ತಂದೆ-ತಾಯಿ ವಿರುದ್ಧವೇ ಕೋರ್ಟ್​ ಮೆಟ್ಟಿಲೇರಿದ ನಟ ದಳಪತಿ ವಿಜಯ್; ಇದು ಸರಿ ಇದೆ ಎಂದ ಫ್ಯಾನ್ಸ್​​

ವಿಜಯ್​ ತಂದೆ ಖ್ಯಾತ ನಿರ್ದೇಶಕ ಎಸ್​.ಎ. ಚಂದ್ರಶೇಖರ್​. ಅವರು ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅವರು ‘ಆಲ್​ ಇಂಡಿಯಾ ದಳಪತಿ ವಿಜಯ್​ ಮಕ್ಕಳ್​ ಇಯಕ್ಕಮ್​’ ಪಕ್ಷ ಆರಂಭಿಸಿದ್ದರು.

ತಂದೆ-ತಾಯಿ ವಿರುದ್ಧವೇ ಕೋರ್ಟ್​ ಮೆಟ್ಟಿಲೇರಿದ ನಟ ದಳಪತಿ ವಿಜಯ್; ಇದು ಸರಿ ಇದೆ ಎಂದ ಫ್ಯಾನ್ಸ್​​
ದಳಪತಿ ವಿಜಯ್
Edited By:

Updated on: Sep 19, 2021 | 4:50 PM

ದಳಪತಿ ವಿಜಯ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಿನಿಮಾ ರಿಲೀಸ್​ ಆದರೆ ನೋಡೋಕೆ ಅಭಿಮಾನಿಗಳು ಮುಗಿ ಬೀಳುತ್ತಾರೆ. ಆದರೆ, ಈಗ ಅವರು ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ. ದಳಪತಿ ವಿಜಯ್​ ತಮ್ಮ ತಂದೆ ತಾಯಿ ಸೇರಿ 11 ಜನರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಸದ್ಯ, ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ವಿಜಯ್​ ನಡೆಯನ್ನು ಫ್ಯಾನ್ಸ್​ ಬೆಂಬಲಿಸಿದ್ದಾರೆ.

ವಿಜಯ್​ ತಂದೆ ಖ್ಯಾತ ನಿರ್ದೇಶಕ ಎಸ್​.ಎ. ಚಂದ್ರಶೇಖರ್​. ಅವರು ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅವರು ‘ಆಲ್​ ಇಂಡಿಯಾ ದಳಪತಿ ವಿಜಯ್​ ಮಕ್ಕಳ್​ ಇಯಕ್ಕಮ್​’ ಪಕ್ಷ ಆರಂಭಿಸಿದ್ದರು. ಆದರೆ, ಅದು ವಿಜಯ್​ಗೆ ಇಷ್ಟವಿಲ್ಲ. ಈ ಕಾರಣಕ್ಕೆ ರಾಜಕೀಯದಲ್ಲಿ ತಮ್ಮ ಮತ್ತು ತಮ್ಮ ಫ್ಯಾನ್​ ಕ್ಲಬ್​ನ ಹೆಸರು ಬಳಕೆ ಮಾಡದಂತೆ ತಡೆಕೋರಬೇಕು ಎಂದು ವಿಜಯ್​ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.

‘ಆಲ್​ ಇಂಡಿಯಾ ದಳಪತಿ ವಿಜಯ್​ ಮಕ್ಕಳ್​ ಇಯಕ್ಕಮ್​’ ಪಕ್ಷಕ್ಕೆ ಚಂದ್ರಶೇಖರ್​ ಪ್ರಧಾನ ಕಾರ್ಯದರ್ಶಿ. ಅವರ ತಾಯಿ ಶೋಭಾ ಚಂದ್ರಶೇಖರ್​ ಖಜಾಂಚಿ. ಪದ್ಮನಾಭನ್​ ಪಕ್ಷದ ನಾಯಕ. ಕಳೆದ ವರ್ಷ ವಿಜಯ್​ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಅವರು ಇದೇ ಪಕ್ಷ ಸೇರ್ಪಡೆ ಆಗುತ್ತಾರೆ ಎನ್ನುವ ಮಾತೂ ಹರಿದಾಡಿತ್ತು. ಈ ಮೂಲಕ 2021ರ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ತಂದೆಯ ರಾಜಕೀಯ ಪಕ್ಷಕ್ಕೆ ತಮ್ಮ ಯಾವುದೇ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

‘ನನ್ನ ತಂದೆ ನೀಡಿರುವ ರಾಜಕೀಯ ಹೇಳಿಕೆಗಳೊಂದಿಗೆ ನನಗೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಸಂಬಂಧವಿಲ್ಲ’ ಎಂದು ವಿಜಯ್​ ಹೇಳಿದ್ದರು. ಪಕ್ಷಕ್ಕೆ ವಿಜಯ್​ ಹೆಸರಿದೆ ಎಂಬ ಕಾರಣಕ್ಕೆ ಅವರ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಆಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ವಿಜಯ್​ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

ಸಿನಿಮಾ ಬಗ್ಗೆ ಹೇಳೋದಾದರೆ, ವಿಜಯ್​ 65ನೇ ಚಿತ್ರಕ್ಕೆ ‘ಬೀಸ್ಟ್’ ಎಂದು ಹೆಸರಿಡಲಾಗಿದೆ. ಹೆಸರಿಗೆ ತಕ್ಕಂತೆ ಇತ್ತೀಚೆಗೆ ಫಸ್ಟ್​ ಲುಕ್​ ರಿಲೀಸ್​ ಆಗಿತ್ತು.  ಪೂಜಾ ಹೆಗ್ಡೆ ಈ ಸಿನಿಮಾದ ನಾಯಕಿ. ಅವರು ಇದೇ ಮೊದಲ ಬಾರಿಗೆ ವಿಜಯ್​ಗೆ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ನೆಲ್ಸನ್​ ದಿಲೀಪ್​ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ಸನ್​ ಪಿಕ್ಚರ್ಸ್​ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಸಮಂತಾ ಅಕ್ಕಿನೇನಿ ತೆರಳಿದ್ದೇಕೆ? ಇದರ ಹಿಂದಿದೆ ಅಚ್ಚರಿಯ ಕಾರಣ

‘ಮಗಳೆಂದು ಕಲ್ಪಿಸಿಕೊಂಡವಳ ಜೊತೆ ಅಂಥ ಕೆಲಸ ಮಾಡಲ್ಲ’; ಕೃತಿ ಶೆಟ್ಟಿ ಬಗ್ಗೆ ವಿಜಯ್​ ಸೇತುಪತಿ ಖಡಕ್​ ನಿರ್ಧಾರ