ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಸಮಂತಾ ಅಕ್ಕಿನೇನಿ ತೆರಳಿದ್ದೇಕೆ? ಇದರ ಹಿಂದಿದೆ ಅಚ್ಚರಿಯ ಕಾರಣ

ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯ ಸಂಸಾರದಲ್ಲಿ ಬಿರುಕು ಮೂಡಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಇದನ್ನು ಅನೇಕ ಮಾಧ್ಯಮಗಳು ವೈಭವೀಕರಿಸಿವೆ. ಇದು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತಿಲ್ಲ.

ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಸಮಂತಾ ಅಕ್ಕಿನೇನಿ ತೆರಳಿದ್ದೇಕೆ? ಇದರ ಹಿಂದಿದೆ ಅಚ್ಚರಿಯ ಕಾರಣ
ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಸಮಂತಾ ಅಕ್ಕಿನೇನಿ ತೆರಳಿದ್ದೇಕೆ? ಇದರ ಹಿಂದಿದೆ ಅಚ್ಚರಿಯ ಕಾರಣ
TV9kannada Web Team

| Edited By: Rajesh Duggumane

Sep 19, 2021 | 1:49 PM

ಸಮಂತಾ ಅಕ್ಕಿನೇನಿ ಶನಿವಾರ (ಸೆಪ್ಟೆಂಬರ್​ 18) ಮುಂಜಾನೆ ತಿರುಪತಿಯಲ್ಲಿ ಕಾಣಿಸಿಕೊಂಡಿದ್ದರು. ತಿರುಪತಿಯ ತಿಮ್ಮಪ್ಪನ ಸನ್ನಿಧಿಯಲ್ಲಿ ಕೆಲ ಕಾಲ ಸಮಯ ಕಳೆದು ಬಂದಿದ್ದರು. ದೇವರ ದರ್ಶನ ಪಡೆದ ನಂತರ ಅವರನ್ನು ನೋಡೋಕೆ ಅಭಿಮಾನಿಗಳ ದೊಡ್ಡ ದಂಡೇ ನೆರೆದಿತ್ತು. ಸಮಂತಾ ತಿರುಪತಿಗೆ ತೆರಳಿದ್ದೇಕೆ ಎನ್ನುವ ಪ್ರಶ್ನೆ ಅನೇಕರಿಗೆ ಕಾಡಿತ್ತು. ಇದಕ್ಕೆ ಅಭಿಮಾನಿಗಳು ಉತ್ತರ ಹುಡುಕಿ ತಂದಿದ್ದಾರೆ.

ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯ ಸಂಸಾರದಲ್ಲಿ ಬಿರುಕು ಮೂಡಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಇದನ್ನು ಅನೇಕ ಮಾಧ್ಯಮಗಳು ವೈಭವೀಕರಿಸಿವೆ. ಇದು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತಿಲ್ಲ. ಹೀಗಾಗಿ, ಸಮಂತಾ ಬಗ್ಗೆ ಪಾಸಿಟಿವ್​ ಆಗಿ ಇರುವಂತೆ ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ. ಈಗ ಕೇಳಿ ಬರುತ್ತಿರುವ ಲೇಟೆಸ್ಟ್​ ವಿಚಾರ ಎಂದರೆ, ಸಮಂತಾ ತಿರುಪತಿಗೆ ತೆರಳಿದ್ದು ನಾಗ ಚೈತನ್ಯ ಅವರಿಗೋಸ್ಕರ.

ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ ‘ಲವ್​ ಸ್ಟೋರಿ’ ಸಿನಿಮಾ ಸೆಪ್ಟೆಂಬರ್ 24ರಂದು ತೆರೆಗೆ ಬರುತ್ತಿದೆ. ಕೊವಿಡ್​ ಕಾರಣಕ್ಕೆ ಅನೇಕ ಕಡೆಗಳಲ್ಲಿ ಇನ್ನೂ ಚಿತ್ರಮಂದಿರ ಪೂರ್ತಿಯಾಗಿ ಓಪನ್​ ಆಗಿಲ್ಲ. ಆದಾಗ್ಯೂ ಸಿನಿಮಾ ರಿಲೀಸ್​ ಮಾಡುವ ಸಾಹಸಕ್ಕೆ ‘ಲವ್​ ಸ್ಟೋರಿ’ ನಿರ್ಮಾಪಕರು ಮುಂದಾಗಿದ್ದಾರೆ. ಅಕ್ಷಯ್​ ಕುಮಾರ್​ ನಟನೆಯ ‘ಬೆಲ್​ ಬಾಟಮ್​​’ನಂಥ ದೊಡ್ಡ ಸಿನಿಮಾಗಳು ಬಾಕ್ಸ್​ ಆಫೀಸ್​ ಕಲೆಕ್ಷನ್​ನಲ್ಲಿ ಹೀನಾಯವಾಗಿ ಸೋಲು ಕಂಡಿವೆ. ಇದರ ನಡುವೆಯೂ ‘ಲವ್​ ಸ್ಟೋರಿ’ ಸಿನಿಮಾ ಅಗ್ನಿ ಪರೀಕ್ಷೆ ಎದುರಿಸಲು ಮುಂದಾಗಿದೆ. ಪತಿಯ ಸಿನಿಮಾ ಗೆಲುವು ಕಾಣಲಿ ಎಂದು ಸಮಂತಾ ಅವರು ತಿರುಪತಿಗೆ ತೆರಳಿದ್ದರು ಎಂದು ಫ್ಯಾನ್ಸ್​ ಹೇಳುತ್ತಿದ್ದಾರೆ.

‘ಈ ಹಿಂದೆ ಕೂಡ ನಾಗ ಚೈತನ್ಯ ಸಿನಿಮಾ ತೆರೆಗೆ ಬರುವುದಕ್ಕೂ ಮೊದಲು ಸಮಂತಾ ತಿರುಪತಿಗೆ ತೆರಳಿದ್ದರು. ಈಗಲೂ ಕೂಡ ಅವರು ಅದನ್ನೇ ಮುಂದುವರಿಸಿದ್ದಾರೆ. ಇಷ್ಟಾದಮೇಲೂ ನಾಗ ಚೈತನ್ಯ-ಸಮಂತಾ ಕುಟುಂಬದ ಬಗ್ಗೆ ಅನುಮಾನ ಪಡೋಕೆ ಏನೂ ಉಳಿದಿಲ್ಲ. ಈ ಬಗ್ಗೆ ಯಾವುದೇ ವದಂತಿ ನಂಬಬೇಡಿ’ ಎಂದು ಸಮಂತಾ ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ.

ತಿರುಪತಿ ದೇವಸ್ಥಾನಕ್ಕೆ ಸಮಂತಾ ತೆರಳಿದ್ದಾಗ ಅವರ ಸಂಸಾರದ ಬಗ್ಗೆ ಮಾಧ್ಯಮದವರಿಂದ ಪ್ರಶ್ನೆ ಬಂದಿತ್ತು. ಇದಕ್ಕೆ ಸಿಟ್ಟಾಗಿದ್ದ ಅವರು, ಬೈದಿದ್ದರು. ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.

ಇದನ್ನೂ ಓದಿ: ಸಮಂತಾ-ನಾಗ ಚೈತನ್ಯ ಫ್ಯಾಮಿಲಿಯ ಇನ್ನೊಂದು ಗುಟ್ಟು ಬಯಲು; ಮಗನ ಸಿನಿಮಾಗೆ ನಾಗಾರ್ಜುನ ತಲೆ ಹಾಕುತ್ತಿಲ್ಲ

ದೇವಸ್ಥಾನದಲ್ಲೂ ಡಿವೋರ್ಸ್​ ವಿಚಾರ; ಸಿಟ್ಟಾದ ಸಮಂತಾ ರಿಯಾಕ್ಷನ್​ ನೋಡಿ ಚಪ್ಪಾಳೆ ಹೊಡೆದ ಅಭಿಮಾನಿಗಳು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada