ಮನೆಯಲ್ಲಿ ನಾಮಿನೇಟ್​ ಆಗಿದ್ದು ತುಂಬಾನೇ ಕಡಿಮೆ. ನಾಮಿನೇಟ್​ ಆದರೂ ಅವರು ಸುಲಭವಾಗಿ ಬಚಾವ್​ ಆಗಿದ್ದಾರೆ.

Bigg Boss Kannada: ರಘು ಹೆಂಡತಿ ತನ್ನ ಪತಿ ಬದಲು ವೈಷ್ಣವಿಗೆ ವೋಟ್​ ಮಾಡಿದ್ದೇಕೆ?
ರಘು ಗೌಡ-ವಿದ್ಯಾಶ್ರೀ
Follow us on

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ನಾಮಿನೇಟ್​ ಆದಾಗ ಕುಟುಂಬದವರು, ನೆಂಟರಿಷ್ಟರು, ಅಭಿಮಾನಿಗಳು ಅವರಿಗೆ ವೋಟ್​ ಮಾಡುತ್ತಾರೆ. ಆದರೆ, ಬಿಗ್​ ಬಾಸ್​ ಮನೆ ಸೇರಿರುವ ರಘು ಗೌಡ ವಿಚಾರದಲ್ಲಿ ಇದು ಉಲ್ಟಾ ಆಗಿರಬಹುದು. ಅವರ ಹೆಂಡತಿ ರಘುಗೆ ವೋಟ್​ ಮಾಡುವ ಬದಲು ವೈಷ್ಣವಿಗೆ ವೋಟ್​ ಮಾಡಿದ್ದಾರಂತೆ! ಇದಕ್ಕೆ ಕಾರಣವನ್ನು ಕೂಡ ರಘು ಬಿಚ್ಚಿಟ್ಟಿದ್ದಾರೆ.

ವೈಷ್ಣವಿ ಅವರದ್ದು ಎಲ್ಲರಿಗೂ ಇಷ್ಟವಾಗುವ ಗುಣ. ಹೀಗಾಗಿ, ಅವರು ಬಿಗ್​ ಬಾಸ್​ ಮನೆಯಲ್ಲಿ ನಾಮಿನೇಟ್​ ಆಗಿದ್ದು ತುಂಬಾನೇ ಕಡಿಮೆ. ನಾಮಿನೇಟ್​ ಆದರೂ ಅವರು ಸುಲಭವಾಗಿ ಬಚಾವ್​ ಆಗಿದ್ದಾರೆ. ಅವರ ಅಭಿಮಾನಿ ಬಳಗ ದೊಡ್ಡದಿರುವುದರಿಂದ ಅವರಿಗೆ ಹೆಚ್ಚು ಮತ ಬಿದ್ದಿದೆ. ಅಷ್ಟಕ್ಕೂ ಅವರ ಅಭಿಮಾನಿ ಬಳಗ ದೊಡ್ಡದಾಗೋಕೆ ಕಾರಣ ಏನು ಎನ್ನುವುದನ್ನು ರಘು ಹಾಗೂ ಮಂಜು ವಿವರಿಸಿದ್ದಾರೆ.

ವೈಷ್ಣವಿ ಮನೆಯ ಗಾರ್ಡನ್​ ಏರಿಯಾದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರು. ಆಗ ಅಲ್ಲಿದ್ದ ಮಂಜು ಹಾಗೂ ರಘು, ವೈಷ್ಣವಿ ಕಾಲೆಳೆಯೋಕೆ ಆರಂಭಿಸಿದ್ದಾರೆ. ರಘುಗೆ ಒಳ್ಳೆದಾಗ್ಲಿ. ಅವನ ಬಾಳು ಬಂಗಾರ ಆಗಲಿ. ನನ್ನ ಪಾಲಿನ ಸುಖ ಅವನಿಗೆ ಹೋಗಲಿ. ನನ್ನ ಪೇಮೆಂಟ್​ ರಘು ಖಾತೆಗೆ ಹೋಗಲಿ ಎಂದು ವೈಷ್ಣವಿ ಬೇಡಿಕೊಳ್ಳುತ್ತಿದ್ದಾರೆ ಎಂದರು ರಘು. ಆಗ ಮಂಜು, ದೇವರೇ ಅವನು ಹೇಳಿದ್ದು ಬೇಗೆ ಸುಳ್ಳಾಗಲಿ ಎಂದರು.

ಈ ಸಂಭಾಷಣೆ ಕೇಳುತ್ತಿದ್ದ ವೈಷ್ಣವಿ ನಕ್ಕಿದ್ದಾರೆ. ಯಾಕೆ ನಗ್ತೀರಾ? ಏಕಾಗ್ರತೆಯೇ ಇಲ್ಲ. ವೈಷ್ಣವಿ ಕಣ್ಮು ಮುಚ್ಚಿಕೊಂಡು ನಾಟಕ ಆಡ್ತಾಳೆ. ಕ್ಯಾಮೆರಾ ಮೆನ್​ ಪಾಪ ಇವಳು ಧ್ಯಾನ ಮಾಡ್ತಾಳೆ ಅಂದುಕೊಂಡಿರುತ್ತಾನೆ. ಏಳುವರೆ ಕೋಟಿ ಜನರನ್ನು ನೀನು ಯಾಮಾರಿಸಿಬಿಟ್ಟೆಯಲ್ಲಮ್ಮ ಎಂದು ಮಂಜು ಹೇಳಿದರು.

ಆಗ ರಘು ಮಾತು ಆರಂಭಿಸಿದರು. ನನಗೆ ಬಂಟಿ ಬಂಟಿ ಎಂದು ನಾಯಿ ಲವರ್ಸ್​ ವೋಟ್ ಪಡೆದುಕೊಂಡರು. ಧ್ಯಾನ ಮಾಡುವ ಮೂಲಕ ಯೋಗ ಹಾಗೂ ಜಿಮ್​ ಮಾಡುವವರ ವೋಟ್ ಪಡೆದುಕೊಂಡರು​. ಕಿಚನ್​ನಲ್ಲಿದ್ದಾಗ ಆಂಟಿಯರ ವೋಟ್, ಜೀನ್ಸ್ ಹಾಕಿಕೊಂಡು​ ಟಾಂ ಬಾಯ್ಸ್​ ವೋಟ್ ಸಿಕ್ಕಿದೆ. ಸಖತ್​ ಆಗಿ ಡ್ರೆಸ್​ ಮಾಡಿಕೊಂಡಿದ್ದನ್ನು ನೋಡಿ ನನ್ನ ಹೆಂಡ್ತಿನೇ ಇವಳಿಗೆ ವೋಟ್​ ಮಾಡಿರ್ತಾಳೆ ಎಂದರು. ಇದನ್ನು ಕೇಳಿ ಮೂವರು ನಕ್ಕರು.

ಇದನ್ನೂ ಓದಿ: ವೈಷ್ಣವಿ ಜತೆ ರಘು ಗೌಡ ಕ್ಲೋಸ್​ ಆಗಿರೋ ಬಗ್ಗೆ ಅವರ ಪತ್ನಿ ವಿದ್ಯಾಶ್ರೀ ಹೇಳಿದ್ದೇನು?

ಕ್ಯಾಪ್ಟನ್​ ಆದ ಮರುದಿನವೇ ಚಕ್ರವರ್ತಿಗೆ ದ್ರೋಹ ಬಗೆದ ರಘು; ಮಾಡಿದ ಸಹಾಯ ಇಷ್ಟು ಬೇಗ ಮರೆತೋಯ್ತಾ?

Published On - 3:42 pm, Mon, 3 May 21