ಗೆಲುವಿಗಾಗಿ ನಾನಾ ಪರದಾಟ, ಹಾಲಿವುಡ್ ನಟನ ಕರೆತಂದ ವಿಜಯ್ ದೇವರಕೊಂಡ
Vijay Deverakonda: ವಿಜಯ್ ದೇವರಕೊಂಡ ನಟಿಸಿದ್ದ ‘ಲೈಗರ್’ ಸಿನಿಮಾನಲ್ಲಿ ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ನಟಿಸಿದ್ದರು. ಆದರೆ ಆ ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ಇದೀಗ ವಿಜಯ್ ದೇವರಕೊಂಡ ನಟಿಸಲಿರುವ ಹೊಸ ಸಿನಿಮಾನಲ್ಲಿ ಖ್ಯಾತ ಹಾಲಿವುಡ್ ನಟರೊಬ್ಬರು ನಟಿಸಲಿದ್ದಾರೆ. ಹಾಲಿವುಡ್ ನಟನಿಂದಾದರೂ ವಿಜಯ್ ಸಿನಿಮಾಕ್ಕೆ ಯಶಸ್ಸು ಸಿಗುತ್ತದೆಯಾ?

ವಿಜಯ್ ದೇವರಕೊಂಡ (Vijay Deverakonda) ‘ಅರ್ಜುನ್ ರೆಡ್ಡಿ’ ಸಿನಿಮಾ ಮೂಲಕ ಹಠಾತ್ತನೇ ಸ್ಟಾರ್ ಗಿರಿಗೆ ಏರಿದರು. ಅದರ ಬಳಿಕ ಬಂದ ‘ಗೀತ ಗೋವಿಂದಂ’ ಸಿನಿಮಾ ಬಿಟ್ಟರೆ ಇನ್ನೊಂದು ಸಿನಿಮಾ ಸಹ ಗೆದ್ದಿಲ್ಲ. ವಿಜಯ್ ದೇವರಕೊಂಡ ಸಿನಿಮಾ ಗೆಲುವು ಕಂಡು ಏಳು ವರ್ಷಗಳಾಗಿವೆ. ಈ ಏಳು ವರ್ಷಗಳಲ್ಲಿ ಒಂದೂ ಸಿನಿಮಾ ಗೆದ್ದಿಲ್ಲ. ಗೆಲುವಿಗಾಗಿ ನಾನಾ ಪ್ರಯತ್ನಗಳನ್ನು ಮಾಡುವುದನ್ನು ಸಹ ವಿಜಯ್ ದೆವರಕೊಂಡ ನಿಲ್ಲಿಸಿಲ್ಲ. ಇದೀಗ ವಿಜಯ್ ದೇವರಕೊಂಡ ಸಿನಿಮಾಕ್ಕೆ ಹಾಲಿವುಡ್ನ ಖ್ಯಾತ ವಿಲನ್ ಅನ್ನು ಕರೆತರಾಗುತ್ತಿದೆ.
ವಿಜಯ್ ದೇವರಕೊಂಡ ನಟಿಸಿದ್ದ ಭಾರಿ ನಿರೀಕ್ಷೆ ಹುಟ್ಟಿಸಿದ್ದ ‘ಲೈಗರ್’ ಸಿನಿಮಾನಲ್ಲಿ ಖ್ಯಾತ ಬಾಕ್ಸರ್ ಮೈಕ್ ಟೈಸನ್ ಅವರನ್ನು ಕರೆತಲಾಗಿತ್ತು. ಕೆಲ ನಿಮಿಷಗಳ ದೃಶ್ಯಕ್ಕಾಗಿ ಮೈಕ್ ಟೈಸನ್ ಅವರಿಗೆ ಭಾರಿ ಸಂಭಾವನೆಯನ್ನೂ ಸಹ ನೀಡಲಾಗಿತ್ತು. ಆದರೆ ಸಿನಿಮಾ ಇನ್ನಿಲ್ಲದಂತೆ ಸೋತಿತು. ಆ ಸೋಲಿನಿಂದ ಕೆಲವರ ಬದುಕೇ ಉಲ್ಟಾ ಆಯ್ತು. ಆದರೆ ಈಗ ವಿಜಯ್ ದೇವರಕೊಂಡ ಅವರ ಹೊಸ ಸಿನಿಮಾಕ್ಕೆ ಖ್ಯಾತ ಹಾಲಿವುಡ್ ವಿಲನ್ ಅನ್ನು ಕರೆತರಲಾಗುತ್ತಿದೆ.
