ಸಮಂತಾಗೆ ಅಪರೂಪದ ಕಾಯಿಲೆ ಅಂಟೋಕೆ ಕಾರಣವಾಯ್ತು ಆ ಒಂದು ತಪ್ಪು?

TV9kannada Web Team

TV9kannada Web Team | Edited By: Rajesh Duggumane

Updated on: Oct 31, 2022 | 5:41 PM

ಸಮಂತಾ ಬೇಗ ಚೇತರಿಕೆ ಕಾಣಲಿ ಎಂದು ಎಲ್ಲರೂ ಕೋರುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಸಮಂತಾ ಅವರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿ ಪೋಸ್ಟ್ ಮಾಡುತ್ತಿದ್ದಾರೆ.

ಸಮಂತಾಗೆ ಅಪರೂಪದ ಕಾಯಿಲೆ ಅಂಟೋಕೆ ಕಾರಣವಾಯ್ತು ಆ ಒಂದು ತಪ್ಪು?
ಸಮಂತಾ

ನಟಿ ಸಮಂತಾ (Samantha) ಅವರಿಗೆ Myositis ಹೆಸರಿನ ಅಪರೂಪದ ಕಾಯಿಲೆ ಇದೆ. ಈ ವಿಚಾರವನ್ನು ಸಮಂತಾ ಇತ್ತೀಚೆಗೆ ರಿವೀಲ್ ಮಾಡಿದ್ದರು. ಸ್ನಾಯುಗಳಲ್ಲಿ ಅತೀವ ಸೆಳೆತ ಕಾಣಿಸಿಕೊಳ್ಳುವುದು ಈ ಕಾಯಿಲೆಯ ಪ್ರಮುಖ ಲಕ್ಷ. ಸಮಂತಾ ಅವರಿಗೆ ಈ ಕಾಯಿಲೆಯಿಂದ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಈ ಸಮಸ್ಯೆಯಿಂದ ಆದಷ್ಟು ಬೇಗ ಚೇತರಿಕೆ ಕಾಣಬಹುದು ಎಂಬುದು ಸಮಂತಾ ಅವರ ಲೆಕ್ಕಾಚಾರ ಆಗಿತ್ತು. ಆದರೆ, ಆ ರೀತಿ ಆಗಿಲ್ಲ. ಸಮಂತಾ ಅವರಿಗೆ ಈ ಕಾಯಿಲೆಯಿಂದ ಚೇತರಿಕೆ ಕಾಣೋಕೆ ಮತ್ತಷ್ಟು ಸಮಯ ಬೇಕಿದೆ.

ಸಮಂತಾ ಅವರು 2021ರ ಅಕ್ಟೋಬರ್​ನಲ್ಲಿ ಪತಿ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದರು. ಸಮಂತಾ ಅವರು ವಿಚ್ಛೇದನದ ನಂತರದಲ್ಲಿ ಹಲವು ಕಡೆಗಳಲ್ಲಿ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದರಿಂದ ಹೊರ ಬರಲು ಸಿನಿಮಾ ಕೆಲಸಗಳಲ್ಲಿ ಸಾಕಷ್ಟು ತೊಡಗಿಕೊಂಡರು. ಸಾಕಷ್ಟು ಸಮಯ ಜಿಮ್​ನಲ್ಲಿ ಅವರು ಕಳೆದಿದ್ದಾರೆ. ಇದು ಸಮಂತಾಗೆ ತೊಂದರೆ ತಂದಿದೆ.

ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟು ಮಾತ್ರ ವರ್ಕೌಟ್ ಮಾಡಬೇಕು. ಆದರೆ, ಸಮಂತಾ ಅಗತ್ಯಕ್ಕಿಂತಲೂ ಹೆಚ್ಚಿನ ವರ್ಕೌಟ್ ಮಾಡಿದ್ದರು. ಮಾನಸಿಕ ಸಮಸ್ಯೆಗಳಿಂದ ರಿಲೀಫ್ ಪಡೆಯಲು ಕೆಲವರು ಜಿಮ್​ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಈ ರೀತಿ ಹೆಚ್ಚು ವರ್ಕೌಟ್ ಮಾಡಿದ ನಂತರ ಬ್ರೇಕ್ ಆದ ಸ್ನಾಯುಗಳು ಸೂಕ್ತ ರೀತಿಯಲ್ಲಿ ರಿಕವರಿ ಆಗದೆ ಇದ್ದರೆ Myositis ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸಮಂತಾರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಲು ಅತಿಯಾದ ವರ್ಕೌಟ್ ಕಾರಣ ಎಂದು ಹಲವು ಕಡೆಗಳಲ್ಲಿ ವರದಿ ಆಗಿದೆ.

ಸಮಂತಾಗೆ ಚರ್ಮದ ತೊಂದರೆ ಆಗಿದೆ ಎಂದು ಕೆಲವು ಕಡೆಗಳಲ್ಲಿ ವರದಿ ಆಗಿತ್ತು. ಇದು ಕೂಡ ನಿಜ ಎನ್ನಲಾಗುತ್ತಿದೆ. ಅವರು ತಮ್ಮ ಮುಖದ ಫೋಟೋ ಹಾಕದೆ ಹಲವು ತಿಂಗಳುಗಳೇ ಕಳೆದಿವೆ. ಸಮಂತಾ ಇತ್ತೀಚೆಗೆ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಳ್ಳುವಾಗ ಮುಖದ ಫೋಟೋ ಹಾಕಿರಲಿಲ್ಲ. ಸಮಂತಾ ಮುಖ ಕಾಣದೆ ಇರುವ ರೀತಿಯಲ್ಲಿ ಫೋಟೋ ಹಾಕಿದ್ದಕ್ಕೆ ಚರ್ಮದ ಸಮಸ್ಯೆ ಕೂಡ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ: ಅಪರೂಪದ ಕಾಯಿಲೆಗೆ ತುತ್ತಾದ ನಟಿ ಸಮಂತಾ; ಇದರಿಂದ ಆಗುವ ತೊಂದರೆಗಳೇನು?

ಇದನ್ನೂ ಓದಿ

ಸಮಂತಾ ಬೇಗ ಚೇತರಿಕೆ ಕಾಣಲಿ ಎಂದು ಎಲ್ಲರೂ ಕೋರುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಸಮಂತಾ ಅವರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿ ಪೋಸ್ಟ್ ಮಾಡುತ್ತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada