Holi 2024: ಹೋಳಿ ಸಂಭ್ರಮಾಚರಣೆ: ಬಣ್ಣದ ವಿಶೇಷತೆ ಬಣ್ಣಿಸುವ ಹಾಡುಗಳಿವು..
ಸಿನಿಮಾಗಳಲ್ಲಿ ಹೋಳಿಯನ್ನು ಪ್ರತಿನಿಧಿಸುವ ಅನೇಕ ಹಾಡುಗಳು ಬಂದು ಹೋಗಿವೆ. ಈ ಹಾಡುಗಳು ಹೋಳಿಯ ವಿಶೇಷತೆ, ಅವುಗಳ ಆಚರಣೆಯ ಹಿಂದಿನ ಕಾರಣವನ್ನು ವಿವರಿಸಿದೆ. ಈ ರೀತಿ ಬಂದು ಹೋದ ಹಾಡುಗಳು ಯಾವವು? ಈ ಹಾಡು ಯಾವ ಸಿನಿಮಾದ್ದು? ಆ ಚಿತ್ರದಲ್ಲಿ ನಟಿಸಿದ್ದು ಯಾರು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಹೋಳಿ (Holi 2024) ಆಚರಣೆ ರಾಜ್ಯಾದ್ಯಂತ ಜೋರಾಗಿದೆ. ಬಣ್ಣದ ಓಕುಳಿಯಲ್ಲಿ ಎಲ್ಲರೂ ಮಿಂದೇಳುತ್ತಿದ್ದಾರೆ. ಸಾಮಾನ್ಯರಿಂದ ಸೆಲೆಬ್ರಿಟಿವರೆಗೆ ಈ ಹಾಡು ವಿಶೇಷ ಎನಿಸಿಕೊಂಡಿದೆ. ಸಿನಿಮಾ ರಂಗಕ್ಕೂ ಹೋಳಿಗೂ ಒಂದು ನಂಟಿದೆ. ಅನೇಕ ಸಿನಿಮಾಗಳಲ್ಲಿ ಹೋಳಿಯನ್ನು ಪ್ರತಿನಿಧಿಸುವ ಅನೇಕ ಹಾಡುಗಳು ಬಂದು ಹೋಗಿವೆ. ಈ ಹಾಡುಗಳು ಹೋಳಿಯ ವಿಶೇಷತೆ, ಅವುಗಳ ಆಚರಣೆಯ ಹಿಂದಿನ ಕಾರಣವನ್ನು ವಿವರಿಸಿದೆ. ಈ ರೀತಿ ಬಂದು ಹೋದ ಹಾಡುಗಳು ಯಾವವು? ಈ ಹಾಡು ಯಾವ ಸಿನಿಮಾದ್ದು? ಆ ಚಿತ್ರದಲ್ಲಿ ನಟಿಸಿದ್ದು ಯಾರು ಎನ್ನುವ ಬಗ್ಗೆ ಇಲ್ಲಿದೆ ವಿವರ.
‘ಹೋಳಿ ಹೋಳಿ..’
2000ನೇ ಇಸ್ವಿಯಲ್ಲಿ ರಿಲೀಸ್ ಆದ ‘ಪ್ರೀತ್ಸೆ’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಹಾಗೂ ಉಪೇಂದ್ರ ಒಟ್ಟಾಗಿ ನಟಿಸಿದ್ದರು. ರಾಕ್ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾದ ‘ಹೋಳಿ ಹೋಳಿ..’ ಹಾಡು ಗಮನ ಸೆಳೆದಿದೆ. ಹೋಳಿ ವಿಶೇಷತೆಯನ್ನು ಈ ಹಾಡು ವಿವರಿಸಿದೆ.
‘ರಂಗಿನ ರಂಗು..’
ದರ್ಶನ್ ನಟನೆಯ ‘ಕಿಟ್ಟಿ ಸಿನಿಮಾ 2002ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ದರ್ಶನ್, ಭವ್ಯಾ, ಅವಿನಾಶ್ ಮೊದಲಾದವರು ನಟಿಸಿದ್ದರು. ಈ ಸಿನಿಮಾದ ‘ರಂಗಿನ ರಂಗು..’ ಹಾಡು ಗಮನ ಸೆಳೆದಿದೆ. ಹೋಳಿ ಆಚರಣೆಯ ವಿಶೇಷತೆಯನ್ನು ಈ ಹಾಡು ಹೇಳಿದೆ.
ಹೋಳಿ ಹುಣ್ಣಿಮೆ ಹಬ್ಬಕ್ಕ
‘ದೇಸಾಯಿ’ ಸಿನಿಮಾದಲ್ಲಿ ಬರುವ ‘ಹೋಳಿ ಹುಣ್ಣಿಮೆ ಹಬ್ಬಕ್ಕ..’ ಹಾಡು ಮೆಚ್ಚುಗೆ ಪಡೆದಿದೆ. ಹೋಳಿ ಹುಣ್ಣಿಮೆಯ ವಿಶೇಷತೆಗಳನ್ನು ಈ ಹಾಡು ಬಣ್ಣಿಸಿದೆ. ಹಬ್ಬದ ಆಚರಣೆಯ ಹಿನ್ನೆಲೆಯನ್ನು ವಿವರಿಸಲಾಗಿದೆ.
ರಂಗೇರೋ ಹೋಳಿ
ರವಿಚಂದ್ರನ್ ನಟನೆಯ ‘ಪುಟ್ನಂಜ’ ಸಿನಿಮಾದ ‘ರಂಗೇರೋ ಹೋಳಿ..’ ಕೇಳುಗರಿಂದ ಮೆಚ್ಚುಗೆ ಪಡೆದಿದೆ. ಈ ಹಾಡು ಸಖತ್ ರೊಮ್ಯಾಂಟಿಕ್ ಆಗಿ ಮೂಡಿ ಬಂದಿದೆ. ಬಣ್ಣದ ವಿಶೇಷತೆಯನ್ನು ಬಣ್ಣಿಸುವ ರೀತಿಯಲ್ಲಿ ಈ ಹಾಡು ಇದೆ.
‘ಉಗ್ರಂ ವೀರಂ..’
ಶ್ರೀಮುರಳಿ ನಟನೆಯ ‘ಉಗ್ರಂ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ‘ಉಗ್ರಂ ವೀರಂ’ ಹಾಡು ಹೋಳಿ ಹಿನ್ನೆಲೆಯಲ್ಲಿ ಮೂಡಿ ಬಂದಿದೆ. ಮುಗೋರ್ನಲ್ಲಿ ನಡೆಯುವ ಹೋಳಿ ಆಚರಣೆಯನ್ನು ವಿವರಿಸುವ ರೀತಿಯಲ್ಲಿ ಈ ಹಾಡು ಮೂಡಿ ಬಂದಿತ್ತು. ಹಾಡಿನುದ್ದಕ್ಕೂ ಬಣ್ಣ-ರಕ್ತವನ್ನು ತೋರಿಸಲಾಗಿದೆ.
ಬಣ್ಣ ನನ್ನ ಒಲವಿನ ಬಣ್ಣ
‘ಬಂಧನ’ ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ಸುಹಾಸಿನಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರದ ‘ಬಣ್ಣ ನನ್ನ ಒಲವಿನ ಬಣ್ಣ’ ಫೇಮಸ್ ಆಗಿದೆ. ಇದು ಹೋಳಿ ಗೀತೆ ಅಲ್ಲ. ಆದರೆ, ಬಣ್ಣದ ವಿಶೇಷತೆಯನ್ನು ಒಲವಿಗೆ ಸಂಪರ್ಕಿಸಿ ಮಾಡಿದ ಹಾಡು ಇದಾಗಿದೆ. ಹೋಳಿ ಸಂದರ್ಭದಲ್ಲಿ ಜನರು ಈ ಹಾಡನ್ನು ನೆನಪಿಸಿಕೊಳ್ಳುತ್ತಾರೆ.
ರಂಗ್ ಬರ್ಸೆ
ಹಿಂದಿಯ ‘ರಂಗ್ ಬರ್ಸೆ’ ಹಾಡು ಸಾಕಷ್ಟು ಗಮನ ಸೆಳೆದಿದೆ. ಅಮಿತಾಭ್ ಬಚ್ಚನ್ ನಟನೆಯ ‘ಸಿಲ್ಸಿಲಾ’ ಚಿತ್ರದ ಈ ಹಾಡು ಈಗಲೂ ಕೇಳುಗರ ಫೇವರಿಟ್ ಎನಿಸಿಕೊಂಡಿದೆ.
ಬಲಮ್ ಪಿಚಕಾರಿ
ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಬಲಮ್ ಪಿಚಕಾರಿ’ ಹಾಡು ಸೂಪರ್ ಹಿಟ್ ಎನಿಸಿಕೊಂಡಿದೆ. ‘ಯೇ ಜವಾನಿ ಹೇ ದಿವಾನಿ’ ಸಿನಿಮಾದ ಈ ಹಾಡು ಭರ್ಜರಿ ಮೆಚ್ಚುಗೆ ಪಡೆದಿದೆ. ಹೋಳಿ ಆಚರಣೆಯ ಖುಷಿ ಹೇಗಿರುತ್ತದೆ ಎಂಬುದನ್ನು ಈ ಹಾಡು ತೋರಿಸಿದೆ.
ಇದನ್ನೂ ಓದಿ: ಮೆಟ್ರೋದಲ್ಲಿ ಯುವತಿಯರಿಬ್ಬರ ಹೋಳಿ ಆಚರಣೆ; ಅಸಭ್ಯ ವರ್ತನೆಗೆ ಪ್ರಯಾಣಿಕರು ಕಿಡಿ
ಜೈ ಜೈ ಶಿವ ಶಂಕರ್
ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಅವರು ‘ವಾರ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರದ ‘ಜೈ ಜೈ ಶಿವಶಂಕರ್’ ಸಿನಿಮಾ ಹಾಡು ಸಾಕಷ್ಟು ಗಮನ ಸೆಳೆದಿದೆ. ಈ ಹಾಡು ಸೂಪರ್ ಹಿಟ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:10 am, Mon, 25 March 24