ವಿಜಯ್ ದೇವರಕೊಂಡ ಮುಂದಿನ ಸಿನಿಮಾ ಅನ್ನು ರಾಹುಲ್ ಸಾಂಕೃತ್ಯಾಯನ ಅವರು ನಿರ್ದೇಶನ ಮಾಡಲಿದ್ದಾರೆ. ಇದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರಲಿದ್ದು, ಈ ಸಿನಿಮಾಕ್ಕೆ ಹಾಲಿವುಡ್ ವಿಲನ್ ಅನ್ನು ಕರೆತರುತ್ತಿದ್ದಾರೆ. ಹಾಲಿವುಡ್ನ ಕಲ್ಟ್ ಅಡ್ವೇಂಚರ್ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದಾಗಿರುವ ‘ಮಮ್ಮಿ’ ಸಿನಿಮಾ ಸರಣಿಯ ವಿಲನ್ ಆಗಿರುವ ಅರ್ನಾಲ್ಡ್ ವೊಸ್ಲೂ ಅವರು ವಿಜಯ್ ದೇವರಕೊಂಡ ಎದುರು ವಿಲನ್ ಆಗಿ ನಟಿಸಲಿದ್ದಾರೆ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಜೈಪುರದಲ್ಲಿ?
ಅರ್ನಾಲ್ಡ್ ವೊಸ್ಲೂ ಅವರು ‘ಮಮ್ಮಿ’ ಮಾತ್ರವೇ ಅಲ್ಲದೆ ಹಾಲಿವುಡ್ನ ಬಲು ಜನಪ್ರಿಯ ಸಿನಿಮಾಗಳಾದ, ‘ಡಾರ್ಕ್ ಮ್ಯಾನ್’, ‘ಏಜೆಂಟ್ ಕೋಡಿ ಬ್ಯಾಂಕ್’, ‘ಬ್ಲಡ್ ಡೈಮಂಡ್’, ‘ಒಡೆಸ್ಸಿಸ್’, ‘ಫೈರ್ ಆಂಡ್ ಐಸ್’, ‘ಜಿಐ ಜೋ’, ‘ಸೂಪರ್ಮ್ಯಾನ್’, ‘ಸಿಲ್ವರ್ಟಾನ್ ಸೀಜ್’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದು ಅವರ ಪಾಲಿಗೆ ಮೊದಲ ಭಾರತದ ಸಿನಿಮಾ ಆಗಲಿದೆ. ಆದರೆ ವಿಜಯ್ ಅಭಿಮಾನಿಗಳು, ‘ಲೈಗರ್’ ಸಿನಿಮಾಕ್ಕೆ ಮೈಕ್ ಟೈಸನ್ ಇಂದಾಗಿ ಯಾವುದೇ ಹೆಚ್ಚುವರಿ ಮೌಲ್ಯ ಬಂದಿರಲಿಲ್ಲ. ಈಗ ಹಾಲಿವುಡ್ ವಿಲನ್ ತಂದರೂ ಅದೇ ಕತೆಯೇ ಆಗಲಿದೆ ಎಂದಿದ್ದಾರೆ.
ಇನ್ನು ಸಿನಿಮಾ ನಿರ್ದೇಶಿಸುತ್ತಿರುವ ರಾಹುಲ್ ಸಾಂಕೃತ್ಯಾಯನ ಅವರು ಈ ಹಿಂದೆ ನಾನಿ ನಟನೆಯ ಸೂಪರ್ ಹಿಟ್ ಸಿನಿಮಾ ‘ಶ್ಯಾಮ ಸಿಂಘ ರಾಯ್’ ಸಿನಿಮಾ ನಿರ್ದೇಶಿಸಿದ್ದಾರೆ. ವಿಜಯ್ ದೇವರಕೊಂಡ ನಟಿಸಿರುವ ‘ಟ್ಯಾಕ್ಸಿವಾಲ’ ಸಿನಿಮಾ ಸಹ ನಿರ್ದೇಶಿಸಿದ್ದರು. ಆದರೆ ಆ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು. ಈಗ ವಿಜಯ್ ಅವರು ರಾಹುಲ್ಗೆ ಮತ್ತೊಂದು ಅವಕಾಶ ನೀಡಿದ್ದಾರೆ. ವಿಜಯ್ ಅವರು ‘ಗೀತ ಗೋವಿಂದಂ 2’ ಸಿನಿಮಾ ಸಹ ಪ್ರಾರಂಭ ಮಾಡುತ್ತಿದ್ದು, ಆ ಸಿನಿಮಾನಲ್ಲಿ ಹಲವು ವರ್ಷಗಳ ಬಳಿಕ ವಿಜಯ್ ಮತ್ತು ರಶ್ಮಿಕಾ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:05 am, Thu, 27 November 25




